ಹಾಸನದಲ್ಲಿ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

ಹಾಸನ, ನವೆಂಬರ್ 04: ಹಾಸನದಲ್ಲಿ ಬುಧವಾರ ಗುಂಡಿನ ಸದ್ದು ಕೇಳಿಸಿದ್ದು, ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಆತನನ್ನು ಬಂಧಿಸಿದ್ದಾರೆ.

ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೌಡಿ ಶೀಟರ್ ಸುನಿಲ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಮೂವರು ಯುವಕರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುನಿಲ್ ನನ್ನು ಬಂಧಿಸಲು ಹುಡುಕುತ್ತಿದ್ದರು.

Hassan: Police Firing On Rowdy Sheeter Sunil

ಬುಧವಾರ ಸುನಿಲ್ ಸೆರೆ ಸಿಕ್ಕಿದ್ದು, ಬಂಧಿಸುವ ವೇಳೆ ಹಾಸನ ಗ್ರಾಮಾಂತರ ಪಿಎಸ್ ಐ ಸುರೇಶ್ ಗೆ ಚೂರಿ ಇರಿದಿದ್ದಾನೆ. ಈ ಸಮಯದಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆ ನಂತರವೂ ಆರೋಪಿ ದಾಳಿ ಮಾಡಲು ಪ್ರಯತ್ನಿಸಿದ್ದಾನೆ. ಹೀಗಾಗಿ ಸುನಿಲ್ ಮೇಲೆ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ತಗುಲಿದ್ದು, ಸುನಿಲ್ ನನ್ನು ಬಂಧಿಸಲಾಗಿದೆ. ಗಾಯಾಳು ಪಿಎಸ್ ಐ ಹಾಗೂ ಗುಂಡೇಟು ಬಿದ್ದ ರೌಡಿ ಶೀಟರ್ ನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Recommended Video

      Arnab Goswami ARRESTED : Nation ವಾಂಟ್ಸ್ to know ರೀಸನ್!! | Oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+