ಮನವಿಗೆ ಒಪ್ಪಿದರೆ ನನ್ನ ಚರ್ಮದಲ್ಲಿ ಸಿಎಂ ಗೆ ಚಪ್ಪಲಿ ಹೊಲಿದು ಕೊಡುವೆ: ಚಿಂಚನಸೂರು

ಹಾವೇರಿ, ಜನವರಿ 15: ನನ್ನ ಮನವಿಗೆ ಓಗೊಟ್ಟು ಕೆಲಸ ಮಾಡಿಕೊಟ್ಟರೆ ನನ್ನ ಚರ್ಮದಿಂದ ಸಿಎಂ ಯಡಿಯೂರಪ್ಪ ಅವರಿಗೆ ಚಪ್ಪಲಿ ಹೊಲಿಸಿ ಕೊಡುತ್ತೀನಿ ಎಂದು ಮಾಜಿ ಶಾಸಕ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಬಾಬೂರಾವ್ ಚಿಂಚನಸೂರು, ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡುತ್ತಾ, 'ಅಂಬಿಗರನ್ನು ಎಸ್‌ಟಿ ಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದರೆ ಯಡಿಯೂರಪ್ಪ ಅವರಿಗೆ ನನ್ನ ತೊಡೆ ಚರ್ಮದಲ್ಲಿ ಚಪ್ಪಲಿ ಹೊಲಿದು ಕೊಡುತ್ತೀನಿ' ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಚಿಂಚನೂಸುರು, 'ನಾವು ಅಂಬಿಗರು ನಂಬಿಕಸ್ಥರು, ನದಿ ದಾಟಿಸೋರು, ದಡ ಸೇರಿಸೋರು, ನಾವು ನಡು ನೀರಲ್ಲಿ ಕೈಬಿಡುವುದಿಲ್ಲ' ಎಂದು ಯಡಿಯೂರಪ್ಪ ಅವರಿಗೆ ಚಿಂಚನಸೂರು ಅಭಯ ನೀಡಿದ್ದಾರೆ.

I Will Made Sandals With My Own Skin And Give It To CM: Baburao Chinchansur

'ದೆಹಲಿಗೆ ಹೋಗಿ ನರೇಂದ್ರ ಮೋದಿ, ಅಮಿತ್ ಶಾ ಅನ್ನು ಭೇಟಿ ಮಾಡಿ ಅಂಬಿಗ ಸಮುದಾಯವನ್ನು ಎಸ್‌ಟಿ ಗೆ ಸೇರಿಸುವ ಕಾರ್ಯವನ್ನು ಯಡಿಯೂರಪ್ಪ ಮಾಡಬೇಕು' ಎಂದು ಚಿಂಚನಸೂರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+