• search
  • Live TV
ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾವೇರಿ: ಅಕ್ಕನಿಗೆ ಕೊರೊನಾವೈರಸ್ ಸೋಂಕು, ತಂಗಿ ಮದುವೆ ಕ್ಯಾನ್ಸಲ್

|
Google Oneindia Kannada News

ಹಾವೇರಿ, ಜೂನ್ 28: ಹಾವೇರಿ ಜಿಲ್ಲೆಯಲ್ಲಿ ಇಂದು ಭಾನುವಾರ ಒಂದೇ ದಿನ 12 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈಗ ಕೊರೊನಾ ವೈರಸ್ ಆಘಾತದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.

ಸವಣೂರು-2, ರಾಣೇಬೆನ್ನೂರು-1, ಹಾನಗಲ್-3, ಹಿರೇಕೆರೂರು-6 ಹೀಗೆ ಜಿಲ್ಲೆಯಲ್ಲಿ 12 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಜಿಲ್ಲಾ ಕೇಂದ್ರವಾದ ಹಾವೇರಿಯ ನಾಗೇಂದ್ರನಮಟ್ಟಿಯ ಪ್ರದೇಶದಲ್ಲಿ ಓರ್ವ ಮಹಿಳೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅಕ್ಕನಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಇಂದು ನಡೆಯಬೇಕಿದ್ದ ತಂಗಿಯ ಮದುವೆಯೇ ಕ್ಯಾನ್ಸಲ್ ಆಗಿದೆ.

ಹಾವೇರಿ: ಪಿಗ್ಮಿ ಕಲೆಕ್ಟರ್, ಬಟ್ಟೆ ವ್ಯಾಪಾರಿಗೆ ಕೊರೊನಾವೈರಸ್ ಸೋಂಕುಹಾವೇರಿ: ಪಿಗ್ಮಿ ಕಲೆಕ್ಟರ್, ಬಟ್ಟೆ ವ್ಯಾಪಾರಿಗೆ ಕೊರೊನಾವೈರಸ್ ಸೋಂಕು

ಆರೋಗ್ಯ ತಪಾಸಣೆ ವೇಳೆ ಅಕ್ಕನಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿದೆ. ಜಿಲ್ಲಾಡಳಿತ ಸದ್ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮದುಮಗಳು ಸೇರಿ 20 ಜನರನ್ನು ಕ್ವಾರಂಟೈನ್ ಮಾಡಿದೆ.

ಇಂದು ಬೆಳಿಗ್ಗೆ ಮಹಿಳೆ ವಾಸವಿದ್ದ ಪ್ರದೇಶವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೀಲ್ ಡೌನ್ ಮಾಡಿರುವುದು ಸ್ಥಳೀಯ ಜನರ ಚಿಂತೆಗೆ ಕಾರಣವಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಮೂವರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ವೈರಸ್ ಕಂಡುಬಂದ ಹಿನ್ನೆಲೆ ನಗರದ ಕಲ್ಲಕ್ಕಲ, ಕಮಾಟಗೇರಿ, ಇಂದಿರಾನಗರಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಅದೇ ರೀತಿ ಕೊರೊನಾ ಸೋಂಕಿತರ ಪ್ರದೇಶಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಸೋಂಕಿತ ಪ್ರದೇಶದ‌ 200 ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಪರಿಗಣನೆ ಮಾಡಲಾಗಿದೆ ಎಂದು ತಹಶೀಲ್ದಾರ್ ಪಿ.ಎಸ್, ಎರ್ರೀಸ್ವಾಮಿ, ಸಿಪಿಐ ಗಣಾಚಾರಿ, ತಾಲೂಕು ಆರೋಗ್ಯ ಅಧಿಕಾರಿ ರವೀಂದ್ರಗೌಡ ಪಾಟೀಲ್, ಪುರಸಭೆಯ ಮುಖ್ಯಾಧಿಕಾರಿ ಎಸ್.ಎನ್ ಬಜ್ಜಕ್ಕನವರಿಂದ ಸೀಲ್ ಡೌನ್ ಮಾಡಲಾಗಿದೆ.

English summary
12 people have been infected with the coronavirus in Haveri district on Sunday. Now people in the district are worried by the coronavirus shock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X