ವಾಸ್ತು ರಹಸ್ಯ: ದಕ್ಷಿಣ ದಿಕ್ಕಿನಲ್ಲಾಗುವ ಈ ಸಣ್ಣ ಬದಲಾವಣೆ ದೊಡ್ಡ ಲಾಭಕ್ಕೆ ದಾರಿ
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನ ಬಗ್ಗೆ ಜನರಲ್ಲಿ ಕೆಲವು ಅಪನಂಬಿಕೆಗಳು ಇವೆ. ಆದರೆ ತಜ್ಞರ ಪ್ರಕಾರ ದಕ್ಷಿಣ ದಿಕ್ಕನ್ನು ಸರಿಯಾಗಿ ಉಪಯೋಗಿಸುವುದು ಒಂದು ದೈರ್ಯ ಕೆಲಸವಾಗಿದೆ. ಆರ್ಥಿಕ ಸ್ಥಿರತೆ, ಮತ್ತು ವೃತ್ತಿಯಲ್ಲಿ ಬೆಳವಣಿಗೆ ಇದು ತುಂಬಾ ಸಹಾಯಕವಾಗುತ್ತದೆ. ಮನೆಯ ದಕ್ಷಿಣ ಗೋಡೆ ಕೇವಲ ಕಟ್ಟಡ ಭಾಗವಲ್ಲ, ಇದು ಮನೆಯ ಯಜಮಾನನ ಆತ್ಮವಿಶ್ವಾಸ ಮತ್ತು ಚಿಂತನೆಗಳ ಮೇಲೂ ತುಂಬಾ ಪರಿಣಾಮ ಬೀರುತ್ತದೆ.
ದಕ್ಷಿಣ ದಿಕ್ಕಿನ ಮಹತ್ವ
ವಾಸ್ತು ಶಾಸ್ತ್ರದ ಹೇಳುವಂತೆ ದಕ್ಷಿಣ ದಿಕ್ಕು ಜವಾಬ್ದಾರಿ, ಅಧಿಕಾರ ಮತ್ತು ಶಿಸ್ತಿನ ಪ್ರತಿಬಿಂಬವಾಗಿದೆ. ಈ ದಿಕ್ಕಿನಲ್ಲಿ ಯಾವಗಲೂ ಬೆಳಕು ಇರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾದ ಜವಾಬ್ದಾರಿ ಆಗಿದೆ.

ಏನು ಮಾಡಬೇಕು?
* ಜೀವನದಲ್ಲಿ ಬೇಗನೆ ಪ್ರಗತಿ ಸಾಧಿಸಲು ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಕೆಲವು ಚಿತ್ರಗಳನ್ನು ಹಾಕಬಹುದು.
* ಓಡುತ್ತಿರುವ ಏಳು ಕುದುರೆಗಳನ್ನು ಚಿತ್ರವನ್ನು ಹಾಕುವುದು, ಇದರಿಂದ ನಿರಂತರ ಪ್ರಗತಿಯ ಸಂಕೇತವಾಗಿದೆ.
* ಕಲ್ಲಿನ ಪರ್ವತಗಳ ಅಥವಾ ಹಸಿರಿನಿಂದ ಕೂಡಿದ ಶಿಖರಗಳ ಚಿತ್ರವನ್ನು ಹಾಕುವುದರಿಂದ ಮನೆಯ ಆರ್ಥಿಕ ಸ್ಥಿರತೆ ಕಾಪಾಡುತ್ತದೆ.
* ಸೂರ್ಯೋದಯ ಆಗುವ ಚಿತ್ರವನ್ನು ಬಳಸುವುದರಿಂದ, ದಿನ ನಿತ್ಯದ ಕೆಲಸಗಳಲ್ಲಿ ನಮಗೆ ಹೊಸ ಉತ್ಸಾಹ ಮತ್ತು ನಾಯಕತ್ವದ ಗುಣಗಳು ಹೆಚ್ಚುತ್ತದೆ.
* ಮಹಾನ್ ನಾಯಕರ ಮತ್ತು ಯೋಧರ ಚಿತ್ರಗಳನ್ನು ಈ ದಿಕ್ಕಿನ ಗೋಡೆಗಳ ಮೇಲೆ ಹಾಕುವುದರಿಂದ ದೈರ್ಯ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
ಏನು ಮಾಡಬಾರದು?
* ದಕ್ಷಿಣ ದಿಕ್ಕು ಅಗ್ನಿ ತತ್ವಕ್ಕೆ ಸಂಬಂಧಿಸಿದೆ. ಆದ್ದರಿಂದ ಈ ಭಾಗದಲ್ಲಿ ನೀರಿಗೆ ಸಂಬಂಧಿಸಿದ ಚಿತ್ರಗಳನ್ನು ಇಡುವುದನ್ನು ತಪ್ಪು.
* ನದಿ, ಜಲಪಾತ, ಸಮುದ್ರ ಅಥವಾ ಈಜುವ ದೃಶ್ಯಗಳ ಚಿತ್ರದ ಫೋಟೋಗಳನ್ನು ಇಡಬಾರದು.
* ಅಳುವ ಅಥವಾ ಹಿಂಸಾತ್ಮಕ ಚಿತ್ರಗಳು ಇಡಬಾರದು.
* ಅಸ್ತಮಿಸುವ ಸೂರ್ಯನ ಚಿತ್ರ ಇಡಬಾರದು.
ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಜೀವನದಲ್ಲಿ ಪ್ರಗತಿ ಹೊಂದಲು ಅನಾನುಕೂಲಗಳನ್ನು ಮಾಡುತ್ತವೆ.
ಬಣ್ಣಗಳ ಮಹತ್ವ
ದಕ್ಷಿಣ ಗೋಡೆಯ ಬಣ್ಣವೂ ಪ್ರಮುಖ ಪಾತ್ರವನ್ನುವಹಿಸುತ್ತದೆ. ಕೆಂಪು, ಹಳದಿ, ಮರೋನ್ ಅಥವಾ ಮಣ್ಣಿನ ಬಣ್ಣಗಳು ಈ ದಿಕ್ಕಿನ ಗೋಡೆಗೆ ಸೂಕ್ತವಾಗಿರುತ್ತದೆ. ಆದರೆ ನೀಲಿ ಅಥವಾ ಕಪ್ಪು ಬಣ್ಣಗಳನ್ನು ಇಲ್ಲಿ ಬಳಕೆ ಮಾಡುವುದು ತಪ್ಪು ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಕುಟುಂಬ ಮತ್ತು ವೃತ್ತಿಪರತೆಗೆ ಸಲಹೆ
ಕುಟುಂಬದ ಫೋಟೋಗಳನ್ನು ಇಡುವಾಗ ಸಂತೋಷದಿಂದ ನಗುತ್ತಿರುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಬೇಕು. ದಕ್ಷಿಣ ಭಾಗವನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಳೆಯ, ಮುರಿದ ವಸ್ತುಗಳು ಅಥವಾ ಅನಾವಶ್ಯಕ ವಸ್ತುಗಳನ್ನು ಇಲ್ಲಿ ಇಡುವುದರಿಂದ ಪ್ರಗತಿಗೆ ತೊಂದರೆ ಆಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ದಿಕ್ಕುನ್ನು ಸರಿಯಾದ ಬಳಕೆ ಮಾಡಿದರೆ ಜೀವನದಲ್ಲಿ ಸ್ಥಿರತೆ, ಆತ್ಮವಿಶ್ವಾಸ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗುತ್ತದೆ ಎಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ.














Click it and Unblock the Notifications