Get Updates
Get notified of breaking news, exclusive insights, and must-see stories!

ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಟಾಪನೆಗೆ ಅನುಮತಿ ಇಲ್ಲ: ಕಮೀಷನರ್‌ ರಮಣ ಗುಪ್ತಾ ಸ್ಪಷ್ಟನೆ

ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಬೇರೆ ಮಾಹಿತಿಗಳು ಬಂದಿವೆ. ಈ ನಿಟ್ಟಿನಲ್ಲಿ ಒಂದು ದಿನ ಆಗಲಿ, ಒಂದು ಕ್ಷಣ ಆಗಲಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಟಾಪನೆಗೆ ಅನುಮತಿ ಇಲ್ಲ ಎಂದು ಧಾರವಾಡ ಪೊಲೀಸ್ ಆಯುಕ್ತರಾದ ರಮಣ ಗುಪ್ತಾ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ, ಮಾರ್ಚ್ 9: ಈದ್ಗಾ ಮೈದಾನದಲ್ಲಿ ಒಂದು ದಿನವಾಗಲಿ, ಒಂದು ಕ್ಷಣವಾಗಲಿ ಕಾಮಣ್ಣನ ಪ್ರತಿಷ್ಟಾಪನೆಗೆ ಅವಕಾಶ ಇಲ್ಲ. ಆಯೋಜಕರು 10 ದಿನ ಮೊದಲೇ ಮನವಿ ಕೊಟ್ಟಿದ್ದರೆ, ಬಂದೋ ಬಸ್ತ್‌ಗೆ ಕ್ರಮ ಆಗುತ್ತಿತ್ತು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರಮಣ ಗುಪ್ತಾ ಹೇಳಿದರು‌.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡ ನಗರವಾದ ಕಾರಣ ಬಂದೋಬಸ್ತ್‌ ಅನಿವಾರ್ಯವಾಗಿರತ್ತದೆ. ನಾವು ಮೊದಲೇ ಮನವಿ ಕೊಟ್ಟಿದ್ದರೇ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಪೊಲೀಸ್ ನಿಯೋಜನೆ, ಸಿಸಿ ಕ್ಯಾಮೆರಾ ಅಳವಡಿಕೆ ಮಾಡುತ್ತಿದ್ದೇವು. ಈಗಾಗಲೇ ನಗರದಲ್ಲಿ 472 ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಇವೆಲ್ಲ ಒಂದೇ ದಿನ ಪ್ರತಿಷ್ಠಾಪನೆ ಆಗಿವೆ ಎಂದರು.

Hubballi Dharwad Commissioner Give Clarification About Enshrine Kamanna Idol In Idgah Maidan

ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಕೆಲವು ಮಾಹಿತಿ ಬಂದಿವೆ. ಕಾನೂನು ಸುವ್ಯವಸ್ಥೆ ವಿಚಾರವಾಗಿ ಮಾಹಿತಿ ಬಂದಿದೆ. ಗುಪ್ತಚರ ಪೊಲೀಸ್ ಮೂಲಗಳ ಮಾಹಿತಿ ಬಂದಿದೆ. ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಬೇರೆ ಮಾಹಿತಿಗಳು ಬಂದಿವೆ. ಈ ನಿಟ್ಟಿನಲ್ಲಿ ಒಂದು ದಿನ ಆಗಲಿ, ಒಂದು ಕ್ಷಣ ಆಗಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈದ್ಗಾ ಮೈದಾನದಲ್ಲಿ ಕಾಮಣ್ಣ ಪ್ರತಿಷ್ಟಾಪನೆ ಅನುಮತಿಗಾಗಿ ಪ್ರತಿಭಟನೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾನಗೆ ಅನುಮತಿ ನೀಡಬೇಕೆಂದು ಹಿಂದೂಪರ ‌ಸಂಘಟನೆಗಳಿಂದ ಪ್ರತಿಭಟನೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಈದ್ಗಾ ಮೈದಾನದ ಸುತ್ತಲೂ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

Hubballi Dharwad Commissioner Give Clarification About Enshrine Kamanna Idol In Idgah Maidan

ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಠಾಪಿಸಿ, ದಹನ ಮಾಡಲು ಅವಕಾಶ ನೀಡಬೇಕೆಂದು ಪಾಲಿಕೆಗೆ ಹಿಂದೂಪರ ಸಂಘಟನೆಗಳಿಂದ ಮನವಿ ಮಾಡಿಕೊಂಡಿದ್ದರು. ಹಿಂದೂಪರ ಸಂಘಟನೆಗಳ ಮನವಿಗೆ ಹು-ಧಾ ಮೇಯರ್ ಈರೇಶ ಅಂಚಟಗೇರಿ ಅನುಮತಿ ನೀಡಿ ಆದೇಶ ಕೊಟ್ಟಿದ್ದರು. ಆದರೆ ಕಾನೂನು ಸುವ್ಯವಸ್ಥೆ ನೆಪ ಹೇಳಿ ಮಹಾನಗರ ಪಾಲಿಕೆ ಕಮೀಷನರ್‌ ಕಾಮಣ್ಣಮ ಮೂರ್ತಿ ಪ್ರತಿಷ್ಠಾಪನೆಗೆ ನಿರಾಕರಿಸಿದರು.

ಇದರಿಂದ ಸಿಟ್ಟಿಗೆದ್ದಿದ್ದ ಹಿಂದೂಪರ ಸಂಘಟನೆಗಳು ನಿನ್ನೆ ತಡರಾತ್ರಿವರೆಗೆ ಪ್ರತಿಭಟನೆ ಮಾಡಿ‌ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಇಬ್ಬರು ಪಿಐಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಹುಬ್ಬಳ್ಳಿಯ ರಾಣಿ ಚನ್ನಮ್ಮ ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಹಿನ್ನಲೆಯಲ್ಲಿ, ಪಾಲಿಕೆ ಆಯುಕ್ತರಿಂದ ಸಿಗದ ಅನುಮತಿಯಿಂದಾಗಿ ಹಿಂದೂಪರ ಸಂಘಟನೆಗಳು ರಾಣಿ ಚನ್ನಮ್ಮ ಈದ್ಗಾ ಮೈದಾನದಲ್ಲಿ, ತಮಟೆ ಬಡೆಯುತ್ತ ಪ್ರತಿಭಟನೆ ನಡೆಸಿದರು.

ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಮೇಯರ್ ಸಮ್ಮತಿಸಿದ್ದಾರೆ. ಆದರೆ ಪಾಲಿಕೆ ಆಯುಕ್ತರು ಅನುಮತಿ ನೀಡುತ್ತಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಟಿಪ್ಪು, ಕನಕ ಜಯಂತಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಹಿಂದೂಪರ ಸಂಘಟನೆ ಪ್ರಶ್ನೆ ಮಾಡಿದೆ.

ಅನುಮತಿ ನೀಡಿದರೆ ಈದ್ಗಾ ಮೈದಾನದ ಆವರಣದೊಳಗೆ ಕೂರಿಸುತ್ತೇವೆ. ಇಲ್ಲದಿದ್ದಲ್ಲಿ ಮೈದಾನದ ಹೊರಗಡೆಯೇ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಮೂರು ದಿನಗಳ ಕಾಲ ಕಾಮಣ್ಣ ಮೂರ್ತಿ ಕೂರಿಸುತ್ತೇವೆ ಎಂದು ಹಿಂದೂ ಸಂಘಟನೆಗಳು ಪಟ್ಟುಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಆಯುಕ್ತರು ತುರ್ತು ಸಭೆ ನಡೆಸಿದ್ದರು. ಪೊಲೀಸ್ ಆಯುಕ್ತ ರಮಣಗುಪ್ತಾ, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+