ದೇವೇಗೌಡರು ಮನೆಯಲ್ಲಿ ಯಾರ ಬೃಹತ್ ಭಾವಚಿತ್ರ ಅನಾವರಣ ಮಾಡಿದ್ರು?
Recommended Video

ಎಚ್ ಡಿ ದೇವೇಗೌಡ್ರ ಮನೆಗೆ ಹೊಸ ಅತಿಥಿಯ ಆಗಮನ | Oneindia Kannada
ಬೆಂಗಳೂರು, ಸೆಪ್ಟೆಂಬರ್ 4: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ತಮ್ಮ ಮನೆಯಲ್ಲಿ ಯಾರ ಬೃಹತ್ ಭಾವಚಿತ್ರವನ್ನು ಅನಾವರಣ ಮಾಡಿದ್ದಾರೆ ಎಂದು ಗೊತ್ತೇ?
ನೀವು ಊಹೆ ಮಾಡಿದ್ದು ಸತ್ಯ ಅವು ಯಾವುದೋ ಮಹಾನ್ ನಾಯಕರ ಭಾವಚಿತ್ರವಾಗಲಿ ಅಥವಾ ಕುಟುಂಬದ ಭಾವಚಿತ್ರವಾಗಲಿ ಹಾಕಿಲ್ಲ ಬದಲಾಗಿ ಅವರು ತಾವು ನಂಬುವಂತಹ ಕಾಶಿ ವಿಶ್ವನಾಥನ ಬೃಹತ್ ಭಾವಚಿತ್ರವನ್ನು ಅನವಾರಣಗೊಳಿಸಿದ್ದಾರೆ.
ರಾಜಕೀಯ ಹಾಗೂ ಖಾಸಗಿ ಬದುಕಿನಲ್ಲಿ ದೇವರನ್ನೇ ನಂಬಿ ಎಲ್ಲಾ ಕಾರ್ಯ ಮಾಡುವ ದೇವೇಗೌಡರ ಮನೆಗೆ ಇದೀಗ ಕಾಶಿ ವಿಶ್ವನಾಥನ ಆಗಮನವಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಎಚ್‌ಡಿ ದೇವೇಗೌಡ ಮತ್ತು ಸಚಿವ ಎಚ್‌ಡಿ ರೇವಣ್ಣ ಅವರು ಕುಟುಂಬದಲ್ಲಿ ಎಲ್ಲರಿಗಿಂತ ಹೆಚ್ಚು ದೇವರನ್ನು ನಂಬುತ್ತಾರೆ, ಆರಾಧಿಸುತ್ತಾರೆ. ದೇವೇಗೌಡ ಅವರು ತಾವೇ ಭಕ್ತಿಯಿಂದ ಕಾಶಿಗೆ ವಿಶ್ವನಾಥನ ಸನ್ನಿಧಿಗೆ ಹೋದಾಗ ತಂದಿದ್ದ ಫೋಟೊ ಇದಾಗಿದೆ.ಖುದ್ದಾಗಿ ನಿಂತು ಹಾಸನದ ತಮ್ಮ ನಿವಾಸದ ಪೂಜಾಲಯದಲ್ಲಿ ಅಳವಡಿಸಿದ್ದಾರೆ.












Click it and Unblock the Notifications