ಹಾವೇರಿ: ಮಠದಲ್ಲೇ ನೇಣಿಗೆ ಶರಣಾದ ಸ್ವಾಮೀಜಿ

Posted By: ಹಾವೇರಿ ಪ್ರತಿನಿಧಿ
Subscribe to Oneindia Kannada

ಹಾವೇರಿ, ಜನವರಿ 08: ಹಾನಗಲ್ ತಾಲ್ಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸ್ವಾಮೀಜಿ ಒಬ್ಬರು ಮಠದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶಾಖಾ ಮಠದ ಮಹಾಲಿಂಗೇಶ್ವರ ಸ್ವಾಮೀಜಿಗಳು ನೇಣಿಗೆ ಶರಣಾಗಿದ್ದು, ಇವರು ಕೆಲ ತಿಂಗಳುಗಳಿಂದ ಹುಲ್ಲತ್ತಿ ಗ್ರಾಮದ ಮಠದಲ್ಲೇ ವಾಸವಿದ್ದರು. ಭಾನುವಾರ ರಾತ್ರಿ ಸ್ವಾಮೀಜಿ ಅವರು ನೇಣಿಗೆ ಶರಣಾಗಿದ್ದು, ಸೋಮವಾರ ಬೆಳಿಗ್ಗೆ ವಿಷಯ ಬೆಳಕಿಗೆ ಬಂದಿದೆ.

ಚೌಳಿಮಠದ ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?

'ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣರಲ್ಲ, ಮನಃ ಶಾಂತಿ ಇಲ್ಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಸ್ವಾಮೀಜಿ ಮರಣ ಪತ್ರ ಬರೆದಿಟ್ಟಿದ್ದಾರೆ.

Hindu Monk commit suicide in Haveri

'ನಾನು ಯಾವ ಭಕ್ತರಿಗೂ ಕೆಟ್ಟದ್ದು ಮಾಡಿಲ್ಲ, ನನ್ನ ಸಮಾಧಿಯನ್ನು ಇದೇ ಮಠದಲ್ಲಿ ಮಾಡಿ ಎಂದು ಡೆತ್‌ನೋಟ್‌ನಲ್ಲಿ ಸ್ವಾಮೀಜಿ ಹೇಳಿದ್ದಾರೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Hindu monk Mahalingeshwara swami commit suicide in Hanagal taluk's Hullathi village. He written 'no one responsible for my death' in his death note.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ