ಮಹಿಳಾ ಬ್ರಿಗೇಡ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಶಿರಸಿಯ ಚೈತ್ರಾ ಗೌಡ
ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾರಂಭವೊಂದರಲ್ಲಿ ಎಚ್ ಡಿ ಕುಮಾರಸ್ವಾಮಿ ಮಹಿಳಾ ಬ್ರಿಗೇಡನ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಶಿರಸಿಯ ಚೈತ್ರಾ ಗೌಡ ರನ್ನು ನೇಮಕ ಮಾಡಲಾಗಿದೆ
ಹುಬ್ಬಳ್ಳಿ, ಏಪ್ರಿಲ್ 29: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಲಿಷ್ಠ ಪಕ್ಷವಾಗಿ ಬೆಳೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
2018 ರ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಭರವಸೆಯಲ್ಲಿರುವ ಜೆಡಿಎಸ್ ಈಗಾಗಲೇ ಚುನಾವಣಾ ತಯಾರಿ ನಡೆಸಲು ಆರಂಭಿಸಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಖುದ್ದು ಎಲ್ಲ ಜವಾಬ್ದಾರಿಗಳನ್ನೂ ಹೊತ್ತು, ರಾಜ್ಯ ಪ್ರವಾಸಕ್ಕೆ ತೊಡಗಿದ್ದಾರೆ.[ಕಾಂಗ್ರೆಸ್ ಜತೆ ದೋಸ್ತಿ ಇಲ್ಲ, 120 ಮಂದಿ ಪಟ್ಟಿ ಸಿದ್ಧವಿದೆ: ಎಚ್ ಡಿಕೆ]

ಅದರದೇ ಭಾಗವಾಗಿ, ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾರಂಭವೊಂದರಲ್ಲಿ ಎಚ್ ಡಿ ಕುಮಾರಸ್ವಾಮಿ ಮಹಿಳಾ ಬ್ರಿಗೇಡನ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಶಿರಸಿಯ ಚೈತ್ರಾ ಗೌಡ ರನ್ನು ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ನಡೆದ ಸಭೆಯಲ್ಲಿ ಮಹಿಳಾ ಬ್ರೀಗೆಡನ ಅಧ್ಯಕ್ಷೆ ಶಾಂತಾ ಸುರೇಂದ್ರ, ಚೈತ್ರಾ ಗೌಡ ಅವರ ನೇಮಕ ಆದೇಶ ಹೂರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ , ಅಲ್ಕೋಡ ಹನುಮಂತಪ್ಪ. ಶಾಸಕ ಎನ್ ಎಚ್ ಕೋನರೆಡ್ಡಿ ಸೇರಿದಂತೆ ಮೋಹಿನಿ ನಾಯಕ, ಮೇರಿ ರೆಬಲೋ ಹಾಗೂ ತ್ರಿವೇಣಿ ಗೌಡ ಹಾಜರಿದ್ದರು.












Click it and Unblock the Notifications