ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ
ಹುಬ್ಬಳ್ಳಿ, ಜನವರಿ 31 : ಹುಬ್ಬಳ್ಳಿ ರೈಲು ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಮಾಡಲು ನೈಋತ್ಯ ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದೆ. ರೈಲು ನಿಲ್ದಾಣದ ಕಟ್ಟಡಗಳನ್ನು ಟರ್ಮಿನಲ್‌ಗಳಾಗಿ ವಿಭಾಗ ಮಾಡಲಾಗಿದೆ. ಇದರಿಂದಾಗಿ ಜನರು ಸುಲಭವಾಗಿ ಗುರುತಿಸಲು ಸಹಾಯಕವಾಗಲಿದೆ.
ರೈಲ್ವೆ ನಿಲ್ದಾಣದ ಗೇಟ್‌ಗಳನ್ನು ಪ್ರವೇಶದ್ವಾರ, ನಿರ್ಗಮನ ದ್ವಾರ ಎಂದು ಬದಲಾವಣೆ ಮಾಡಲಾಗಿದೆ. ಗೇಟ್ ನಂಬರ್‌ಗಳನ್ನು ಸಹ ನೀಡಲಾಗಿದೆ. ಪಾದಾಚಾರಿಗಳ ಸೇತುವೆ ಮೇಲೆ ಫ್ಲಾಟ್ ಫಾರಂ, ಪ್ರವೇಶ ದ್ವಾರ, ನಿರ್ಗಮನ ದ್ವಾರದ ಮಾಹಿತಿ ನೀಡುವ ಫಲಕ ಹಾಕಲಾಗಿದೆ.

ನೈಋತ್ಯ ರೈಲ್ವೆ ತನ್ನ ವಿಭಾಗದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ವಿಭಾಗದ ವ್ಯಾಪ್ತಿಯ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ರೀತಿ ಬದಲಾವಣೆ ಮಾಡಲಾಗುತ್ತದೆ.
ರೈಲು ನಿಲ್ದಾಣದ ದಕ್ಷಿಣ ಭಾಗಕ್ಕೆ ಟರ್ಮಿನಲ್ 1 ಎಂದು ಹೆಸರು ಇಡಲಾಗಿದೆ. ಮೂರು ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಗೇಟ್ ನಂಬರ್ 1ಕ್ಕೆ ನೀಡಲಾಗಿದೆ. ಗೇಟ್ 2 ಮತ್ತು 3 ಉತ್ತರ ಭಾಗದಲ್ಲಿವೆ. ಗದಗ ರಸ್ತೆ ಭಾಗದಲ್ಲಿ ಟರ್ಮಿನಲ್ 2 ಇದೆ.
ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಿದ್ದೇವೆ? ಎಂದು ಪ್ರಯಾಣಿಕರು ಗುರುತಿಸುವುದು ಬಹಳ ಸರಳವಾಗಿದೆ. ಇದರಿಂದಾಗಿ ಕ್ಯಾಬ್ ಚಾಲಕರು, ಆಟೋ ಚಾಲಕರಿಗೂ ಅನುಕೂಲವಾಗಿದೆ. ಪ್ರಯಾಣಿಕರನ್ನು ಡ್ರಾಪ್ ಮಾಡಲು ಮತ್ತು ಪಿಕಪ್ ಮಾಡುವುದು ಸುಲಭವಾಗಿದೆ.












Click it and Unblock the Notifications