ತಾಯಿಯ ಕೈಯನ್ನೇ ಕತ್ತರಿಸಿ ಕ್ರೌರ್ಯ ಮೆರೆದ ಕೆಟ್ಟ ಮಗ
ಹಾಸನ, ಡಿಸೆಂಬರ್ 29: ಯುವಕರಿಗೆ ಏನಾಗಿದೆ, ತಂದೆ-ತಾಯಿ, ಸಹೋದರ ಸಹೋದರಿ ಎನ್ನುವ ಮಮಕಾರ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆಯೇ ಎನ್ನುವ ಆತಂಕ ಕಾಡುತ್ತಿದೆ.
ಹಾಸನದಲ್ಲೊಬ್ಬ ಮಗ ತನ್ನ ತಾಯಿಯ ಕೈಯನ್ನೇ ಕತ್ತರಿಸಿ ಕ್ರೌರ್ಯ ಪ್ರದರ್ಶಿಸಿದ್ದಾನೆ, ಇತ್ತೀಚೆಗೆ ಬೆಂಗಳೂರಲ್ಲಿ ಮಗನೊಬ್ಬ ಮದ್ಯಪಾನ ಮಾಡಲು ಹಣ ನೀಡಲಿಲ್ಲ ಎಂದು ತಾಯಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ, ಇನ್ನೊಂದು ಘಟನೆಯಲ್ಲಿ ಹುಡುಗಿ ವಿಚಾರಕ್ಕೆ ತಾಯಿಗೆ ಪೊರಕೆಯಿಂದ ಹೊಡೆದಿದ್ದ, ಹಾಸನದಲ್ಲಿ ಮಗನೊಬ್ಬ ತಾಯಿಯ ಕೈಯನ್ನೇ ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸಕಲೇಶಪುರ ತಾಲೂಕಿನ ಯಡವರಹಳ್ಳಿ ಗ್ರಾಮದ ಲಲಿತಮ್ಮ(55) ಬಲಗೈ ಕಳೆದುಕೊಂಡವಳು. ಇವರ ಮಗ ದಿಲೀಪ್ ಶುಕ್ರವಾರ ರಾತ್ರಿ ಕುಡಿದು ಬಂದು ತಾಯಿಯ ಬಳಿ ಜಗಳವಾಡಿದ್ದಾನೆ ಈ ಸಂದರ್ಭದಲ್ಲಿ ಆತ ಮಾರಕಾಸ್ತ್ರಗಳಿಂದ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ದಿಲೀಪ್ ಆರೋಪಿ, ಈತ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಆತನನ್ನು ಬಿಟ್ಟು ಹೋಗಿದ್ದಾಳೆ, ಹೀಗಾಗಿ ತನಗೆ ಎರಡನೇ ಮದುವೆ ಮಾಡುವಂತೆ ತಾಯಿಗೆ ಒತ್ತಾಯಿಸುತ್ತಿದ್ದ, ಆದರೆ ತಾಯಿ ಇದಕ್ಕೆ ಒಪ್ಪಲಿಲ್ಲ, ಅದಕ್ಕೆ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.












Click it and Unblock the Notifications