ಅರಸೀಕೆರೆ ಬಳಿ ಅಪಘಾತ, ಇಬ್ಬರು ಸಾವು
ಹಾಸನ, ಆಗಸ್ಟ್ 24: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಡಿಎಂ ಕುರ್ಕೆ ಬಳಿ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮರಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಟ್ಯಾಂಕರ್ ಚಾಲಕ 24 ವರ್ಷ ವಯಸ್ಸಿನ ಯತೀಶ್ ಗೌಡ, 26 ವರ್ಷ ವಯಸ್ಸಿನ ತಿಮ್ಮಗೌಡ ಎಂದು ಗುರುತಿಸಲಾಗಿದೆ.

ಈ ದುರ್ಘಟನೆಯಲ್ಲಿ ಮೇಘಾ ಎಂಬ ಮಹಿಳೆಗೆ ತೀವ್ರವಾಗಿ ಗಾಯವಾಗಿದೆ, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅರಸೀಕೆರೆ ಪೋಲೀಸರ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications