ಹಾಸನ ಜಿಲ್ಲಾ ಪ್ರವಾಸಿ ತಾಣಗಳ ವೆಬ್ಸೈಟ್ ಲೋಕಾರ್ಪಣೆ

ಹಾಸನ, ಸೆಪ್ಟೆಂಬರ್ 28: ಸಂಸ್ಕೃತಿ, ಕಲೆ, ನಿಸರ್ಗ ರಮಣೀಯ ತಾಣಗಳು, ಅವುಗಳ ಹಿನ್ನೆಲೆ ಹೊಂದಿರುವ ಹಾಸನ ಪ್ರವಾಸಿ ವೆಬ್ ಸೈಟ್ ನ್ನು ಲೋಕಾರ್ಪಣೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸಿದ್ದಪಡಿಸಿರುವ ಪ್ರವಾಸಿ ಮಾರ್ಗದರ್ಶಿ ಸಾಕ್ಷ್ಯಚಿತ್ರ, ಪ್ರವಾಸಿ ವೆಬ್ಸೈಟ್, ಟ್ವಿಟರ್ ಖಾತೆ ಸೇರಿದಂತೆ ಸಾಮಾಜಿಕ ಮಾಧ್ಯಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಾಸನ ಜಿಲೆಯಲ್ಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ ಇಲ್ಲಿರುವ ಕಲೆ,ಸಂಸ್ಕೃತಿ, ಪ್ರಾಕೃತಿಕ ತಾಣಗಳು ಪಾರಂಪರಿಕ ಕೇಂದ್ರಗಳ ಬಗ್ಗೆ ವ್ಯವಸ್ಥಿತ ಪ್ರಚಾರ ನೀಡಲು ಜಿಲ್ಲಾಡಳಿತ ಮುಂದಾಗಿರುವುದು ಪ್ರಶಂಸನೀಯ ಎಂದರು.

ಜಿಲ್ಲೆಯು ಬಹು ಸಂಸ್ಕೃತಿಯ ನಾಡು ಇದು ಕಲೆಗಳ ತವರೂರು ನಿಸರ್ಗ ರಮಣೀಯ ತಾಣಗಳು ಇವೆ. ವಿವಿಧ ವಿಷಯಗಳಿಂದ ಪ್ರಾಮುಖ್ಯತೆ ಪಡೆದು ಹಲವು ಸ್ಥಳಗಳು ವಿಶ್ವದ ಗಮನ ಸೆಳೆಯುವಲ್ಲಿ ಮಾಹಿತಿ ಕೊರತೆಯಿಂದ ಹಿಂದೂಳಿದಿದೆ.

ಇದೀಗ ಜಿಲ್ಲಾಡಳಿತ ಪ್ರವಾಸಿ ಮಾರ್ಗದರ್ಶಿ ವೆಬ್ಸೈಟ್, ವಿಡಿಯೋ ಚಿತ್ರಗಳನ್ನು ಸಾರ್ವನಿಕರಿಗೆ ಬಿಡುಗಡೆಮಾಡಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಇದಕ್ಕೆ ಪೂರಕವಾದ ಮೂಲಭೂತ ಸೌಕಾರ್ಯಗಳ ಅಭಿವೃದ್ಧಿಯನ್ನು ಮಾಡಬೇಕೆಂದು ರಾಜ್ಯ ಸರ್ಕಾರ ಮಾಡಲಿದೆ ಎಂದು ಹೇಳಿದರು.

ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹಾಸನ ಪ್ರವಾಸಿ ತಾಣಗಳನ್ನು ವಿಶ್ವ ದರ್ಶನಕ್ಕೆ ತೆರೆದಿಟ್ಟ ಜಿಲ್ಲಾದಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರಿಗೆ ಅಭಿನಂದನೆ ಸೂಚಿಸಿದರು.

ಜಿಲ್ಲಾದಿಕಾರಿ ರೋಹಿಣಿ ಸಿಂಧೂರಿ ದಾಸರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ಮಹಾಮಸ್ತಕಾಭಿಷೇಕ ವಿಶೇಷ ಕರ್ತವ್ಯಾಧಿಕಾರಿ ವರಪ್ರಸಾದ್ ರೆಡ್ಡಿ, ಪ್ರವಾಸೋಧ್ಯಮ ಇಲಾಖೆ ಉಪನಿರ್ದೇಶಕರಾದ ಜಿತೇಂದ್ರನಾಥ್ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+