ಧಾರವಾಡದಲ್ಲಿ ಮೂವರು ಮಕ್ಕಳು ಸೇರಿ ನಾಲ್ವರಲ್ಲಿ ಕೊರೊನಾ

ಧಾರವಾಡ, ಏಪ್ರಿಲ್ 13: ಜಿಲ್ಲೆಯಲ್ಲಿ ಇಂದು ಮೂವರು ಮಕ್ಕಳು ಸೇರಿದಂತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಇರುವುದು ವರದಿಯಾಗಿದೆ. ಸೋಂಕಿತ ಸಂಖ್ಯೆ 194ರ ಸಂಪರ್ಕಕ್ಕೆ ಬಂದಿರುವ ನಾಲ್ಕು ಜನರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ.

ಸೋಂಕಿತರೆಲ್ಲರೂ ಮುಲ್ಲಾ ಓಣಿಯ ನಿವಾಸಿಗಳಾಗಿದ್ದು, ಸೋಂಕಿತ ಸಂಖ್ಯೆ 194ರ ಅಣ್ಣ ಮತ್ತು ಅಣ್ಣನ ಮಕ್ಕಳಾಗಿದ್ದಾರೆ. ಐದು ವರ್ಷ, ಮೂರೂವರೆ ವರ್ಷ ಹಾಗೂ ಏಳು ವರ್ಷದ ಮಕ್ಕಳು ಸೇರಿದಂತೆ 37 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 Four Corona Positive Cases In Dharwad Including 3 Children

ಸೋಂಕಿತ 194ರ ಸಂಖ್ಯೆ ವ್ಯಕ್ತಿಯು ವ್ಯಾಪಾರದ ಸಲುವಾಗಿ ದೆಹಲಿಗೆ ತೆರಳಿದ್ದು, ಹುಬ್ಬಳ್ಳಿಗೆ ಮರಳಿದ್ದ ಇವರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಆ ವ್ಯಕ್ತಿ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಕೊರೊನಾ ಇರುವುದು ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6ಕ್ಕೆ ಏರಿದೆ.

ಈಗಾಗಲೇ ಈ ಪ್ರದೇಶವನ್ನು ಕಂಟೇನ್ ಮೆಂಟ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+