ಚುಡಾಯಿಸಿದವನಿಗೆ ಬಟ್ಟೆ ಹರಿಯುವಂತೆ ಹೊಡೆದ ಯುವತಿಯರು
ಹಾವೇರಿ, ಡಿಸೆಂಬರ್ 01 : ಕಾಲೇಜು ಹುಡುಗಿಯರಿಗೆ ಚುಡಾಯಿಸಿದ ಬೀದಿ ಕಾಮಣ್ಣ ಒಬ್ಬನಿಗೆ ಯುವತಿಯರೇ ಹಿಡಿದು ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಹಾವೇರಿ ಬಸ್ ನಿಲ್ದಾಣದಲ್ಲಿ ಇಬ್ಬರು ಯುವತಿಯರನ್ನು ಚೇಡಿಸಿದ ಬೀದಿ ಕಾಮಣ್ಣ ಕಲಂದರ್ ಎಂಬುವನಿಗೆ ಇಬ್ಬರು ಯುವತಿಯರೇ ಬಟ್ಟೆ ಹರಿಯುವಂತೆ ಬಡಿದು ಬುದ್ದಿಕಲಿಸಿದ್ದಾರೆ.

ಪ್ರತಿದಿನವೂ ಬಸ್ ನಿಲ್ದಾಣದ ಬಳಿ ನಿಂತು ಹೆಣ್ಣುಮಕ್ಕಳನ್ನು ಕಲಂದರ್ ಚುಡಾಯಿಸುತ್ತಿದ್ದ, ಇಂದು ತೀರ ಕೆಟ್ಟ ಭಾಷೆ ಬಳಸಿ ಯುವತಿಯರನ್ನು ಚುಡಾಯಿಸಿದ್ದಾನೆ.
ಇದರಿಂದ ಕೆರಳಿದ ಯುವತಿಯರು ಬಸ್ ನಿಲ್ದಾಣದಲ್ಲೇ ಬಟ್ಟೆ ಹರಿದುಬರುವಂತೆ ಹೊಡೆದಿದ್ದಾರೆ. ಅಲ್ಲೆ ಇದ್ದ ಕೆಲವು ಜನರೂ ಯುವತಿಯರೊಂದಿಗೆ ಸೇರಿ ಕಾಮಣ್ಣನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಶಹರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ಬಗ್ಗೆ ದೂರು ದಾಖಲಾಗಿದೆ. ಈ ಮುಂಚೆಯೂ ಕಲಂದರ್ ಇದೇ ರೀತಿ ಹುಡುಗಿಯರನ್ನು ಚುಡಾಯಿಸಿ ಹೊಡೆತ ತಿಂದಿದ್ದನಂತೆ.












Click it and Unblock the Notifications