ಶಿಗ್ಗಾವಿ ಚುನಾವಣೆ ಅಖಾಡ: ಅವಿರೋಧ ಆಯ್ಕೆ ಬೇಡ-ಕುಸ್ತಿನೇ ಬೇಕು: ಕಾಂಗ್ರೆಸ್‌ಗೆ ತೊಡೆ ತಟ್ಟಿದ ಸಿಎಂ ಬೊಮ್ಮಾಯಿ
ಹಾವೇರಿ, ಏಪ್ರಿಲ್ 07: ನನ್ನ ಆತ್ಮವಿಶ್ವಾಸ ಕ್ಷೇತ್ರ ಶಿಗ್ಗಾವಿ ಬಿಟ್ಟು ಬೇರೆ ನಾನು ಸ್ಪರ್ಧಿಸುವುದಿಲ್ಲ. ನನಗೆ ಅವಿರೋಧ ಆಯ್ಕೆ ಬೇಡ. ನನಗೆ ಕುಸ್ತಿನೇ ಬೇಕು, ಆವಾಗಲೇ ಯಾರ ಶಕ್ತಿ ಏನು ಎಂದು ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಾಯಕರಿಗೆ ಬಹಿರಂಗವಾಗಿ ಸವಾಲೆಸೆದರು.
ಹಾವೇರಿ ಬಿಜೆಪಿ ಘಟಕದಿಂದ ಶುಕ್ರವಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾನತಾಡಿದ ಮುಖ್ಯಮಂತ್ರಿಗಳು,

ಕಣಕ್ಕೆ ಯಾರೂ ಬೇಕಾದರೂ ಬರಬಹುದು, ಸೆಡ್ಡು ಹೊಡೆದೇ ಬಿಡೋದು, ಬೇರೆ ಪ್ರಶ್ನೆಯೇ ಇಲ್ಲ.ಇಲ್ಲಿ ಸ್ಪರ್ಧಿಸಲು ಕುಸ್ತಿ ಪಟ್ಟು ಅಭ್ಯಾಸ ಮಾಡಿಕೊಂಡು ಬರಬೇಕು ಏಕೆಂದರೆ ಚುನಾವಣಾ ಅಖಾಡದಲ್ಲಿ ಹೊಸ ಕುಸ್ತಿ, ಹೊಸ ಪಟ್ಟು ಇರಲಿದೆ ಎಂದು ಎಂದು ಕಾಂಗ್ರೆಸ್‌ನಿಂದ ವಿನಯ್ ಕುಲಕರ್ಣಿ ಸ್ಪರ್ಧೆ ವಿಚಾರ ಕುರಿತು ಟಾಂಗ್ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ದುರ್ಬಲ ಸಮುದಾಯಗಳಿಗೆ ಮೀಸಲಾತಿ ನಿರ್ಣಯ ಮಾಡಿದಾಗಲೇ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ತಲೆ ಮೇಲೆ ಕೈ ಇಟ್ಟುಕೊಂಡರು. ಅವರು ಇನ್ನೂವರೆಗೆ ತಲೆ ಮೇಲಿನ ಕೈ ತೆಗೆದಿಲ್ಲ. ದೇಶದಲ್ಲಿಯೇ ಯಾರೂ ಮಾಡಿರದ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳದ ಸಾಹಸವನ್ನು ಬಿಜೆಪಿ ಮಾಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನದ್ದು ದ್ವಿಮುಖ ನೀತಿ
ದೆಹಲಿಯಿಂದ ಬಂದ ವಿರೋಧ ಪಕ್ಷದ ನಾಯಕ ಇದನ್ನು ಸಂವಿಧಾನ ವಿರೋಧಿ ಎಂದರು. ಕಾಂಗ್ರೆಸ್ ನದ್ದು ದ್ವಿಮುಖ ನೀತಿ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ಒಂದೆಡೆ, ಮಾಡುವುದಿಲ್ಲ ಎಂದು ಮತ್ತೊಂದೆಡೆ ಹೇಳುತ್ತಾರೆ. ಇದು ದ್ವಿಮುಖ ನೀತಿ ಅಲ್ಲವಾ? ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸಿ ಆಡಳಿತ ಮಾಡಿದರು ಎಂದು ಆರೋಪಗಳಿಗೆ ತಿರುಗೇಟು ನೀಡಿದರು.
ಸ್ವ ಕ್ಷೇತ್ರ ಶಿಗ್ಗಾಂವಿಯಲ್ಲೇ ನನ್ನ ಸ್ಪರ್ಧೆ: ಸಿಎಂ ಸ್ಪಷ್ಟನೆ
ಶಿಗ್ಗಾಂವಿ ಎಂದು ಅದು ನನ್ನ ಆತ್ಮವಿಶ್ವಾಸ, ಹೀಗಾಗಿ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಭವಿಷ್ಯ ಐದೇ ವರ್ಷಗಳಲ್ಲಿ ಸುಮಾರು 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸಲಿದ್ದೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ ಇರುವ ಶಿಗ್ಗಾಂವಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತೇನೆ ಎಂದು ಅವರು ಪುನರುಚ್ಚರಿಸಿದರು.

ಗುರುವಾರ ಬಿಜೆಪಿ ಸಂಸ್ಥಾಪಕ ದಿನಾಚರಣೆ ನಡೆಯಿತು.ಮೊದಲ ದಿನ ಶಿಗ್ಗಾವಿ ತಾಲೂಕಿನಲ್ಲಿ ಬಿಜೆಪಿ ಶಕ್ತಿ ದುಪ್ಪಟ್ಟಾಗಿದೆ. ಈ ಕಾರ್ಯಕ್ರಮ ಬಿಜೆಪಿ ಮತ್ತೆ ರಾಜ್ಯದಲ್ಲಿ ಸಂಪೂರ್ಣವಾಗಿ ಅಧಿಕಾರಕ್ಕೆ ಬರುವ ದಿಕ್ಸೂಚಿಯಾಗಿದೆ. ಇಂದು ಪಕ್ಷ ಸೇರಿದವರು ಯಾರೂ ಹೊರಗಿನವರಲ್ಲ. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ನನ್ನ ಜೊತೆ ಕೆಲಸ ಮಾಡಿದವರು ಎಂದು ಅವರು ತಿಳಿಸಿದರು.
ಶಿಗ್ಗಾವಿ ಮತ್ತು ಸವಣೂರು ತಾಲೂಕು ಒಂದೇ ಒಂದು ಪಕ್ಷದಿಂದ ಅಭಿವೃದ್ಧಿ ಆಗಲಿದೆ. ತಾಲೂಕಿನ ಸಮಗ್ರ ಏಕತೆ, ಬರುವ ದಿನಗಳಲ್ಲಿ ಮಾದರಿ ಕ್ಷೇತ್ರವಾಗಿ ಪರಿವರ್ತನೆ ಮಾಡಲು ಎಲ್ಲರೂ ಶಕ್ತಿ ತುಂಬಿದ್ದಾರೆ ಎಂದು ಅವರು ಭವಿಷ್ಯ ಯೋಜನೆ ಕುರಿತು ತಿಳಿಸಿದರು.
ಒಂದು ತಿಂಗಳು ಮಾತ್ರ ರಾಜಕೀಯ ಮಾಡೋಣ
ಅಧಿಕಾರಾವಧಿಯ ಪೈಕಿ ಒಟ್ಟು 59 ತಿಂಗಳು ಅಭಿವೃದ್ಧಿ ಮಾಡೋಣ. ಆದರೆ ಒಂದು ತಿಂಗಳು ಮಾತ್ರ ರಾಜಕೀಯ ಮಾಡೋಣ ಎಂಬುದು ನನ್ನ ಅಭಿಪ್ರಾಯ. ಆದರೆ ಅವರು ಮೈದಾನ್ ಹೈ, ಘೋಡಾ ಹೈ. ಯಾವುದೇ ರೀತಿಯ ಒತ್ತಡ, ಒತ್ತಾಯ ಇಲ್ಲ. ಇಲ್ಲಿ ಬಂದವರು ಒತ್ತಾಯಕ್ಕೆ ಮಣಿದು ಬಂದಿಲ್ಲ ಪ್ರೀತಿ ವಿಶ್ವಾಸದಿಂದ ಬಂದಿದ್ದಾರೆ ಎಂದು ಹೇಳಿದರು.
ನನ್ನ ವಿರುದ್ದ ದೊಡ್ಡದಾಗಿ ಅಪಪ್ರಚಾರ ನಡೆದಿತ್ತು. ಅಂದು ಪ್ರಮುಖ ಪತ್ರಿಕೆಯಲ್ಲಿ ಬೊಮ್ಮಾಯಿ ಗೆಲ್ಲೋದು ಸಾಧ್ಯವಿಲ್ಲ ಎಂದು ಬರೆದಿದ್ದರು. ಫಲಿತಾಂಶ ಬಂದ ದಿನ ವಿಜಯೋತ್ಸವ ಆಚರಣೆ ನೋಡುವಂತೆ ಅಂದು ಆ ಪತ್ರಕರ್ತನಿಗೆ ಹೇಳಿದ್ದೆ ಎಂದು 2018ರ ನೆನಪುಗಳನ್ನು ಅವರು ಸ್ಮರಿಸಿದರು. ಇಂದು ಬೆಂಗಳೂರು, ದೆಹಲಿಯಲ್ಲಿ ಕುಳಿತು ಬೊಮ್ಮಾಯಿ ಹೇಗೆ ಸೋಲಿಸಬೇಕು ಎಂದು ಯೋಜನೆ ಹಾಕುತ್ತಾರೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಶಿಗ್ಗಾವಿ ಜನ ನನ್ನ ಕೈಬಿಡಲ್ಲ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.y












Click it and Unblock the Notifications