HDK vs DKS: ಪೆನ್‌ಡ್ರೈವ್ ಪ್ರಕರಣಕ್ಕೆ ಆ 'ಮಹಾನಾಯಕ' ಕಾರಣ: ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಗರಂ

ಬೆಂಗಳೂರು, ಏಪ್ರಿಲ್ 30: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಹಳೆಯದು ಎಂದು ಹೇಳಿದ್ದಾರೆ. ಹಾಗಾದರೆ ಚುನಾವಣೆ ಹೊತ್ತಲ್ಲಿ ಎಳೆದು ತಂದವರು ಯಾರು, ಆ ಮಹಾನಾಯಕನ ಕೈಗೆ ಪೆನ್‌ಡ್ರೈವ್ ಸಿಕ್ಕಿದ್ದು ಹೇಗೆ? ಇದಕ್ಕೆಲ್ಲ ಅವರೇ ಕಾರಣ. ಕಾಂಗ್ರೆಸ್ ಪುಡಾರಿಗಳು ನನ್ನ ಮನೆ ಮುಂದೆ ಪ್ರತಿಭಟನೆ ಮಾಡುವ ಅವಶ್ಯಕತೆ ಇದಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿಯವರು ಪಜ್ವಲ್ ರೇವಣ್ಣ ಪ್ರಕರಣ ಕುರಿತ ಹಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

HD Kumaraswamy Questioned How did got Pen Drive of MP Prajwal Revanna Case for DK Shivakumar

ಪೆನ್‌ಡ್ರೈವ್ ಪ್ರಕರಣ ಹಳೆಯದ್ದು ಎಂದು ಹೇಳಿದ್ದಾರೆ. ಚುನಾವಣೆ ಹೊತ್ತಲ್ಲಿ ಹೊರ ಬರಲು ಕಾರಣವೇನು?. ಪೆನ್‌ಡ್ರೈವ್ ಕಾಂಗ್ರೆಸ್‌ನ ಆ 'ಮಹಾನಾಯಕ' ಡಿಸಿಎಂ ಡಿಕೆ ಶಿವಕುಮಾರ್ ಕೈಗೆ ಸೇರಿದ್ದು ಹೇಗೆ?. ಇದನ್ನು ಬಹಿರಂಗ ಪಡಿಸುವ ಮೂಲಕ ದುರುದ್ದೇಶ ರಾಜಕಾರಣ ಮಾಡಲಾಗುತ್ತಿದೆ ಎಂದರು.

ಒಂದು ವಾರದಿಂದ ಪೆನ್‌ಡ್ರೈವ್ ವಿಚಾರದಲ್ಲಿ ಅವರು ನಡೆದುಕೊಂಡಿರುವ ಬಗ್ಗೆ ನನಗೆ ಗೊತ್ತಿದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ಪ್ರಕರಣ ಕುರಿತು ವಿವರವಾಗಿ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ. ಸದ್ಯ ಸರ್ಕಾರ ಪೆನ್‌ಡ್ರೈವ್ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ತನಿಖೆಗೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ನಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಅವರು ಹೇಳಿದರು.

ಪ್ರಕರಣ ನಿರ್ಧಾರವನ್ನು ಜೆಡಿಎಸ್‌ಗೆ ಬಿಡಲಾಗಿದೆ

ಅಮಿತ್ ಶಾ ಅವರು ಪ್ರಜ್ವಲ್ ರೇವಣ್ಣ ಕುರಿತು ತಪ್ಪಾಗಿ ಮಾತನಾಡಿಲ್ಲ. ರಾಜ್ಯ ಹೆಣ್ಣುಮಕ್ಕಳಿಗೆ, ತಾಯಂದಿರಿಗೆ ತೊಂದರೆ ಆದಾಗ ಸ್ಪಂದಿಸುವುದಾಗಿ, ಅಪಮಾನವಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಅಲ್ಲದೇ ಪ್ರಜ್ವಲ್ ಪ್ರಕರಣ ನಿರ್ಧಾರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟಿದ್ದಾರೆ. ಇದರಲ್ಲಿ ತಪ್ಪು ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

HD Kumaraswamy Questioned How did got Pen Drive of MP Prajwal Revanna Case for DK Shivakumar

ಕಾಂಗ್ರೆಸ್‌ ನಾಯಕರ ಮನೆ ಮುಂದೆ ಪ್ರತಿಭಟಿಸಲಿ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಬೇಕಾಗಿರುವುದು ತಮ್ಮ ಹಿರಿಯ ನಾಯಕ ಮನೆಗಳ ಮುಂದೆಯೇ ಹೊರತು ದೇವೇಗೌಡ ಅಥವಾ ತನ್ನ ಮನೆಯ ಮುಂದೆ ಅಲ್ಲ ಎಂದು ಅವರು ತಿಳಿಹೇಳಿದರು.

ದೇವೇಗೌಡರ ಕುಟುಂಬ ಹೊಣೆ ಮಾಡಿದರೇ ಹೇಗೆ?

ಒಬ್ಬ ವ್ಯಕ್ತಿಯಿಂದ ನಡೆದಿರುವ ಕೃತ್ಯಗಳಿಗೆ ದೇವೇಗೌಡ ಹೇಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಹೆಸರು ಸೇರಿಸಿ ಹೇಳುವುದು, ವಿನಾಃ ಆರೋಪ ತಪ್ಪು ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಹೆಣ್ಣುಮಕ್ಕಳ ವಿಚಾರದಲ್ಲಿ ಜೆಡಿಎಸ್, ಎಚ್‌ಡಿ ಕುಮಾರಸ್ವಾಮಿ ಹಾಗೂ ದೇವೇಗೌಡ ಕುಟುಂಬ ಸದಾ ಬೆಂಗಾವಲಾಗಿ ನಿಲ್ಲಿದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಜೆಡಿಎಸ್‌ಗೆ ಕಾಳಜಿ ಇದೆ. ಜೆಡಿಎಸ್ ಬಗ್ಗೆ ತಾಯಂದಿರಿಗೆ ಅಪಮಾನ ಬೇಡ. ಸದ್ಯ ಪ್ರಕರಣ ಬೆಳಕಿಗೆ ಬಂದಿರುವುದು ರೇವಣ್ಣ ಅವರ ಕುಟುಂಬದಲ್ಲಿ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+