Mango Jackfruit Fair: ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಈ ಬಾರಿ ಎರಡು ಮಾವು-ಹಲಸು ಮೇಳ

ಬೆಂಗಳೂರಿನ ಮಾವು ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಡಬಲ್ ಧಮಾಕಾ ಕಾಯುತ್ತಿದೆ. ನಗರದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಈ ವರ್ಷ ಮೊದಲ ಬಾರಿಗೆ ಎರಡು ಪ್ರತ್ಯೇಕ ಮಾವು ಮತ್ತು ಹಲಸಿನ ಮೇಳಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಕಬ್ಬನ್ ಪಾರ್ಕ್‌ನಲ್ಲಿ ಇದೇ ಮೇ 8ರಿಂದ ಮೇ 17ರವರೆಗೆ ಮೊದಲ ಹಂತದಲ್ಲಿ ಮಾವು-ಹಲಸು ಮೇಳ ನಡೆಯಲಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕಬ್ಬನ್ ಪಾರ್ಕ್‌ನಲ್ಲಿ ಮೊದಲ ಮೇಳ

ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು, ದಕ್ಷಿಣ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗುವಂತೆ ಆಯೋಜಿಸಲಾಗಿದೆ. ಇಲ್ಲಿ ರೈತರು ನೇರವಾಗಿ ಬೆಳೆದ ಸಾವಯವ ಮತ್ತು ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಮಾರಾಟ ಮಾಡಲು ಸುಮಾರು 70 ಸ್ಟಾಲ್‌ಗಳನ್ನು ಹಾಕಲಾಗುತ್ತದೆ. ಇದೇ ಮೇ ತಿಂಗಳ ಅಂತ್ಯದಲ್ಲಿ ಕಬ್ಬನ್ ಪಾರ್ಕ್‌ನಲ್ಲಿ ಮತ್ತೊಂದು ಬೃಹತ್ ಮೇಳವನ್ನು ಆಯೋಜಿಸಲಾಗುವುದು. ಇದರಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿರಲಿವೆ. ಇದರ ನಿಖರವಾದ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು. ಆರಂಭಿಕ ಬೆಳೆ ಬಂದಿರುವ ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ನೆರವಾಗಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Mango Jackfruit Fair

ಸದ್ಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳು ಅತಿ ಹೆಚ್ಚು ಬೆಲೆ ಹೊಂದಿದ್ದು, ಗುಣಮಟ್ಟ ಕಳಪೆಯಾಗಿದೆ ಮತ್ತು ರುಚಿ ಹುಳಿಯಾಗಿದೆ. ಈವರೆಗೆ ಮಾರುಕಟ್ಟೆಗೆ ಬರುತ್ತಿರುವ ಹಣ್ಣುಗಳು ಹೊರ ರಾಜ್ಯಗಳಿಂದ ಸರಬರಾಜಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಕರ್ನಾಟಕದ ಸ್ಥಳೀಯ ಬೆಳೆಗಳು ಮಾರುಕಟ್ಟೆಗೆ ಬರಲು ವಿಳಂಬವಾಗಿದೆ. ಕೋಲಾರ ಮತ್ತು ರಾಮನಗರದ ಮಾವು ಕ್ರಮವಾಗಿ ಮೇ 8 ಮತ್ತು ಮೇ 27ರ ವೇಳೆಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಇಳುವರಿಯಲ್ಲಿ ಕುಸಿತ

ರಾಜ್ಯದಲ್ಲಿ ತೀವ್ರವಾದ ಉಷ್ಣಾಂಶ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದಿಂದಾಗಿ ಈ ಬಾರಿ ಮಾವಿನ ಹಣ್ಣುಗಳು ಅಕಾಲಿಕವಾಗಿ ಉದುರಿವೆ. ಇದು ಹಣ್ಣಿನ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಕಳೆದ ವರ್ಷ ರಾಜ್ಯದಲ್ಲಿ 15 ಲಕ್ಷ ಟನ್ ಇಳುವರಿ ಬಂದಿದ್ದರೆ, ಈ ಬಾರಿ ಕೇವಲ 10 ಲಕ್ಷ ಟನ್ ನಿರೀಕ್ಷಿಸಲಾಗಿದೆ. ರಫ್ತು ಪ್ರಮಾಣದಲ್ಲೂ ಭಾರಿ ಕುಸಿತ ಕಂಡುಬಂದಿದ್ದು, ಕಳೆದ ವರ್ಷ ರಫ್ತಾಗಿದ್ದ 1,000 ಟನ್‌ಗೆ ಹೋಲಿಸಿದರೆ ಈ ಬಾರಿ ಈವರೆಗೆ ಕೇವಲ 50ರಿಂದ 100 ಟನ್ ಮಾತ್ರ ರಫ್ತಾಗಿದೆ ಎಂದು ನಿಗಮ ತಿಳಿಸಿದೆ.

Bengaluru: ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಕನಿಷ್ಠ ದರ 50 ರೂ.ಗೆ ಏರಿಸಲು ಚಾಲಕರ ಪಟ್ಟು
Bengaluru: ಆಟೋ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಕನಿಷ್ಠ ದರ 50 ರೂ.ಗೆ ಏರಿಸಲು ಚಾಲಕರ ಪಟ್ಟು

ಯಾರಿಗೆಲ್ಲ ಅನುಕೂಲ?

ಈ ಮಾವು ಮತ್ತು ಹಲಸಿನ ಮೇಳದ ಪ್ರಮುಖ ಉದ್ದೇಶವು ಗ್ರಾಹಕರಿಗೆ ಯಾವುದೇ ರಾಸಾಯನಿಕ ಅಥವಾ ಕಾರ್ಬೈಡ್ ಮುಕ್ತವಾಗಿ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ನೇರವಾಗಿ ರೈತರಿಂದಲೇ ಒದಗಿಸುವುದು. ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಮೂಲಕ, ರೈತರಿಗೆ ತಮ್ಮ ಬೆಳೆಗೆ ಯೋಗ್ಯ ಬೆಲೆ ಸಿಗುವಂತೆ ಮಾಡುವುದು ಮತ್ತು ಗ್ರಾಹಕರಿಗೆ ರುಚಿಯಾದ ಹಾಗೂ ತಾಜಾ ಹಣ್ಣುಗಳನ್ನು ನ್ಯಾಯಯುತ ದರದಲ್ಲಿ ದೊರಕುವಂತೆ ಮಾಡುವುದು ಈ ಪ್ರದರ್ಶನದ ಮುಖ್ಯ ಗುರಿ. ಇದರೊಂದಿಗೆ ಮಾವು ಬೆಳೆಗಾರರಿಗೆ ನೇರ ಮಾರುಕಟ್ಟೆಯ ಲಾಭಗಳ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಿದಂತಾಗುತ್ತದೆ.

Mango Jackfruit Fair

ಯಾವೆಲ್ಲ ತಳಿ ಲಭ್ಯ?

ಈ ಬಾರಿಯ ಮೇಳದಲ್ಲಿ ಪ್ರದರ್ಶನದಲ್ಲಿ ಬಾದಾಮಿ, ಮಲಿಕಾ, ಸಿಂಧೂರ, ರಸಪುರಿ, ಚಾಲ್ತಿ ಸೇರಿದಂತೆ ಹಲವು ಮಾವಿನ ತಳಿಗಳು ಲಭ್ಯವಿರುತ್ತವೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಜಿಐ ಟ್ಯಾಗ್ ಪಡೆದಿರುವ 'ಕರಿ ಇಶಾಡ್' ಮಾವು ಮತ್ತು ಮಿಡಿ ಉಪ್ಪಿನಕಾಯಿ ತಳಿಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಹಾಗೆಯೇ ಹಲಸಿನ ತಳಿಗಳಾದ ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ ಮತ್ತು ಲಾಲ್‌ಬಾಗ್ ಮಧುರ ಹಣ್ಣುಗಳು ಸಹ ಖರೀದಿಗೆ ಲಭ್ಯವಿರುತ್ತವೆ.

ಈ ಮೇಳದಲ್ಲಿ ರಾಮನಗರ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಮಾವು ಹಾಗೂ ಹಲಸು ಬೆಳೆಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ರೈತರ ಅನುಕೂಲಕ್ಕಾಗಿ ಒಟ್ಟು 57 ಮಳಿಗೆಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ ಮಾವು ಬೆಳೆಗಾರರಿಗೆ 50 ಮಳಿಗೆಗಳು ಮತ್ತು ಹಲಸು ಬೆಳೆಗಾರರಿಗೆ 7 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನ ಜನತೆಗೆ ಹಣ್ಣುಗಳ ರಾಜ ಮಾವು ಮತ್ತು ಹಲಸಿನ ಸವಿಯನ್ನು ಉಣಬಡಿಸಲು ಕಬ್ಬನ್‌ ಪಾರ್ಕ್‌ ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+