Prajwal Revanna: ಬ್ಲ್ಯೂ ಫಿಲ್ಮ್ ಮಾಡುವವರ ಕಡೆಯೂ ಇಷ್ಟೊಂದು ವಿಡಿಯೋ ಇದಾವೋ.. ಇಲ್ವೊ ಗೊತ್ತಿಲ್ಲ-ಮಾಜಿ ಸಂಸದ
ಮಂಡ್ಯ, ಮೇ, 04: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಆಶ್ಲೀಲ ವಿಡಿಯೋ ಪ್ರಕರಣ ಬರೀ ರಾಜ್ಯ, ದೇಶ ಅಲ್ಲದೆ, ವಿದೇಶಗಳಲ್ಲೂ ಕೂಡ ಸದ್ದು ಮಾಡುತ್ತಿದೆ. ಅಲ್ಲದೆ ಈ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪ್ರಜ್ವಲ್ ವಿರುದ್ಧ ಇದೀಗ ರಾಜ್ಯದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಇನ್ನು ಈ ಬಗ್ಗೆ ಮಂಡ್ಯದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಎನ್‌ಡಿಎನಿಂದ ಹೊರ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಒತ್ತಾಯ ಮಾಡಿದ್ದಾರೆ.

ಇನ್ನು ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ಲ್ಯೂ ಫಿಲ್ಮ್ ಮಾಡುವವರ ಕಡೆಯೂ ಇಷ್ಟೊಂದು ವಿಡಿಯೋ ಇದಾವೋ ಇಲ್ಲ ಗೊತ್ತಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗುಡುಗಿದ್ದಾರೆ.
ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ನೀಚ ಕೃತ್ಯವನ್ನು ನೋಡುವ ದೌರ್ಭಾಗ್ಯ ಬಂದಿದೆ. ನನ್ನನ್ನೂ ಸೇರಿದಂತೆ ಹಲವರನ್ನ ಮುಗಿಸಿರೋದೇ ಇದೇ ಕಂಪನಿ ಎಂದು ಹೇಳಿದರು. ಇನ್ನು ಗಂಗಾಧರ್ ಕೊಲೆ ಕೇಸ್‌ನಲ್ಲಿ ನನ್ನನ್ನು ಸೇರಿಸಲು ದೇವೇಗೌಡ್ರು 8 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು. ಇದೀಗ ನೊಂದವರ ಶಾಪವೇ ಇಂದು ಅವರಿಗೆ ತಟ್ಟಿದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾಡಿರುವ ನೀಚ ಕೆಲಸದಿಂದ ದೇವೇಗೌಡರು ತಲೆ ತಗ್ಗಿಸುವಂತಾಗಿದೆ. ಐದು ವರ್ಷ ಎಂಪಿ ಆಗಿ ದಿನಕ್ಕೆ ಮೂರು ಜನರಂತೆ ರುಬ್ಬಿದ್ದಾರೆ ಎಂದು ಆರೋಪಿರುವ ಮಾಜಿ ಎಲ್‌ಆರ್.ಶಿವರಾಮೇಗೌಡ, ಅವರ ಕುಟುಂಬದಿಂದ ಅನ್ಯಾಯಕ್ಕೊಳಗಾಗಿರುವ ಸಂತ್ರಸ್ತರ ಪಟ್ಟಿಯಲ್ಲಿ ನಾನೂ ಕೂಡ ಇದ್ದೀನಿ ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಸನಕ್ಕೆ ಭೇಟಿ ನೀಡಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು. ಅನ್ಯಾಯ ಆಗಿರುವುದು ನಿಮ್ಮ ಕುಟುಂಬದಿಂದ. ಹಾಗಾಗಿ ನೀವು ಧಮ್ಕಿ ಹಾಕೋದನ್ನು ಬಿಟ್ಟುಬಿಡಿ. ಹಾಸನ ಡಿಸಿ ಅವರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದು ಸರಿಯಲ್ಲ. ಅವರು ಸರಿಯಾಗಿ ಮಾತನಾಡಿದ್ದಾರೆ ಎಂದರು.
ಇನ್ನು ಯಾರೂ ಮಾಡದ ಘೋರ ಅಪರಾಧ ಮಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರನ್ನೂ ಬಂಧಿಸಬೇಕು. ಒಂದು ವೇಳೆ ತಂದೆ-ಮಗ ಇಬ್ಬರೂ ತಪ್ಪಿಲ್ಲದಿದ್ದರೆ ಅದನ್ನೂ ಬಹಿರಂಗಪಡಿಸಲಿ.
ರೇವಣ್ಣರನ್ನು ನಾನು ಇಂದು ನೋಡ್ತಿಲ್ಲ. ಇಂಗ್ಲೆಂಡ್‌ಗೆ ಹೋಗಿದ್ದ ಸಂದರ್ಭದಲ್ಲೇ ಅವರು ಅಲ್ಲೇ ತಗಲಾಕಿಕೊಂಡಿದ್ದರು ಎಂದರು.
ಎಚ್.ಡಿ.ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ಇರುವ ವ್ಯಕ್ತಿಯಲ್ಲ. ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಮಾಡುವಾಗ ಅವರ ಅಪ್, ಅಮ್ಮ ಕತ್ತೆ ಕಾಯುತ್ತಿದ್ರಾ? ಇಂತಹ ವಿಕೃತ ಮನಸ್ಥಿತಿಯವರನ್ನು ನಾನು ಎಲ್ಲಿಯೂ ನೋಡೇ ಇಲ್ಲ. ಪ್ರಜ್ವಲ್ ಮುಂದೆ ಉಮೇಶ್ ರೆಡ್ಡಿಯೂ ಏನು ಇಲ್ಲ ಎಂದು ಹೇಳಿದರು.












Click it and Unblock the Notifications