ಹಾವೇರಿ: ಪಟಾಕಿ ಗೋದಾಮಿಗೆ ಬೆಂಕಿ, ಮೂವರು ಸಜೀವ ದಹನ
ಹಾವೇರಿ, ಆಗಸ್ಟ್, 29: ಹಾವೇರಿ ನಗರ ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿಗೆ ಬೆಂಕಿ ಬಿದ್ದಿದ್ದು, ಗೋದಾಮಿನಲ್ಲಿ 3 ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುಗಾಲೇ ಹಾವೇರಿಗರ ಪಾಲಿಗೆ ವಿಘ್ನವೊಂದು ಎದುರಾಗಿದೆ. ಪಟಾಕಿ ಹೊಡೆದು ಸಂಭ್ರಮ ಮಾಡಬೇಕೆಂದಿದ್ದ ಮಾಲೀಕರು & ಜನರು ಪಟಾಕಿ ಅವಘಡದಿಂದ ಅಕ್ಷರಸಃ ಬೆಚ್ಚಿಬಿದ್ದಿದ್ದಾರೆ. ಪಾಟಾಕಿ ಗೊಡೋನ್‌ಗೆ ಬೆಂಕಿ ಬಿದ್ದ ವೇಳೆ, ಗೋಡೋನ್‌ನಲ್ಲಿದ್ದ ಐವರ ಪೈಕಿ ಮೂವರು ಸಜೀವ ದಹನವಾಗಿ ಸುಟ್ಟು ಹೋಗಿದ್ದಾರೆ. ಇನ್ನು ಮನೆಯ ಮಕ್ಕಳನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಕುಮಾರ ಸಾತೇನಹಳ್ಳಿ ಎಂಬುವರಿಗೆ ಸೇರಿದ ಭೂಮಿಕಾ ಪಟಾಕಿ ಅಂಗಡಿಯ ಗೋದಾಮಿನಲ್ಲಿ ಬೆಂಕಿ ಬಿದ್ದಿದ್ದು, ಸುಮಾರು ಒಂದೂವರೆ ಕೋಟಿ ರುಪಾಯಿ ಮೌಲ್ಯದ ಪಟಾಕಿ ಸುಟ್ಟು ಹೋಗಿವೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ವೇಳೆ ನಾಪತ್ತೆಯಾಗಿದ್ದ ಐವರ ಪೈಕಿ ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ ಹಾಗೂ ಶಿವಲಿಂಗ ಅಕ್ಕಿ ಎನ್ನುವ ಮೂವರ ಮೃತದೇಹಗಳು ಸಿಕ್ಕಿವೆ.
ದುರ್ಘಟನೆಯಲ್ಲಿ ಮೃತರಾದ ಮೂವರು ಕಾಟೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದ್ದು, ಮನೆ ಮಕ್ಕಳನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೀಗೆ ಅಂಗಡಿಗೆ ಬಿದ್ದ ಒಂದೇ ಒಂದು ಕಿಡಿ ಕೊಟ್ಯಂತರ ರುಪಾಯಿ ಮೌಲ್ಯದ ಪಟಾಕಿಯ ಜೊತೆಗೆ ಮೂವರ ಪ್ರಾಣ ಹೊತ್ತೊಯ್ದಿದೆ. ಸದ್ಯ ಇನ್ನಿಬ್ಬರಿಗಾಗಿ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಶಿವಕುಮಾರ ಗೂಣಾರೆ ಹಾಗೂ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಬೆಂಕಿ ಅವಘಡವಾಗಿದೆ. ಅದಕ್ಕೆ ಪರವಾನಗಿ ಇದಿಯೋ ಇಲ್ಲವೋ ಎನ್ನುವುದನ್ನು ತನಿಖೆ ಮಡುತ್ತಿದ್ದೇವೆ. ಈಗ ಸದ್ಯ ಮೃತದೇಹಗಳು ಸಿಕ್ಕಿವೆ. ಇನ್ನೂ ಕಾರ್ಯಾಚರಣೆ ನಡಿಯುತ್ತಿದೆ ಎಂದು ಎಸ್ಪಿ ಶಿವಕುಮಾರ್ ಗುಣಾರ್ ತಿಳಿಸಿದ್ದಾರೆ.












Click it and Unblock the Notifications