ಹುಬ್ಬಳ್ಳಿ ಗುರು ಗಾರ್ಮೆಂಟ್ಸ್ ನಲ್ಲಿ 15 ಲಕ್ಷದಷ್ಟು ಬಟ್ಟೆ ಕಳವು
ಹುಬ್ಬಳ್ಳಿ, ಜುಲೈ 18: ಅಂಗಡಿ ಮಾಲೀಕರೇ ಸ್ವಲ್ಪ ಎಚ್ಚರವಾಗಿರಿ! ನಿಮ್ಮ ಅಂಗಡಿಗೆ ಬರುವವರೆಲ್ಲರೂ ಗ್ರಾಹಕರಲ್ಲ. ಹೀಗೆ ಬರುವ ಕೆಲವರು ಅಂಗಡಿಯ ಆಯಕಟ್ಟಿನ ಸ್ಥಳಗಳನ್ನು ಗಮನಿಸಿ ಮಾರನೇ ದಿನವೇ ಕಳವು ಮಾಡಿಕೊಂಡು ಹೋಗುತ್ತಾರೆ.
ಹೌದು, ಹುಬ್ಬಳ್ಳಿಯ ಅಕ್ಕಿಹೊಂಡದಲ್ಲಿರುವ ಗುರು ಗಾರ್ಮೆಂಟ್ಸ್ ಗೆ ಮಂಗಳವಾರ ಬೆಳಗಿನ ಜಾವ ನುಗ್ಗಿರುವ ಕಳ್ಳರು ಅಂಗಡಿಯನ್ನು ಪೂರ್ಣ ಖಾಲಿ ಮಾಡಿದ್ದಾರೆ. ಹದಿನೈದು ಲಕ್ಷ ರುಪಾಯಿ ಮೌಲ್ಯದ ಬಟ್ಟೆಗಳನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ.

ಕೃತ್ಯಕ್ಕೆ ಟಾಟಾಏಸ್ ಹಾಗೂ ಸ್ಕಾರ್ಪಿಯೋ ವಾಹನವನ್ನು ಬಳಸಿದ್ದು, ಅಂಗಡಿಯ ಬಾಗಿಲು ತೆರೆಯಲು ಕಬ್ಬಿಣದ ರಾಡ್ ಉಪಯೋಗಿಸಿದ್ದಾರೆ.
ಅಂಗಡಿಯಲ್ಲಿ ಕಳವು ಮಾಡಿದ ಬಟ್ಟೆಗಳನ್ನು ವಾಹನದಲ್ಲಿ ತುಂಬುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಶಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications