Holiday: ಜಿಲ್ಲೆಯಲ್ಲಿ ವ್ಯಾಪಕ ಮಳೆ: ಅಂಗನವಾಡಿ ಕೇಂದ್ರ- ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಹಾವೇರಿ, ಜುಲೈ 26: ಹಾವೇರಿ ಜಿಲ್ಲೆಯಾದ್ಯಂತ ಸುಮಾರು ಮೂರು ವಾಗಳಿಂದ ಮಳೆ ಸುರಿಯುತ್ತಲೇ ಇದೆ. ನದಿಗಳೆಲ್ಲವು ತುಂಬಿ ಹೋಗಿದ್ದು, ಹೋಲಗಳಲ್ಲಿ ನೀರು ನಿಂತಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಭೀತಿ ಶುರುವಾಗಿದೆ. ಈ ಸಂಬಂಧ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಸುಮಾರು 15ದಿನಗಳಿಂದಲೂ ವ್ಯಾಪಕ ಮಳೆ ಆಗುತ್ತಿದೆ. ಬಿಸಿಲಿನ ದರ್ಶನವೇ ಅಪರೂಪ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಗೆ ಶೀತ ವಾತಾವರಣ ನಿರ್ಮಾಣವಾಗಿದೆ. ಈ ಭಾಗದ ಜನರಲ್ಲಿ ಅನಾರೋಗ್ಯದ ಆತಂಕ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಶುಕ್ರವಾರ ಮತ್ತು ಶನಿವಾರ (ಜುಲೈ 26 ಮತ್ತು 27) ಅಂಗನವಾಡಿ ಕೇಂದ್ರ ಮತ್ತ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಭಾನುವಾರ ಹೇಗೂ ರಜೆ ಇರುತ್ತದೆ. ಮುಂದಿನ ಮೂರು ದಿನಗಳಲ್ಲಿ ಮಳೆ ಕಡಿಮೆ ಆದರೆ ಸೋಮವಾರದಿಂದ ಮಕ್ಕಳು ಎಂದಿನಂತೆ ಶಾಲೆಗೆ ತೆರಳುತ್ತಾರೆ.
ರಜೆಗೆ ಮಕ್ಕಳ ಅಭಿವೃದ್ಧಿ, ಶಿಕ್ಷಣ ಇಲಾಖೆ ಮನವಿ
ವ್ಯಾಪಕ ಮಳೆಗೆ ಜಿಲ್ಲೆಯಾದ್ಯಂತ ಶೀತ ಗಾಳಿ ಬೀಸುತ್ತಿದೆ. ಈ ಕಾರಣದಿಂದ ಅಂಗನವಾಡಿ ಕೇಂದ್ರಗಳು ಹಾಗೂ ಪ್ರಾಥಮಿಕ ಮತ್ತು ಶಾಲಾ ಮಕ್ಕಳ ಆರೋಗ್ಯ/ ಆರೋಗ್ಯ ಹಿತದೃಷ್ಟಿಯಿಂದ 27-07-2024ರವರೆಗೆ ಎರಡು ದಿನ ರಜೆ ಘೋಷಿಸುವಂತೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮನವಿ ಮಾಡಿರುತ್ತಾರೆ.
ಎರಡು ಇಲಾಖೆಗಳ ಪ್ರಸ್ತಾವನೆಯನ್ನು ಪರಿಗಣಿಸಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ರಜೆ ಘೋಷಿಸುವ ಅವಶ್ಯವಾಗಿದೆ ಎಂದು ಮನಗಂಡು ಎರಡು ದಿನ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನೂ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಹಾಗೂ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಹಾವೇರಿ ಇವರು ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಇಂದು ನೀಡಿರುವ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.












Click it and Unblock the Notifications