ಹಾಸನ: ನಕಲಿ ಗನ್‌ನಲ್ಲಿ ತಿರ್ಪೆ "ಶೋಕಿ" ಮಾಡಲು ಹೋಗಿ ಪೇಚಿಗೆ ಸಿಲುಕಿದ ಇಬ್ಬರು ಮುಸ್ಲಿಂ ಯುವಕರು
ಹಾಸನ, ಜೂನ್, 30: ಇತ್ತೀಚಿನ ದಿನಗಳಲ್ಲಿ ಬೈಕ್‌ನಲ್ಲಿ ವಿಲ್ಹಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಮುಸ್ಲಿಂ ಯುವಕರಿಬ್ಬರು ಗನ್ ಹಿಡಿದು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ರೀಲ್ಸ್ ಮಾಡುವ ಮೂಲಕ ಪುಂಡಾಟ ಮೆರೆದಿರುವ ಘಟನೆ ಹಾಸನದ ರಿಂಗ್ ರೋಡ್‌ನಲ್ಲಿ ನಡೆದಿದೆ. ಇನ್ನು ಈ ಪುಂಡಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಈ ಗನ್ ಬಗ್ಗೆ ಎಸ್‌ಪಿ ಹೇಳಿದ್ದೇನು ಅನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹಾಸನದ ರಿಂಗ್ ರೋಡ್‌ನಲ್ಲಿ ಇಬ್ಬರು ಮುಸ್ಲಿಂ ಯುವಕರು ಗನ್ ಹಿಡಿದು ಬುಲೆಟ್ ಬೈಕ್‌ನಲ್ಲಿ ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಹಾಸನ ಪೊಲೀಸರು ರೀಲ್ಸ್ ಮಾಡಿ ಪುಂಡಾಟ ಮೆರೆದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಂತರ ಈ ಬಗ್ಗೆ ಹಾಸನ ಜಿಲ್ಲೆ ಎಸ್‌ಪಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿ, ಇದು ನಕಲಿ ಗನ್ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿರುವ ಈ ವೀಡಿಯೋ ಬಗ್ಗೆ ಪ್ರೀತಂಗೌಡ ಬೆಂಬಲಿಗರು ಕೂಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳ ಕಡೆಗೆ ಗಮನಹರಿಸಿ ಎಂದು ಹಾಸನ ಶಾಸಕ ಸ್ವರೂಪ್‌ಗೆ ಟ್ಯಾಗ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ಧಾರೆ.












Click it and Unblock the Notifications