ಮಾಜಿ ಸ್ಪೀಕರ್ ಕೋಳಿವಾಡಗೆ ಸಮ್ಮಿಶ್ರ ಸರ್ಕಾರದಿಂದ ಬಿಗ್ ಶಾಕ್
ಬೆಂಗಳೂಸು, ಸೆಪ್ಟೆಂಬರ್ 17: ಮಾಜಿ ಸ್ಪೀಕರ್ ಕೆಬಿ ಕೋಳೀವಾಡ ಅವರ ಹೆಸರನ್ನು ಹಾವೇರಿ ಜಿಲ್ಲಾ ಪಂಚಾಯ್ತಿ ಕಟ್ಟಡಕ್ಕೆ ನಾಮಕರಣ ಮಾಡಲು ಮುಂದಾಗಿದ್ದ ನಿರ್ಣಯವನ್ನು ಸರ್ಕಾರ ರದ್ದುಗೊಳಿಸಿದೆ.
ನೂತನವಾಗಿ ನಿರ್ಮಾಣಗೊಂಡಿರುವ ಹಾವೇರಿ ಜಿಲ್ಲಾ ಪಂಚಾಯ್ತಿ ಕಟ್ಟಡಕ್ಕೆ ಕೋಳಿವಾಡ ಹೆಸರನ್ನು ನಾಮಕರಣ ಮಾಡಲು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ವಿಧಾನಸಭಾಧ್ಯಕ್ಷರಾಗಿದ್ದ ಕೆಬಿ ಕೋಳೀವಾಡ ಹೆಸರನ್ನು ಜಿಲ್ಲಾ ಪಂಚಾಯ್ತಿ ಕಟ್ಟಡಕ್ಕೆ ಇಡುವ ಬಗ್ಗೆ 2017ರ ಮೇ 15ರಂದು ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸರಲಿಲ್ಲ, ಚುನಾಯಿತ ಜೀವಂತ ಪ್ರತಿನಿಧಿಗಳ ಹೆಸರನ್ನು ಇಡಲು ಅವಕಾಶವಿಲ್ಲ ಎಂದು ಸಭೆ ಗಮನಕ್ಕೆ ತಂದಿದ್ದರು. ಆದರೆ ರಾಜಕೀಯ ಒತ್ತಡದ ಕಾರಣಕ್ಕೆ 2017ರ ಸೆಪ್ಟೆಂಬರ್ 28ರಂದು ನಡೆದ ಸಭೆಯಲ್ಲಿ ಮತ್ತೊಮ್ಮೆ ನಿರ್ಣಯ ಕೈಗೊಳ್ಳಲಾಗಿತ್ತು.

ಜೀವಂತ ಪ್ರತಿನಿಧಿಗಳ ಹೆಸರನ್ನು ಸರ್ಕಾರಿ ಕಟ್ಟಡಗಳಿಗೆ ನಾಮಕರಣ ಮಾಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಲ್ಲಿ ಅವಕಾಶವಿಲ್ಲದಿರುವುದರಿಂದ ಸಾಮಾನ್ಯ ಸಭೆ ನಿರ್ಣಯ ರದ್ದು ಮಾಡುವಂತೆ ಸರ್ಕಾರಕ್ಕೆ ಹಾವೇರಿ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.
ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆಬಿ ಕೋಳೀವಾಡ ಹೆಸರನ್ನು ನಾಮಕರಣ ಮಾಡುವ ನಿರ್ಣಯವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಯಾವುದೇ ಕಾರಣಕ್ಕೂ ಬದುಕಿರುವ ಚುನಾಯಿತ ಪ್ರತಿನಿಧಿಗಳ ಹೆಸರನ್ನು ಕಟ್ಟಡಕ್ಕೆ ಇಡಕೂಡದು ಎಂದು ತಿಳಿಸಿದೆ.












Click it and Unblock the Notifications