ಬಳ್ಳಾರಿಯಲ್ಲಿ ಬಾಣಂತಿಯರ ಸಾವು: ಹುಬ್ಬಳ್ಳಿ ವೈದ್ಯರು ಫುಲ್‌ ಅಲರ್ಟ್‌

ಹುಬ್ಬಳ್ಳಿ, ಡಿಸೆಂಬರ್ 09: ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐದು ಬಾಣಂತಿಯರು ಮೃತಪಟ್ಟ ಘಟನೆ ರಾಜ್ಯಾದಂತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿ, ಗರ್ಭಿಣಿಯರು ಹಾಗೂ ಅವರ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಐವಿ ದ್ರಾವಣದ ಬಗ್ಗೆ ವೈದ್ಯರು ಪರಿಶೀಲನೆ ನಡೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಾಣಂತಿಯರ ಸಾವಿನ‌ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೂ ಎಚ್ಚೆತ್ತ ಸರ್ಕಾರಿ ಆಸ್ಪತ್ರೆಗಳು, ಧಾರವಾಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಿಂದ ಐವಿ‌ ದ್ರಾವಣ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಐವಿ ದ್ರಾವಣ‌ ಗುಣಮಟ್ಟದ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯಿಂದಲೂ ಐವಿ ದ್ರಾವಣ ಪರಿಶೀಲನೆಗೆ ವೈದ್ಯಾಧಿಕಾರಿಗಳು ಮುಂದಾಗಿದ್ದಾರೆ.

Hubballi Hospital Investigates Infant Deaths Amid Rising Concerns

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಪಶ್ಚಿಮ ಬಂಗಾಳ ಫಾರ್ಮಸ್ಯುಟಿಕಲ್ ಕಂಪನಿಯಿಂದ ಧಾರವಾಡ ಜಿಲ್ಲೆಗೆ ಪೂರೈಸಿದ ಐವಿ ದ್ರಾವಣದ ಗುಣಮಟ್ಟದ ಪರಿಶೀಲನೆಗೆ ಜಿಲ್ಲಾ ಔಷಧ ನಿಯಂತ್ರಕ‌ ಘಟಕ ಮುಂದಾಗಿದ್ದು, ಈಗಾಗಲೇ ಐವಿ ದ್ರಾವಣವನ್ನ ಬೆಂಗಳೂರಿನ‌ ಪ್ರಯೋಗಾಲಯಕ್ಕೆ ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಿಂದ ಕಳಿಸಲಾಗಿದೆ. ಐವಿ ದ್ರಾವಣ ಪರಿಶೀಲನೆ ಮೂಲಕ ಬಾಣಂತಿಯರ ಸುರಕ್ಷತಾ ಕ್ರಮಕ್ಕೆ ಚಿಟಗುಪ್ಪಿ ಆಸ್ಪತ್ರೆಯು ಮುಂದಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಬಿಟ್ಟರೆ ಎರಡನೇ ಅತೀ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಟಗುಪ್ಪಿ ಆಸ್ಪತ್ರೆಯ, ವೈದ್ಯಾಧಿಕಾರಿಗಳಿಂದ ಐವಿ ದ್ರಾವಣ ಪರಿಶೀಲನೆ ನಡೆಸಲಾಗುತ್ತಿದೆ. ಪ್ರತಿ ದಿನ ನೂರಾರು ಗರ್ಭಿಣಿಯರು ದಾಖಲಾಗುವ ಚಿಟಗುಪ್ಪಿ‌ ಆಸ್ಪತ್ರೆಯಲ್ಲಿ ಬಾಣಂತಿಯರ ಸುರಕ್ಷತೆಗೆ ಕ್ರಮ‌ವಹಿಸಿದ್ದಾರೆ. ಈ‌ ಮೂಲಕ‌ ಬಾಣಂತಿಯರ ವಿಚಾರದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+