ಹುಬ್ಬಳ್ಳಿ-ಮುಂಬೈ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಇಂಡಿಗೋ

ಹುಬ್ಬಳ್ಳಿ, ಆಗಸ್ಟ್ 22: ಉತ್ತರ ಕರ್ನಾಟಕ ಭಾಗದ ವಿಮಾನ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಸಿಹಿಸುದ್ದಿಯನ್ನು ನೀಡಿದೆ. ಭಾರೀ ಬೇಡಿಕೆಯ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ಏರ್‌ ಬಸ್ ಓಡಿಸುವುದಾಗಿ ಘೋಷಣೆ ಮಾಡಲಾಗಿದೆ.

ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ಮಾರ್ಗದ ವಿಮಾನ ಸೇವೆಯಲ್ಲಿ ಬದಲಾವಣೆ ಮಾಡಲಿದೆ. ವಿಮಾನದ ಚಳಿಗಾಲದ ವೇಳಾಪಟ್ಟಿಯಲ್ಲಿ ಈ ಬದಲಾವಣೆ ಜಾರಿಗೆ ಬರಲಿದೆ.

indigo-hubballoi-mumbai-flight

ಅಕ್ಟೋಬರ್‌ನಿಂದ 29ರಿಂದ ಹುಬ್ಬಳ್ಳಿ-ಮುಂಬೈ ನಡುವೆ ಏರ್‌ಬಸ್ ಎ320 ವಿಮಾನ ಸಂಚಾರ ನಡೆಸಲಿದೆ. ಪ್ರಸ್ತುತ ಉಭಯ ನಗರಗಳ ನಡುವೆ 78 ಸೀಟುಗಳು ಎಟಿಆರ್ 72-600 ವಿಮಾನಗಳು ಸಂಚಾರ ನಡೆಸುತ್ತಿವೆ.

ವೆಬ್‌ಸೈಟ್‌ನಲ್ಲಿ ಮಾಹಿತಿ; ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ಏರ್‌ಬಸ್ ಎ320 ಓಡಿಸಲಾಗುತ್ತದೆ ಎಂದು ಇಂಡಿಗೋ ಸಂಸ್ಥೆ ಈಗಾಗಲೇ ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಿದೆ. ಈಗ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಈ ಮಾಹಿತಿ ಲಭ್ಯವಾಗುತ್ತಿದೆ.

ಹುಬ್ಬಳ್ಳಿ-ಮುಂಬೈ ಬಹು ಬೇಡಿಕೆಯ ಮಾರ್ಗವಾಗಿದೆ. ಕರ್ನಾಟಕದ ವಾಣಿಜ್ಯ ನಗರ, ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯನ್ನು ದೇಶದ ವಾಣಿಜ್ಯ ನಗರ ಮುಂಬೈ ಜೊತೆ ಬೆಸೆಯುವ ಮಾರ್ಗ ಇದಾಗಿದೆ. ಈ ಮಾರ್ಗಕ್ಕೆ ಭಾರೀ ಬೇಡಿಕೆ ಇದ್ದು, ಪ್ರಯಾಣಿಕರು ಮಾತ್ರವಲ್ಲ ಸರಕು ಸಾಗಣೆಗೂ ಬೇಡಿಕೆ ಹೆಚ್ಚಿದೆ.

ಮಾರ್ಗಕ್ಕಿರುವ ಬೇಡಿಕೆ ಪರಿಗಣಿಸಿ ಅಕ್ಟೋಬರ್‌ನಿಂದ 29ರಿಂದ ಹುಬ್ಬಳ್ಳಿ-ಮುಂಬೈ ನಡುವೆ ಏರ್‌ಬಸ್ ಎ320 ವಿಮಾನ ಸಂಚಾರ ನಡೆಸಲು ಇಂಡಿಗೋ ತೀರ್ಮಾನಿಸಿದೆ. ಈ ಮೂಲಕ ಹೆಚ್ಚಿನ ಜನರು ಉಭಯ ನಗರಗಳ ನಡುವೆ ಸಂಚಾರ ನಡೆಸಲು ವಿಮಾನಯಾನ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿರುವ ಇಂಡಿಗೋ ಸಂಸ್ಥೆಯ ಅಧಿಕಾರಗಳು ಸಹ ಇದನ್ನು ಖಚಿತಪಡಿಸಿದ್ದಾರೆ. ಚಳಿಗಾಲದ ವೇಳಾಪಟ್ಟಿ 2023ರಿಂದ ಹುಬ್ಭಳ್ಳಿ-ಮುಂಬೈ ಮಾರ್ಗದ ವಿಮಾನ ಸೇವೆ ಉನ್ನತೀಕರಣಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 29ರಿಂದ ಅನ್ವಯವಾಗುವಂತೆ ಮುಂಬೈ-ಹುಬ್ಬಳ್ಳಿ ನಡುವಿನ ವಿಮಾನ (6ಇ 936) ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2ರಿಂದ 11.55ಕ್ಕೆ ಹೊರಡಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1.05ಕ್ಕೆ ಆಗಮಿಸಲಿದೆ. ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ (6ಇ 937) ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 1.35ಕ್ಕೆ ಹೊರಡಲಿದೆ. ಮುಂಬೈಗೆ ಮಧ್ಯಾಹ್ನ 2.45ಕ್ಕೆ ತಲುಪಲಿದೆ.

ಚಳಿಗಾಲದಲ್ಲಿ ಇಂಡಿಗೋ ಸಂಸ್ಥೆ ಮತ್ತೊಂದು ಬಹು ಬೇಡಿಕೆಯ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆಯನ್ನು ಸಹ ಆರಂಭಿಸುವ ನಿರೀಕ್ಷೆ ಇದೆ. ಈ ಕುರಿತು ಅನುಮತಿ ಪಡೆಯುವ ಕೆಲಸಗಳು ನಡೆಯುತ್ತಿದ್ದು, ವಿಮಾನಯಾನ ಸಚಿವಾಲಯ ಇನ್ನೂ ಅಂತಿಮ ಒಪ್ಪಿಗೆ ನೀಡುವುದು ಬಾಕಿ ಇದೆ.

ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿಯಿಂದ ದೇಶದ ವಿವಿಧ ನಗರಗಳನ್ನು ಸಂಪರ್ಕಿಸುತ್ತದೆ. ಹುಬ್ಬಳ್ಳಿ-ನವದೆಹಲಿ ನಡುವೆ ನೇರ ವಿಮಾನ ಸೇವೆಯನ್ನು ಸಹ ನೀಡುತ್ತಿದೆ. ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ.

ಜೂನ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ ಅನ್ನು 273 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಲು ಸಹ ಅನುಮೋದನೆ ನೀಡಿದೆ. ಹೊಸ ಟರ್ಮಿನಲ್ 20 ಸಾವಿರ ಚದರ ಮೀಟರ್ (ನೆಲ ಮತ್ತು ಮೊದಲ ಮಹಡಿ) ವಿಸ್ತೀರ್ಣ ಇರಲಿದೆ. ಈ ವಿಸ್ತರಣೆಯಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ. 2024ರಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+