Jagadish Shettar: ಬಿಜೆಪಿಯವರು ಹೇಳಿದಂತೆ ಕೇಳೋಕೆ ನಾನೇನು ಚಿಕ್ಕ ಹುಡುಗನಾ?: ಜಗದೀಶ್‌ ಶೆಟ್ಟರ್‌ ಕೆಂಡಾಮಂಡಲ

ಹುಬ್ಬಳ್ಳಿ, ಏಪ್ರಿಲ್‌, 17: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಜಿಲ್ಲಾಧ್ಯಕ್ಷರ ಮೂಲಕ ಒತ್ತಡ ಏರುತ್ತಿದ್ದಾರೆ. ಆದರೆ ಮುಂದೆ ಫ್ಲಡ್ ಗೇಟ್ ಓಪನ್ ಆದಂತಹ ಸ್ಥಿತಿ‌ ಬರಲಿದೆ. ಚುನಾಯಿತ ಪ್ರತಿನಿಧಿಗಳಿಗೆ ರಾಜೀನಾಮೆ ಕೊಡುವುದು ಬೇಡ ಅಂತಾ ಹೇಳಿದ್ದೇನೆ. ಹಾಗೆಯೇ ಬಿಜೆಪಿಯವರು ಹೇಳಿದಂತೆ ಕೇಳೋಕೆ ನಾನೇನು ಚಿಕ್ಕ ಹುಡುಗನಾ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ನಂತರ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್‌ನಲ್ಲಿ ಸರ್ವಾನುಮತದಿಂದ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಕರೆದ ಕಡೆ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ. ಬಿಜೆಪಿಯನ್ನು ಬೈದರೆ ಉದ್ಧಾರ ಆಗುತ್ತೇನಾ? ಸಂದರ್ಭ ಬಂದಾಗ ಟೀಕೆ ಮಾಡೇ ಮಾಡುತ್ತೇನೆ ಎಂದರು.

Jagadish Shettar outrage against BJP leaders in Hubballi

ನಾನೇನು ಚಿಕ್ಕ ಹುಡುಗನಾ?

ನಾನೇನು ಹೋಗಿ ಜೈಲಿನಲ್ಲಿ ಇರಲೇ? ಅಥವಾ ಜನರನ್ನು ದೂರ ಇಟ್ಟು ಬಂಗ್ಲೆಯಲ್ಲಿ ಇರಲೇ? ರಾಜ್ಯಸಭಾ ಸದಸ್ಯರಾಗುವುದನ್ನು ತಿರಸ್ಕರಿಸಿದ್ದೇನೆ. ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಅಂತಾ ಹೇಳಿಕೆ ಕೊಡಿ ಅಂದರು. ತಾವು ಕಳುಹಿಸಿದ ಪತ್ರಕ್ಕೆ ಸಹಿ ಹಾಕಿ ಕಳಿಸುವಂತೆಯೂ ಹೇಳಿದ್ದರು. ಅವರು ಹೇಳಿದಂತೆ ಕೇಳಲು ನಾನೇನು ಹುಡುಗನೇ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡ

Jagadish Shettar outrage against BJP leaders in Hubballi

ಈ ಬಾರಿ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಅವಕಾಶ ಇತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡ ಅನಿಸುತ್ತಿದೆ. ಹಾಗಾಗಿಯೇ ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡಿಕೊಡು ಬಂದಿದ್ದಾರೆ. ಕಳೆದ ಒಂದು ವರ್ಷದಿಂದಲೂ ಈ ಪಿತೂರಿ ನಡೆದಿದೆ ಎಂದು ಆರೋಪಿಸಿದರು.

ಶಿಲ್ಪಾ ಶೆಟ್ಟರ್ ಕಣ್ಣೀರು

ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಿದ ಜಗದೀಶ್ ಶೆಟ್ಟರ್‌ಗೆ, ಬಿಜೆಪಿಯಲ್ಲಿ ಬಾರಿ ಅಪಮಾನ ಮಾಡಲಾಗಿದೆ. ಇದರಿಂದ ನನಗೆ ಬಹಳ ನೋವುಂಟು ಮಾಡಿದೆ ಎಂದು ಪತ್ನಿ ಶಿಲ್ಪಾ ಶೆಟ್ಟರ್ ಹುಬ್ಬಳ್ಳಿಯಲ್ಲಿ ಕಣ್ಣೀರು ಹಾಕಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಂತೆ, ಈಗ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದ್ದು, ಪತ್ನಿ ಶಿಲ್ಪಾ ಶೆಟ್ಟರ್ ತಮ್ಮ ಪತಿ ಬಗ್ಗೆ ಮನದಾಳದ ಮಾತನ್ನಾಡಿದ್ದಾರೆ. ಸುಮಾರು ವರ್ಷಗಳಿಂದ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೇಳುವ ಪರಿಸ್ಥಿತಿ ಬಂದಿದ್ದು, ನನಗೆ ಬೇಸರವಾಗಿದೆ. ಇನ್ನು ಅದೆಷ್ಟು ದಿನ ಅವರಿಗೆ ಅಪಮಾನ ಮಾಡುತ್ತಾರೆ ಹೇಳಿ ಎಂದು ಅಳಲು ತೋಡಿಕೊಂಡರು.

ನಾನು ರಾಜಕೀಯ ಬಿಡುತ್ತೇನೆ ಎಂದು ಹೇಳಿದ್ದರು. ಅಂತಹ ಪರಿಸ್ಥಿತಿ ತರಲು ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದ್ದರಿಂದ ನಮ್ಮ ಯಜಮಾನರ ನಿರ್ಣಾಯಕ್ಕೆ ನಾನು ಬದ್ಧ ಎಂದು ಹೇಳುವ ಮೂಲಕ ಕಣ್ಣೀರು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+