ಹಾವೇರಿ ಶಿಕ್ಷಕನಿಗೆ ಒಲಿದ ಫ್ರೀಡಂ ಜಾರ್‍ಕಾರ್ ಆಫರ್

Posted By:
Subscribe to Oneindia Kannada

ಬೆಂಗಳೂರು, 15 ಫೆಬ್ರವರಿ 2018: ಫ್ರೀಡಂ ರೀಫೈನ್ಡ್ ಸನ್‍ಫ್ಲವರ್ ಆಯಿಲ್ 'ಫ್ರೀಡಂ ಜಾರ್‍ಕಾರ್ ಆಫರ್'ನ ಬಂಪರ್ ಡ್ರಾದಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಿದೆ. ಹಾವೇರಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ದೇವರಾಜ್ ಎಂಬುವರು 'ಬಂಪರ್ ಬಹುಮಾನ' ಗೆದ್ದುಕೊಂಡಿದ್ದಾರೆ.

ಕನ್ನಡದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ಫ್ರೀಡಂ ರೀಫೈನ್ಡ್ ಸನ್‍ಫ್ಲವರ್ ಆಯಿಲ್ ಸಂಸ್ಥೆಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ಅವರು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

ಗ್ರಾಹಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫ್ರೀಡಂ ರೀಫೈನ್ಡ್ ಸನ್‍ಫ್ಲವರ್ ಆಯಿಲ್ ಸಂಸ್ಥೆಯು 2017 ರ ನವೆಂಬರ್ 1 ರಿಂದ 2018 ರ ಜನವರಿ 31 ರವರೆಗೆ ಜಾರ್‍ಕಾರ್ ಲಕ್ಕಿ ಡ್ರಾ ಯೋಜನೆಯನ್ನು ಆಯೋಜಿಸಿತ್ತು. 2, 3, 5 ಮತ್ತು 15 ಲೀಟರ್‍ನ ಫ್ರೀಡಂ ರೀಫೈನ್ಡ್ ಆಯಿಲ್ ಖರೀದಿ ಮಾಡಿದ ಗ್ರಾಹಕರಿಗೆ ಈ ಬಹುಮಾನ ಯೋಜನೆಯನ್ನು ಪ್ರಕಟಿಸಲಾಗಿತ್ತು.

Devraj a Govt Teacher from Haveri wins Freedom Refined Sunflower Oil JARCAR Offer

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳ ಗ್ರಾಹಕರಿಗೆ ಮಾತ್ರ ಈ ಯೋಜನೆ ಜಾರಿಯಲ್ಲಿತ್ತು. ಕಳೆದ ಮೂರು ತಿಂಗಳಲ್ಲಿ 19 ಲಕ್ಷಕ್ಕೂ ಅಧಿಕ ಗ್ರಾಹಕರು ಈ ಲಕ್ಕಿ ಡ್ರಾ ಯೋಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ಬಹುಮಾನ ಯೋಜನೆಯಲ್ಲಿ ಪಾಲ್ಗೊಳ್ಳಲು ಗ್ರಾಹಕರು 2, 3, 5 ಅಥವಾ 15 ಲೀಟರ್ ನ ಫ್ರೀಡಂ ರೀಫೈನ್ಡ್ ಸನ್‍ಫ್ಲವರ್ ಆಯಿಲ್‍ನ ಜಾರ್ ಅನ್ನು ಖರೀದಿ ಮಾಡಬೇಕಿತ್ತು. ಮತ್ತು ಜಾರ್ ನೊಂದಿಗೆ ಬಂದಿದ್ದ ಸ್ಕ್ರ್ಯಾಚ್ ಕಾರ್ಡ್ ಅನ್ನು ಪಡೆದ ಕಾರ್ಡನ್ನು ಸ್ಕ್ರ್ಯಾಚ್ ಮಾಡಿ ಅದರಲ್ಲಿ ಮುದ್ರಿಸಲಾಗಿದ್ದ ಕೋಡ್ ಸಂಖ್ಯೆಯನ್ನು ಎಸ್‍ಎಂಎಸ್ ಮಾಡುವ ಮೂಲಕ ನೋಂದಣಿಯಾಗಲು ಅವಕಾಶ ಕಲ್ಪಿಸಲಾಗಿತ್ತು.

Devraj a Govt Teacher from Haveri wins Freedom Refined Sunflower Oil JARCAR Offer

ಎಲ್ಲಾ ಅರ್ಹ ಕೋಡ್‍ಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಸಾಫ್ಟ್ ವೇರ್‍ನಲ್ಲಿ ಸುರಕ್ಷಿತವಾಗಿ ದಾಖಲಿಸಲಾಗಿತ್ತು. ಈ ಯೋಜನೆಯ ಎಲ್ಲಾ ಪ್ರಕ್ರಿಯೆಗಳ ಉಸ್ತುವಾರಿ ಮತ್ತು ಮೌಲ್ಯಮಾಪನ ಮಾಡಲು ಕೆಪಿಎಂಜಿ ಸಂಸ್ಥೆಯನ್ನು ನೇಮಕ ಮಾಡಲಾಗಿತ್ತು.

ಎರಡು ಬಾರಿ ಲಕ್ಕಿ ಡ್ರಾ ಮಾಡಲಾಗಿದ್ದು, ನಾಲ್ಕು ರಾಜ್ಯಗಳ 100 ಅದೃಷ್ಟಶಾಲಿಗಳಿಗೆ ಚಿನ್ನದ ನಾಣ್ಯಗಳನ್ನು ನೀಡಲಾಗಿದೆ. ಅಂತಿಮ ಬಂಪರ್ ಡ್ರಾ ಫೆಬ್ರವರಿ ಮೊದಲ ವಾರದಲ್ಲಿ ನಡೆದಿದೆ. ಅದೇ ರೀತಿ 200 ಅದೃಷ್ಠಶಾಲಿಗಳನ್ನು ತಲಾ 5 ಗ್ರಾಂ ಚಿನ್ನದ ನಾಣ್ಯಗಳ ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು.

ನಾಲ್ವರು ವಿಜೇತರನ್ನು ಬಂಪರ್ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು, ಅವರು ಮಾರುತಿ ಆಲ್ಟೋ 800 -ಎಸಿ ಕಾರನ್ನು ಪಡೆಯುತ್ತಿದ್ದಾರೆ. ಇಂದು ಕರ್ನಾಟಕದ ಬಂಪರ್ ಬಹುಮಾನ ವಿಜೇತರಿಗೆ ಮಾರುತಿ ಆಲ್ಟೋ 800- ಎಸಿ ಕಾರನ್ನು ವಿತರಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Freedom Refined Sunflower Oil announced the winners of the bumper draw of “Freedom JARCAR Offer”. Famous Kannada actress Ms. Sharmiela Mandre gave away the awards Devraj a Govt Teacher from Haveri lucky winner from Karnataka State along with Mr. P Chandra Shekhara Reddy, Vice President.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X