ಕೊರೊನಾ ವೈರಸ್: ಹಾಸನ ಜಿಲ್ಲೆಯ ಸ್ಥಿತಿಗತಿ
ಹಾಸನ, ಏಪ್ರಿಲ್ 21: ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಹಾಸನ ಜಿಲ್ಲಾಧಿಕಾರಿ ಮಂಗಳವಾರಕ್ಕೆ ಕೊನೆಗೊಂಡಂತೆ ಅಂಕಿ ಆಂಶ ಬಿಡುಗಡೆ ಮಾಡಿದ್ದಾರೆ.
Recommended Video
ಹಾಸನದಲ್ಲಿ ಇದುವರೆಗೆ ಕೊರೋನಾ ಶಂಕಿತರೆಂದು 1035 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 508 ಜನ ಭಾರತೀಯರು ಹಾಗೂ 109 ಜನ ವಿದೇಶಿಯರಾಗಿರುತ್ತಾರೆ ಹಾಗೂ ಶೀತ, ನೆಗಡಿ, ಕೆಮ್ಮು ಇರುವ 383 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ.
10 ದಿನದಿಂದ ಜ್ವರ, ಕೆಮ್ಮು, ನೆಗಡಿ ಕಂಡುಬಂದಿರುವ 35 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 731 ಜನರ ಗಂಟಲ ಶ್ರಾವವನ್ನು ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರ ವರದಿ ನೆಗೆಟೀವ್ ಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟು 14 ದಿನಗಳ ವರೆಗಿರುವ 10 ಜನರನ್ನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಇದಲ್ಲದೇ 14 ದಿನದಿಂದ 28 ದಿನಗಳ ವರೆಗಿರುವ 69 ಮಂದಿಯ ದೈನಂದಿನ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ.
413 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 49 ಜನ ಆಸ್ಪತ್ರೆಯ ಐಸೋಲೇಷನ್‍ನಲ್ಲಿ ಇದ್ದಾರೆ, 293 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications