Maha Shivratri: ಲಿಂಗದಹಳ್ಳಿಯಲ್ಲಿ ಬೃಹತ್ ಗ್ರಾತದ ಸ್ಫಟಿಕ ಲಿಂಗಕ್ಕೆ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು, ವಿಶೇಷತೆ ತಿಳಿಯಿರಿ
ದೇಶದ್ಯಾಂತ ಮಹಾಶಿವರಾತ್ರಿ ಸಂಭ್ರಮ ಜೋರಾಗಿದ್ದು, ಹಾಗೆಯೇ ಲಿಂಗದಹಳ್ಳಿಯಲ್ಲಿ ಯಾವ ರೀತಿ ಸಂಭ್ರಮ ಇದೆ ಅನ್ನುವುದನ್ನು ಇಲ್ಲಿ ತಿಳಿಯಿರಿ.
ಹಾವೇರಿ, ಫೆಬ್ರವರಿ, 18: ದಕ್ಷಿಣ ಭಾರತದಲ್ಲೇ ಕಂಡು ಕಾಣದ ಸ್ಪಟಿಕಲಿಂಗ ಈ ದೇವಸ್ಥಾನದಲ್ಲಿದೆ. ಈ ದೇವಾಸ್ಥಾನ ಸ್ಫಟಿಕ ಲಿಂಗದಿಂದಲ್ಲೇ ಪ್ರಖ್ಯಾತಿ ಪಡೆದಿದೆ. ಹೌದು ಈ ಹಿಂದೆ ಐತಿಹಾಸಿಕ ಸ್ಫಟಿಕಲಿಂಗ ಕಳ್ಳತನವಾಗಿತ್ತು. ಬಳಿಕ ದೇವಸ್ಥಾನಕ್ಕೆ ಕೋಟಿ ಮೌಲ್ಯದ ಸ್ಫಟಿಕ ಲಿಂಗವನ್ನು ತಂದು ಪೊಜಿಸಲಾಯಿತ್ತು. ಇದೇ ಸ್ಫಟಿಕ ಲಿಂಗಕ್ಕೆ ಮಹಾ ಶಿವರಾತ್ರಿಯ ಮೊಲದ ಪೊಜೆಯನ್ನು ಮಾಡಲಾಯಿತು.
ದೇವಸ್ಥಾನದ ಗರ್ಭಗುಡಿಯಲ್ಲಿ ಕಣ್ಮಣ ಸೆಳೆಯುತ್ತಿರುವ ಸ್ಫಟಿಕಲಿಂಗ ಇರುವುದು ರಾಣೇಬೆನ್ನೂರು ತಾಲೂಕಿನ ಲಿಂಗದಳ್ಳಿಯ ಶ್ರೀ ಜಗದ್ಗುರು ವಿಶ್ವೇಶ್ವರಶಿವಾಚಾರ್ಯ ಗುರುಕುಲದ ದೇವಸ್ಥಾನದಲ್ಲಿ. ಸ್ಫಟಿಕ ಲಿಂಗಕ್ಕೆ ಪೂಜೆ ಸಲ್ಲಿಸಿ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಲಿಂಗದಳ್ಳಿಯ ಶ್ರೀ ಜಗದ್ಗುರು ವಿಶ್ವೇಶ್ವರಶಿವಾಚಾರ್ಯ ಗುರುಕುಲದ ದೇವಸ್ಥಾನದಲ್ಲಿ ಹೋಗೆಭಕ್ತಸಾಗರವೇ ನೆರೆದಿತ್ತು.

Maha Shivratri 2023: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ ಹೇಗಿತ್ತು?, ಇಲ್ಲಿದೆ ವಿವರ
ಸ್ಫಟಿಕ ಲಿಂಗದ ವಿಶೇಷತೆ ಏನು?
ಹಾವೇರಿ ಜಿಲ್ಲೆ ಏಲಕ್ಕಿ ನಾಡು ಅಂತಲೇ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೇ ಇಲ್ಲಿನ ಲಿಂಗದಹಳ್ಳಿ ದೇವಸ್ಥಾನವೂ ಕೂಡ ದಕ್ಷಿಣ ಭಾರತದಲ್ಲೇ ಪ್ರಸಿದ್ಧಿಯಾಗಿದೆ. ದಕ್ಷಿಣ ಭಾರತದಲ್ಲೇ ಇಷ್ಟು ದೊಡ್ಡ ಗಾತ್ರದ ಸ್ಫಟಿಕ ಲಿಂಗವನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಅಂತಹ ಸ್ಫಟಿಕ ಲಿಂಗ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ದೇವಸ್ಥಾನದಲ್ಲಿದೆ ಎಂಬುದೇ ಇಲ್ಲಿನ ಜನರಿಗೆ ಹೆಮ್ಮೆಯ ವಿಚಾರವಾಗಿದೆ.
ಶಿವನ ದರ್ಶನ ಪಡೆದ ಸಾವಿರಾರು ಭಕ್ತರು
ಇನ್ನು ಈ ಸ್ಪಟಿಕ ಲಿಂಗವನ್ನ ಜೂನ್ 7, 2022 ರಂದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಇದರಿಂದ ಇಡೀ ಗ್ರಾಮದ ಜೊತೆ ಜೊತೆಗೆ ಹಾವೇರಿ ಜಿಲ್ಲೆ ಜನರು ಶಾಕ್ ಆಗಿದ್ದರು. ಸದಾ ಶಿವನ ಮುಂದೇ ಬೆಳಕಿನಂತೆ ಇದ್ದ ಸ್ಫಟಿಕ ಲಿಂಗ ಕಳೆಯಿತು ಎಂದು ಆತಂಕದಲ್ಲಿದ್ದರು. ಅಷ್ಟರಲ್ಲೇ ದೇವಸ್ಥಾನದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಕೋಟಿ ರೂಪಾಯಿ ಮೌಲ್ಯದ ಸ್ಫಟಿಕಲಿಂಗವನ್ನು ತಂದರು. ಇದರಿಂದ ತಾಲೂಕಿನ ಲಿಂಗದಹಳ್ಳಿಯ ದೇವಸ್ಥಾನದ ಮೇರಗು ಮತ್ತೆ ಹೇಚಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಹಾ ಶಿವರಾತ್ರಿ ಹಬ್ಬದಂದು 3 ಅಡಿ ಎತ್ತರ ಸ್ಫಟಿಕ ಲಿಂಗವನ್ನು ವಿಷಶೇವಾಗಿ ಪೊಜಿಸಲಾಯಿತು.

ದೇವಾಸ್ಥಾನದಲ್ಲಿ ಸ್ಫಟಿಕ ಲಿಂಗಕ್ಕೆ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಪೊಜೆ ಸಲ್ಲಿಸಿದರು. ಈ ದೊಡ್ಡ ಗ್ರಾತದ ಸ್ಫಟಿಕ ಲಿಂಗವನ್ನು ಕಂಡ ಭಕ್ತರು ಸಂತೋಷ ವ್ಯಕ್ತಪಡಿಸಿದರು. ಜೊತೆಗೆ ಮಹಾ ಶಿವರಾತ್ರಿಯಂದು ಸ್ಫಟಿಕ ಲಿಂಗಕ್ಕೆ ಭಕ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಭಕ್ತಿಯನ್ನು ಮೆರೆದರು. ಶ್ರೀ ಕ್ಷೇತ್ರ ಲಿಂಗದಹಳ್ಳಿ ಮಠದ ದೇವಸ್ಥಾನದ ಸ್ಫಟಿಕ ಲಿಂಗ ಹಾಗೂ ಪಚ್ಚೆಲಿಂಗದ ಪೊಜೆ ನಡೆಸಲಾಗುತ್ತದೆ. ಇನ್ನು ಮಹಾ ಶಿವರಾತ್ರಿ ಹಬ್ಬದಂದು ಭಕ್ತರು ಜಾಗರಣೆಯನ್ನು ಸಹ ಮಾಡಲಿದ್ದಾರೆ.












Click it and Unblock the Notifications