ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾನಗಲ್ ಉಪ ಚುನಾವಣೆ ಫಲಿತಾಂಶ: ಸೋತ ಬಳಿಕ ಬಿಜೆಪಿ ಅಭ್ಯರ್ಥಿ ಹೇಳಿದ್ದೇನು?

|
Google Oneindia Kannada News

ಹಾವೇರಿ, ನವೆಂಬರ್ 2: ತೀವ್ರ ಕುತೂಹಲ ಕೆರಳಿಸಿದ್ದ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಸೋತು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯಭೇರಿ ಬಾರಿಸಿದ್ದಾರೆ. 46 ವರ್ಷದ ಶ್ರೀನಿವಾಸ ವಿಷ್ಣುರಾವ್ ಮಾನೆ ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿ, ಜೈಕಾರ ಹಾಕುತ್ತಿದ್ದಾರೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಫಲಿತಾಂಶದಲ್ಲಿ ಅಲ್ಪ ಅಂತರದ ಮತಗಳಲ್ಲಿ ಗೆದ್ದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಸೋಲನುಭವಿಸಿರುವುದು ಬಿಜೆಪಿಗೆ ಹಿನ್ನಡೆ ತಂದಿದೆ.

Haveri: BJP Candidate Shivaraj Sajjanar Reaction After Hanagal By Election Defeat

ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪ ಚುನಾವಣೆ ನಡೆದಿತ್ತು. ಮತ ಎಣಿಕೆ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಶ್ರೀನಿವಾಸ ಮಾನೆ 7,598 ಮತಗಳ ಅಂತದಿಂದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಸೋಲಿಸಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ 87,113 ಮತಗಳು, ಬಿಜೆಪಿಯ ಶಿವರಾಜ್ ಸಜ್ಜನರಗೆ 79,515 ಮತಗಳು ಹಾಗೂ ಜೆಡಿಎಸ್​ ಅಭ್ಯರ್ಥಿ ನಿಯಾಜ್ ಶೇಖ್​ಗೆ 921 ಮತಗಳು ಸಿಕ್ಕಿವೆ. ಕಾಂಗ್ರೆಸ್​ನ ಶ್ರೀನಿವಾಸ ಮಾನೆಗೆ 7,598 ಮತಗಳ ಅಂತದಿಂದ ಜಯ ಸಿಕ್ಕಿದೆ.

ಹಾವೇರಿ ಜಿಲ್ಲೆಯ ಹಾನಗಲ್‌ ಉಪ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಪ್ರತಿಕ್ರಿಯೆ ನೀಡಿದ್ದು, "ಸೋಲಿನ ಹೊಣೆ ಪಕ್ಷದ್ದೂ ಹೌದು, ನನ್ನದೂ ಹೌದು. ಸೋಲಿಗೆ ಕಾರಣ ಗೊತ್ತಾಗುತ್ತಿಲ್ಲ. ಉಪ ಚುನಾವಣೆಯಲ್ಲಿ ಗೆದ್ದಿರುವ ಶ್ರೀನಿವಾಸ ಮಾನೆಗೆ ಅಭಿನಂದನೆಗಳು," ಎಂದು ಹೇಳಿದ್ದಾರೆ.

Haveri: BJP Candidate Shivaraj Sajjanar Reaction After Hanagal By Election Defeat


"ಕಾಂಗ್ರೆಸ್‌ನವರು ಅಣ್ಣ- ತಮ್ಮಂದಿರ ನಡುವೆ ಬೆಂಕಿ ಹಚ್ಚಿದರು, ಇದು ಹೇಸಿಗೆ ತರುವ ಕೆಲಸವಾಗಿದೆ. ಅದು ಕುಟುಂಬದ ಸಮಸ್ಯೆ ಎಂದು ಟೀಕಿಸಿರುವ ಅವರು, ಇದು ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ."

"ಉಪ ಚುನಾವಣೆ ವೇಳೆ ಪ್ರಚಾರಕ್ಕೆ ನಮಗೆ ಸಮಯ ಸಿಗಲಿಲ್ಲ. ಕೊನೆ ಗಳಿಗೆಯಲ್ಲಿ ಟಿಕೆಟ್ ಘೋಷಣೆಯಾಯಿತು. ಇದು ಸೋಲಿಗೆ ಕಾರಣವಿರಬಹುದು," ಎಂದು ಫಲಿತಾಂಶದ ಬಳಿಕ ಶಿವರಾಜ ಸಜ್ಜನರ್ ಮಾತನಾಡಿದರು.

"ಬೆಲೆ ಏರಿಕೆಯ ವಿಚಾರ ಚುನಾವಣೆಯ ವಿಷಯ ವಸ್ತು ಆಗಿರಲಿಲ್ಲ, ನಾನು ಸೋಲನ್ನು ಒಪ್ಪಿಕೊಳ್ಳುತ್ತೇನೆ. ಸಂಗೂರು ಸಕ್ಕರೆ ಕಾರ್ಖಾನೆ ಹಗರಣ ಕೂಡ ಉಪ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ," ಎಂದು ಸ್ಪಷ್ಟಪಡಿಸಿದರು.

"ಹಾನಗಲ್ ಚುನಾವಣೆಯಲ್ಲಿ ಭಿನ್ನಾಭಿಪ್ರಾಯವಿಲ್ಲದೇ ಪಕ್ಷದ ಮುಖಂಡರು ಕೆಲಸ ಮಾಡಿದ್ದು, ನನ್ನನ್ನು ಗೆಲ್ಲಿಸಲು ಪ್ರಯತ್ನಿಸಿದ್ದಾರೆ. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಾನು ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈಗಿನಿಂದಲೇ ಪಕ್ಷ ಸಂಘಟನೆ ಮಾಡುತ್ತೇನೆ," ಎಂದು ತಿಳಿಸಿದರು.

ಗೆದ್ದ ಶ್ರೀನಿವಾಸ ಮಾನೆ ಹೇಳಿದ್ದೇನು?
ಇನ್ನು ಈ ವೇಳೆ ಮಾತನಾಡಿದ ಕಾಂಗ್ರೆಸ್ ವಿಜೇತ ಅಭ್ಯರ್ಥಿ ಶ್ರೀನಿವಾಸ ಮಾನೆ, "ಹಾನಗಲ್ ಕ್ಷೇತ್ರದಲ್ಲಿ ಜನಬಲ ಗೆದ್ದಿದೆ, ಹಣ ಬಲ ಸೋತಿದೆ. ಹಾನಗಲ್‌ನ ಸ್ವಾಭಿಮಾನಿ ಜನರು ನನಗೆ ಮತ ನೀಡಿದ್ದಾರೆ. ಯಾವುದೇ ತಂತ್ರಗಳಿಗೆ ಮಣಿಯದೆ ನನಗೆ ಮತ ನೀಡಿದ್ದಾರೆ. ಮಾನವೀಯತೆಗೆ ಮತ ಹಾಕಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಇತ್ತು. ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಗೆದ್ದಿದೆ," ಎಂದು ಶ್ರೀನಿವಾಸ ಮಾನೆ ಸಂತೋಷ ಹಂಚಿಕೊಂಡಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಗೆದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿರುವ ಮಾಲತೇಶ ದೇವಸ್ಥಾನದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಎಪ್ಪತ್ತೈದು ತೆಂಗಿನಕಾಯಿ ಒಡೆದು ಸಂಭ್ರಮ ಆಚರಿಸಿದ್ದಾರೆ.

Recommended Video

ಅಪ್ಪು ಸಾವಿನಿಂದ ಆಘಾತಗೊಂಡು ಜೀವ ಬಿಟ್ಟ ಅಭಿಮಾನಿಗಳು | Oneindia Kannada

English summary
Congress candidate Srinivas Mane has won the Hanagal constituency in Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X