• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ತಡೆಗೆ ಹುಬ್ಬಳ್ಳಿಯಲ್ಲಿ ಭಿಕ್ಷುಕರಿಗೆ ಮಾಸ್ಕ್ ಹಂಚುತ್ತಿರುವ ಕರಿಯಪ್ಪ!

|

ಬೆಂಗಳೂರು, ಮಾ. 19: ಕೊರೊನಾ ವೈರಸ್ ಇಡೀ ಜಗತ್ತನ್ನೆ ತಲ್ಲಣ ಗೊಳಿಸಿದ್ದು, ತಮ್ಮವರನ್ನು ರಕ್ಷಣೆ ಮಾಡಿಕೊಂಡರೆ ಸಾಕು ಎನ್ನುವಂತಹ ತೀರ್ಮಾನಕ್ಕೆ ಸರ್ಕಾರಗಳು ಬಂದಿವೆ. ಜೊತೆಗೆ ಸರ್ಕಾರ ಕೂಡ ವೈರಸ್ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮನೆಯಿಂದ ಹೊರಗೆ ಬರಬಾರದು ಅಂತಾ ಜನರಿಗೆ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದೆ. ಆದರೆ ಮನೆಯೆ ಇಲ್ಲದ ಕೊಟ್ಯಂತರ ಜನರು ನಮ್ಮ ದೇಶದಲ್ಲಿದ್ದಾರೆ. ಅಂಥ ಜನರ ಬಗ್ಗೆ ಸರ್ಕಾರ ತಲೆ ಕೆಡಸಿಕೊಂಡಿಲ್ಲ. ವ್ಯಾಪಾರಿ ಮನೋಭಾವನೆಯಿಂದ ಕೆಲವರು ದುಪ್ಪಟ್ಟು ಬೆಲೆಗೆ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಂಥದ್ದರಲ್ಲಿ ಹುಬ್ಬಳ್ಳಿಯಲ್ಲೊಬ್ಬ ವ್ಯಕ್ತಿ ಭಿಕ್ಷುಕರು, ನಿರ್ಗತಿಕರಿಗೆ ಕೊರೊನಾ ವೈರಸ್ ಬಗ್ಗೆ ತಿಳಿವಳಿಕೆ ಕೊಡುತ್ತಿದ್ದಾರೆ. ಜೊತೆಗೆ ಪ್ರತಿದಿನ ಅವರಿದ್ದಲ್ಲಿಗೆ ತೆರಳಿ ಮಾಸ್ಕ್‌ಗಳನ್ನು ಹಾಕುತ್ತಿದ್ದಾರೆ.

ಕೊರೊನೊ ವೈರಸ್ ವೈದ್ಯಕೀಯ ವೈದ್ಯಕೀಯ ತಪಾಸಣೆಯ ಮಾರ್ಗಸೂಚಿ

ಮೂಲತಃ ಗದಗ ಜಿಲ್ಲೆ ಲಕ್ಷ್ಮೇಶ್ವರದ ಕರಿಯಪ್ಪ ಶಿರಹಟ್ಟಿ ಆ ವ್ಯಕ್ತಿ. ಹುಬ್ಬಳ್ಳಿಯ ರೇಲ್ವೆ ನಿಲ್ದಾಣ, ಹಳೆ ಬಸ್ಟ್ಯಾಂಡ್, ಈದ್ಗಾ ಮೈದಾನ ಸೇರಿದಂತೆ ಭಿಕ್ಷುಕರು ಹಾಗೂ ನಿರ್ಗತಿಕರು ಇದ್ದಲ್ಲಿಗೆ ಹೋಗಿ ಕೊರೊನಾ ವೈರಸ್‌ನಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ಕೊಡುತ್ತಿದ್ದಾರೆ. ಸ್ವಚ್ಛತೆ ಜೊತೆಗೆ ಬೀದಿಯಲ್ಲಿಯೇ ಇದ್ದರೂ ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಕೊರೊನಾ ವೈರಸ್ ಭಿಕಗ್ಷಕರಿಗೆ ಮಾಸ್ಕ್‌ ಹಾಕಿ ತಿಳಿವಳಿಕೆ

ಕೊರೊನಾ ವೈರಸ್ ಭಿಕಗ್ಷಕರಿಗೆ ಮಾಸ್ಕ್‌ ಹಾಕಿ ತಿಳಿವಳಿಕೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ಕಡೆಯೂ ವಿಶೇಷ ನಿಗಾ ವಹಿಸಿದೆ. ಆದರೆ ಬೀದಿ ಬದಿಯಲ್ಲಿರುವ ನಿರ್ಗತಿಕರಿಗೆ, ಭಿಕ್ಷುಕರ ಬಗ್ಗೆ ನಿರ್ಲಕ್ಷ ವಹಿಸಿದೆ. ಒಂದೊಮ್ಮೆ ಅವರಿಗೆ ಸೋಂಕು ತಗುಲಿದರೆ ಅದರ ಪರಿಣಾಮ ಕೂಡ ನೇರವಾಗಿ ಇಡೀ ಸಮಾಜದ ಮೇಲಾಗಲಿದೆ. ಇದನ್ನು ಅರಿತ ಕರಿಯಪ್ಪ ಶಿರಹಟ್ಟಿ ಅವರು ಮಾಸ್ಕ್ ಹಂಚುವ ಕೆಲಸಕ್ಕೆ ಮುಂದಾಗಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಪೌರ ಕಾರ್ಮಿಕರಾಗಿದ್ದ ತಂದೆ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಅವರ ಹೆಸರಿನಲ್ಲಿ ಸಣ್ಣದಾದ ಸ್ವಯಂ ಸೇವಾ ಸಂಸ್ಥೆಯನ್ನು ತೆರೆದಿದ್ದಾರೆ. ಹುಬ್ಬಳ್ಳಿಯಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದಾರೆ. ತಮ್ಮ ಸ್ವಂತ ದುಡಿಮೆಯಿಂದಲೇ ಇದನ್ನೆಲ್ಲ ಕರಿಯಪ್ಪ ಶಿರಹಟ್ಟಿ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಮಾಸ್ಕ್‌ ವಿತರಣೆ

ಕಳೆದ ಒಂದು ವಾರದಿಂದ ಮಾಸ್ಕ್‌ ವಿತರಣೆ

ಕಳೆದ ಒಂದು ವಾರದಿಂದಲೇ ಕರಿಯಪ್ಪ ಅವರು ಹುಬ್ಬಳ್ಳಿಯಲ್ಲಿ ಮಾಸ್ಕ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಜೊತೆಗೆ ಅರಿವನ್ನುಂಟು ಮಾಡುತ್ತಿದ್ದಾರೆ. ಕೊರೊನಾ ಭಯ ಇಡೀ ಜಗತ್ತನ್ನೆ ಕಾಡುತ್ತಿದ್ದರೂ ಕರಿಯಪ್ಪ ಅವರು ಮಾತ್ರ ಎದೆಗುಂದಿಲ್ಲ. ಕೊರಳಲ್ಲೊಂದು ಬ್ಯಾಗ್ ಅದರಲ್ಲಿ ಕೆಲವು ಹೊಸ ಬಟ್ಟೆಗಳು ಹಾಗೂ ಕ್ಷೌರ ಮಾಡಲು ಬೇಕಾಗುವ ಸಲಕರಣೆಗಳನ್ನು ಇಟ್ಟುಕೊಂಡು ಅಡ್ಡಾಡುತ್ತಾರೆ.

ದಾರಿಯಲ್ಲಿ ಭಿಕ್ಷುಕರು, ಅನಾಥರು ಅಥವಾ ನಿರ್ಗತಿಕರು ಕಂಡುಬಂದರೆ ಹತ್ತಿರದಲ್ಲೆ ಇರುವ ಬೋರ್‌ವೆಲ್ ಅಥವಾ ಸುಲಭ ಶೌಚಾಲಯದಲ್ಲಿ ಅವರ ಕಟ್ಟಿಂಗ್ ಮಾಡಿ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕುತ್ತಾರೆ. ಯಾರಿಂದಲೂ ಇದಕ್ಕಾಗಿ ಹಣಕಾಸಿನ ಸಹಾಯವನ್ನು ಕರಿಯಪ್ಪ ಅವರು ಪಡೆದುಕೊಳ್ಳುವುದಿಲ್ಲ.

ಕೋವಿಡ್-19:ಭಾರತದ ಪರಿಸ್ಥಿತಿ ಬಗ್ಗೆ ಸತ್ಯ ಬಿಚ್ಚಿಟ್ಟ ಡಾ.ದೇವಿಶೆಟ್ಟಿ

ಮೊದಲಿನಿಂದಲೂ ಇದೆ ಕಾಯಕದ ಕರಿಯಪ್ಪ

ಮೊದಲಿನಿಂದಲೂ ಇದೆ ಕಾಯಕದ ಕರಿಯಪ್ಪ

ಹೆಗಲಲ್ಲಿ ಒಂದು ಬ್ಯಾಗ್‌. ಅದರಲ್ಲಿ ಒಂದಷ್ಟು ಬಿಸ್ಕೆಟ್ ಪ್ಯಾಕೆಟ್‌ಗಳು, ನೀರು, ಎರಡು ಮೂರು ತಿಂಡಿ ಪಾಕೆಟ್‌. ಕೈಯಲ್ಲೊಂದು ಕಿಟ್‌. ಅದರಲ್ಲೊಂದಷ್ಟು ಬಟ್ಟೆ-ಬರೆ, ಶೇವಿಂಗ್ ಸೆಟ್‌- ಇಷ್ಟೆಲ್ಲ ಹಿಡಿದುಕೊಂಡಿರುವ ವ್ಯಕ್ತಿ ಏನಾದರೂ ಕಂಡರೆ ಖಂಡಿತ ಅವರು ಬೇರಾರೂ ಅಲ್ಲ, ಕರಿಯಪ್ಪ ಶಿರಹಟ್ಟಿಯವರೇ. ಹುಬ್ಬಳ್ಳಿ, ಲಕ್ಷ್ಮೇಶ್ವರ ಸುತ್ತಮುತ್ತ ಇವರು ಸಂಚಾರ ಮಾಡುತ್ತಿರುತ್ತಾರೆ. ಆಗಾಗ, ಭಿಕ್ಷುಕರು, ಮಾನಸಿಕ ಅಸ್ವಸ್ಥರ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಎಲ್ಲೇ ಹೋದರೂ ಇವರ ಹೆಗಲಿಗೆ ಜೋಳಿಗೆ ಅಂತೂ ಇದ್ದೇ ಇರುತ್ತದೆ. ಹಾಗಂತ, ಅವರ ಬಳಿ ಇರುವ ಪರಿಕರಗಳೆಲ್ಲವೂ ಅವರಿಗಾಗಿ ಅಂದುಕೊಳ್ಳಬೇಡಿ. ಬಡವರು, ನಿರ್ಗತಿಕರು, ಮಾನಸಿಕ ಅಸ್ವಸ್ಥರಿಗಾಗಿ ಬ್ಯಾಗ್‌ನಲ್ಲಿ ಬಟ್ಟೆ ಬರೆ ಸೇರಿದಂತೆ ಕ್ಷೌರ ಮಾಡಲು ಬೇಕಾಗುವ ಸಲಕರಣೆ ಇಟ್ಟುಕೊಂಡಿರುತ್ತಾರೆ.

ಪ್ರತಿದಿನ ನಿರ್ಗತಿಕರಿಗೆ, ಭಿಕ್ಷುಕರಿಗೆ ಮಧ್ಯಾಹ್ನದ ಊಟ

ಪ್ರತಿದಿನ ನಿರ್ಗತಿಕರಿಗೆ, ಭಿಕ್ಷುಕರಿಗೆ ಮಧ್ಯಾಹ್ನದ ಊಟ

ಕರಿಯಪ್ಪ ಅವರು ತಮ್ಮ ತಂದೆಯ ಕಾಲದಿಂದಲೂ ಬಡತನವನ್ನು ಅನುಭವಿಸಿದ್ದಾರೆ. ಈಗಲೂ ಕೂಡ ತಮ್ಮ ಸ್ವಂತದ ದುಡಿಮೆಯಲ್ಲಿಯೆ ಪ್ರತಿದಿನ ಮಧ್ಯಾಹ್ನ ಸುಮಾರು 40-50 ಭಿಕ್ಷುಕರಿಗೆ ಊಟವನ್ನು ಹಂಚುತ್ತಾರೆ. ಹಳೆ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಇದ್ಗಾ ಮೈದಾನ ಹಾಗೂ ಹುಬ್ಬಳ್ಳಿಯ ಇನ್ನಿತರ ಕಡೆಗಳಲ್ಲಿ ನಿರ್ಗತಿಕರು, ಭಿಕ್ಷುಕರಿಗೆ ಅವರಿರುವಲ್ಲಿಯೆ ಹೋಗಿ ಊಟವನ್ನು ಕೊಡುತ್ತಾರೆ.

ಹೀಗೆ ಊಟವನ್ನು ಕಳೆದ ಒಂದು ವರ್ಷದಿಂದ ಒಂದೂ ದಿನವೂ ತಪ್ಪದೆ ಕೊಡುತ್ತ ಬಂದಿದ್ದಾರೆ. ಹೀಗಾಗಿಯೆ ಈಗ ನಿರ್ಗತಿಕರ ಸ್ಥಿತಿ ಗೊತ್ತಿರುವುದರಿಂದಲೇ ಈಗ ಊಟದ ಜೊತೆಗೆ ಮಾಸ್ಕ್‌ಗಳನ್ನು ಹಂಚುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾದಿಂದ ಸಾವು, 14 ಜನರಿಗೆ ದೃಢ

ರಾಜ್ಯದಲ್ಲಿ ಕೊರೊನಾದಿಂದ ಸಾವು, 14 ಜನರಿಗೆ ದೃಢ

ರಾಜ್ಯದಲ್ಲಿ ಈಗಾಗಲೇ ಕೊರೊನಾ ವೈರಸ್‌ಗೆ ಒಬ್ಬರು ಬಲಿಯಾಗಿದ್ದಾರೆ. ಜೊತೆಗೆ 14 ಜನರಲ್ಲಿ ಕೊವಿಡ್-19 ದೃಢ ಪಟ್ಟಿದೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಜೊತೆಗೆ ಸಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಶಂಕಿತರ ಸಂಖ್ಯೆ ಏರಿಕೆ ಯಾಗುತ್ತಲೆ ಇದೆ. ಸರ್ಕಾರ ಕೂಡ ಕರಿಯಪ್ಪ ಅವರ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಬೇಕಾಗಿದೆ. ಬೀದಿ ಬದಿಯ ಭಿಕ್ಷುಕರಿಗೆ, ನಿರ್ಗತಿಕರಿಗೆ ಸೂಕ್ತ ತಿಳಿವಳಿಕೆ ಜೊತೆಗೆ ಆರೋಗ್ಯ ತಪಾಸಣೆ ಮಾಡಬೇಕಿದೆ.

English summary
In the wake of the coronavirus, Kariyappa is distributing a mask to detainees and beggars. Kariyappa has run his own campaign to stop the corona virus from spreading in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X