ಹುಬ್ಬಳ್ಳಿಯಿಂದ ಕೊಲಂಬೋ, ದುಬೈಗೆ ವಿಮಾನ ಹಾರಾಟ
ಹುಬ್ಬಳ್ಳಿ, ಜೂನ್ 26 : ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ಮತ್ತಷ್ಟು ವಿಮಾನ ಹಾರಾಟ ಆರಂಭವಾಗಲಿದೆ.
ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಹಲವು ಕಂಪನಿಗಳು ಹುಬ್ಬಳ್ಳಿಯಿಂದ ವಿಮಾನ ಸೇವೆ ಒದಗಿಸುತ್ತಿವೆ.
ಜುಲೈ 1ರಿಂದ ಹುಬ್ಬಳ್ಳಿಯಿಂದ ಹಾರಾಟ ನಡೆಸುವ ವಿಮಾನಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಇಂಡಿಗೋ ದೇಶದ ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ಆರಂಭಿಸುತ್ತಿದೆ.

ಸ್ಪೈಸ್ ಜೆಟ್ ಹುಬ್ಬಳ್ಳಿಯಿಂದ ದೆಹಲಿ, ಕೊಲಂಬೋ ಮತ್ತು ದುಬೈಗೆ ವಿಮಾನ ಸೇವೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಸೇವೆಗಳು ಜುಲೈ 1ರ ಬಳಿಕ ಆರಂಭವಾಗುವ ನಿರೀಕ್ಷೆ ಇದೆ.
ಹುಬ್ಬಳ್ಳಿಯಿಂದ ಈಗಾಗಲೇ 7 ವಿಮಾನಗಳ ಹಾರಾಟಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. 5 ವಿಮಾನಗಳು ಈಗಾಗಲೇ ಹಾರಾಟವನ್ನು ನಡೆಸುತ್ತಿವೆ.
ಪ್ರಸ್ತುತ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈಗೆ ಈಗಾಗಲೇ ವಿಮಾನ ಹಾರಾಟ ನಡೆಯುತ್ತಿದೆ. ಜುಲೈನಲ್ಲಿ ಮತ್ತಷ್ಟು ವಿಮಾನಗಳು ಹಾರಾಟ ಆರಂಭವಾಗಲಿದೆ.












Click it and Unblock the Notifications