ಹಾಸನ ಅಪಘಾತ; ಗಾಯಾಳುಗಳ ಚಿಕಿತ್ಸೆಗೆ ಸರ್ಕಾರದಿಂದ ವ್ಯವಸ್ಥೆ

ಹಾಸನ, ಅಕ್ಟೋಬರ್‌ 16: ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಾಂಧಿನಗರದಲ್ಲಿ ನಡೆದಿದೆ.

ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ದ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತ ದುರ್ದೈವಿಗಳು. ಹಳ್ಳಿಕೆರೆ ಗ್ರಾಮದ ಜನರು ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಅಪಘಾತದಲ್ಲಿ 12 ಜನರು ಗಾಯಗೊಂಡಿದ್ದು, ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟ 9 ಜನರ ಮೃತದೇಹಗಳನ್ನು ಅರಸೀಕೆರೆ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಶವಗಾರದಲ್ಲಿ ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ಹಾಗೂ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Road Accident In Hassan: CM Basavaraj Bommai Tweet

ಹಾಸನದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಇನ್ನು ಪ್ರತ್ಯಕ್ಷದರ್ಶಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಭದ್ರಾವತಿ ಮೂಲದ ಶಾರದಮ್ಮ ಅಪಘಾತದ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ್ದಾರೆ. "ನನ್ನ ಮೊಮ್ಮಗ ಮತ್ತು ನಾನು 2 ಸೀಟ್‌ ಇರುವ ಕಡೆ ಕುಳಿತಿದ್ದೆವು. ಅಕ್ಕಪಕ್ಕದವರು ಮಾತನಾಡಿಕೊಂಡು ಚೆನ್ನಾಗಿದ್ದರು. ಭಾರೀ ಶಬ್ಧ ಬಂತು. ಅಪಘಾತದ ರಭಸಕ್ಕೆ ನಾನು ಮುಂದಿನ ಸೀಟ್‌ಗೆ ಹೋಗಿ ಬಿದ್ದೆ. ನನ್ನ ಮೊಮ್ಮಗನಿಗೆ ಡ್ರೈವರ್ ಪಕ್ಕದ ರಾಡ್‌ ಹೊಡೆದು, ಕಾಲು ಹಾಗೂ ಎದೆಗೆ ಗಾಯಗಳಾಗಿವೆ" ಎಂದರು.

ಮಾತು ಮುಂದುವರಿಸಿದ ಅವರು, "ಘಟನೆ ನಡೆದು ಒಂದು ಕ್ಷಣದಲ್ಲಿ ಅಯ್ಯೋ ಅಂತ ಕಣ್ಣು ಬಿಡುವಷ್ಟರಲ್ಲಿ ನಮಗೆ ದಿಗ್ಭ್ರಮೆ ಆಗಿತ್ತು. ಮುಂದಿನ ಸೀಟ್‌ನಲ್ಲಿ ಹುಡುಗಿಯೊಬ್ಬಳು ಮಗು ಎತ್ತಿಕೊಂಡು ಕುಳಿತಿದ್ದಳು. ಅಪಘಾತವಾದಾಗ ಅವಳು ಅಷ್ಟು ದೂರ ಹೋಗಿ ಬಿದ್ದಳು. ಕೂಡಲೇ ಅಕ್ಕಪಕ್ಕದವರು ಆಕೆಯನ್ನು ಎಳೆದುಕೊಂಡರು" ಎಂದು ಘಟನೆಯನ್ನು ವಿವರಿಸಿದರು.

ಇನ್ನು ಅಪಘಾತ ನಡೆದ ಸ್ಥಳಕ್ಕೆ ಅರಸೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಹಾಲಿನ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ಘಟನೆ ನಡೆದ ಕ್ಷಣಾರ್ಧದಲ್ಲಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಅರಸೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+