ಆರ್ದ್ರ ನಕ್ಷತ್ರದಲ್ಲಿ ಬುಧ ಸಂಕ್ರಮಣ:ಈ ರಾಶಿಯವರಿಗೆ ಹರಿದು ಬರುವುದು ಧನ ಸಂಪತ್ತು

ಗ್ರಹಗಳ ರಾಜಕುಮಾರ ಎಂದೇ ಪರಿಗಣಿಸಲದಪಟ್ಟಿರುವ ಬುಧ ಗ್ರಹವು ರಾಹುವಿನ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಈ ನಕ್ಷತ್ರದಲ್ಲಿ ಬುಧನ ಸಂಚಾರವು ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ.

ಜೂನ್ 2, 2026 ರಂದು ಬೆಳಿಗ್ಗೆ 6:14 ಕ್ಕೆ ಬುಧ ಗ್ರಹವು ಆರ್ದ್ರ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಜೂನ್ 11, 2026 ರವರೆಗೆ ಬುಧ ಗ್ರಹವು ಇದೇ ನಕ್ಷತ್ರದಲ್ಲಿ ಸಂಚಾರ ನಡೆಸಲಿದೆ. ವೈದಿಕ ಜ್ಯೋತಿಷ್ಯದಲ್ಲಿ, ಬುಧನನ್ನು ಬುದ್ಧಿವಂತಿಕೆ, ಮಾತು, ತರ್ಕ, ವ್ಯವಹಾರ ಮತ್ತು ಶಿಕ್ಷಣದ ಅಂಶವೆಂದು ಪರಿಗಣಿಸಲಾಗುತ್ತದೆ. ರಾಹುವಿನ ಅಧಿಪತ್ಯದ ಆರ್ದ್ರ ನಕ್ಷತ್ರಕ್ಕೆ ಬುಧನ ಪ್ರವೇಶವು ನಾಲ್ಕು ರಾಶಿಯವರ ಹಣಕಾಸಿನ ತೊಂದರೆಗಳನ್ನು ನಿವಾರಿಸಲಿದೆ.

Mercury Transit

ಮಿಥುನ ರಾಶಿ:

ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ. ಬುಧ ಸಂಕ್ರಮಣದ ಪರಿಣಾಮವಾಗಿ ಇವರ ವ್ಯಕ್ತಿತ್ವ ಮತ್ತು ಮಾತು ಹೆಚ್ಚು ಆಕರ್ಷಕವಾಗುವುದು. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಬೌದ್ಧಿಕ ಸಾಮರ್ಥ್ಯಗಳು ಹೆಚ್ಚಾಗುತ್ತವೆ. ಈ ಸಂದರ್ಭದಲ್ಲಿ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ಸಾಧ್ಯವಾಗುವುದು. ಉದ್ಯಮಿಗಳು ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವರು. ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು.

ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!
ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ಬುಧ ಸಂಚಾರವು ಹೆಚ್ಚು ಪ್ರಯೋಜನಕಾರಿಯಾಗಬಹುದು. ಆದಾಯ ಹೆಚ್ಚಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಇವರ ಕೆಲಸಕ್ಕೆ ಮನ್ನಣೆ ಸಿಗುವುದು. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ವಿದೇಶದಲ್ಲಿ ಅಧ್ಯಯನ ಮಾಡುವ ಅಥವಾ ಕೆಲಸ ಮಾಡುವ ನಿಮ್ಮ ಬಯಕೆ ಈಡೇರುವುದು. ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ.

ಕನ್ಯಾ ರಾಶಿ:

ಆರ್ದ್ರ ನಕ್ಷತ್ರಪುಂಜದಲ್ಲಿ ಬುಧನ ಸಂಚಾರವು ಕನ್ಯಾ ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚನೆ ಇದ್ದರೆ ಇದು ಒಳ್ಳೆಯ ಸಮಯ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಮಾಧುರ್ಯ ಹೆಚ್ಚಾಗುವುದು. ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಆತ್ಮವಿಶ್ವಾಸದಿಂದಲೇ ಇರುವಿರಿ.

ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು
ಮಂಗಳ ಗೋಚರದಿಂದ ರಾಜಯೋಗ:ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು

ಕುಂಭ ರಾಶಿ:

ಈ ಬುಧ ಸಂಚಾರವು ಕುಂಭ ರಾಶಿಯವರಿಗೆ ಸಕಾರಾತ್ಮಕವಾಗಿರುವುದು. ಸಂಶೋಧನೆಯ ವಿಭಾಗದಲ್ಲಿ ಕೆಲಸ ಮಾಡುವವರು ಪ್ರಗತಿ ಸಾಧಿಸುವರು. ಕುಟುಂಬದೊಂದಿಗೆ ಸಮಯ ಕಳೆಯಲು ಇದು ಉತ್ತಮ ಅವಕಾಶ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ಜಾಗರೂಕರಾಗಿರುವುದು ಅಗತ್ಯ. ತಮಗೆ ವಹಿಸಿರುವ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುವಿರಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+