ಪ್ರತಿಭಾವಂತ ಕಲಾವಿದ ರಮೇಶ್ ತೇರದಾಳ್ ಗೆ ಹಂಗೇರಿಯ ಅಂತರಾಷ್ಟ್ರೀಯ ಪ್ರಶಸ್ತಿ

ಹಾಸನ, ಜೂನ್.19 : ಜಿಲ್ಲೆಯ ನಿರ್ವಾಣ ಆರ್ಟ್ ಫೌಂಡೇಶನ್‌ನ ರಮೇಶ್ ತೇರದಾಳ್ ಅವರಿಗೆ ಮಧ್ಯ ಯೂರೋಪ್ ನ ಹಂಗೇರಿ ರಾಷ್ಟ್ರದ ಸಿಕ್ಸ್ ಹೌಸ್ ಸಂಸ್ಥೆಯು ವರ್ಷದ ಅತಿಥಿ ಕಲಾವಿದ- 2018 (ಗೆಸ್ಟ್ ಆರ್ಟಿಸ್ಟ್ ಆಫ್ ದಿ ಈಯರ್) ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ಇಪ್ಪತ್ತನೇ ಶತಮಾನದ ಬಹು ಮುಖ್ಯ ಚಿತ್ರ ಕಲಾವಿದೆಯಾಗಿದ್ದ ಅಮೃತಾ ಶೇರ್ ಗಿಲ್ ಅವರ ನಂತರ ಈ ಪ್ರಶಸ್ತಿ ಈ ಬಾರಿ ಕನ್ನಡಿಗರೊಬ್ಬರಿಗೆ ಬಂದಿದೆ. ಜೂನ್ 14 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಮೇಶ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಮುಖರಾದ ಗ್ಯಾಬಿ, ಇಸ್ತ್ ವಾನ್, ರೊಜಾಲಿಯಾ, ಗಾಂಕ್ಝಿ, ಮೊನಿಕಾ ಹಾಗೂ ಕಿಸ್ ಡೊರೊಟ್ಯಾ ಈ ವೇಳೆ ಹಾಜರಿದ್ದರು.

Ramesh Theradal has won the Hungarian International Award

ಕನ್ನಡದ ಪ್ರತಿಭಾವಂತ ಕಲಾವಿದರಾದ‌ರಲ್ಲಿ ರಮೇಶ್ ತೇರದಾಳ್ ಒಬ್ಬರು. ಗ್ರಾಮೀಣ ಪ್ರದೇಶದ ರಗಡುತನವನ್ನು ರಮೇಶ್ ಅದ್ಭುತವಾಗಿ ಬಣ್ಣಗಳಲ್ಲಿ ಮೂಡಿಸಿ ಪ್ರಖ್ಯಾತರಾಗಿದ್ದಾರೆ.

ಇವರ ಕಲಾತ್ಮಕ ಚಿತ್ರಗಳು ಹಂಗೇರಿಯ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡಿತ್ತು. ಹಂಗೇರಿ ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಹಂಗೇರಿ, ಸ್ಲೊವೇನಿಯಾ, ಸ್ವೀಡನ್, ಫ್ರಾನ್ಸ್ ಮತ್ತು ಭಾರತದ ಚಿತ್ರಕಲಾ ಶಿಕ್ಷಕರ ಚಿತ್ರಗಳು ಪ್ರದರ್ಶನಗೊಂಡಿತ್ತು.

Ramesh Theradal has won the Hungarian International Award

ಅದರಲ್ಲಿ ಭಾರತದಿಂದ ಒಟ್ಟು ನಾಲ್ವರು ಆಯ್ಕೆಯಾಗಿ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇವರೆಲ್ಲರೂ ರಮೇಶ್ ತೇರದಾಳ್ ಅವರ ನೇತೃತ್ವದಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+