ಟೊಮೆಟೊ ಜಮೀನೇ ಕಳ್ಳರ ಟಾರ್ಗೆಟ್‌: ಹಾಸನಲ್ಲಿ ಲಕ್ಷಾಂತರ ರೂ ಟೊಮೆಟೊ ಕಳ್ಳತನ

ಹಾಸನ, ಜುಲೈ 05: ಅತ್ತೆಗೊಂದು ಕಾಲ..ಸೊಸೆಗೊಂದು ಕಾಲ ಎನ್ನುವಂತೆ ಈ ಬಾರಿ ಮುಂಗಾರು ಮಳೆಯ ಆಟದಿಂದ ಸದ್ಯ ತರಕಾರಿಗಳ ದರ ಗಗನಕ್ಕೇರಿದ್ದು, ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಸದ್ಯ ಮಾರುಕಟ್ಟೆಗಳಲ್ಲಿ ಟೊಮೆಟೊ ಬೆಳೆಯುವ ರೈತರಿಗೆ, ಮಾರುವ ವ್ಯಾಪರಸ್ಥರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌ ಆಗಿದೆ.

ಬಂಗಾರದ ಬೆಲೆಯಾಗಿರುವ ಟೊಮೆಟೊವನ್ನು ರಕ್ಷಿಸಿಕೊಳ್ಳುವುದೇ ರೈತರಿಗೆ ಒಂದು ಸವಾಲಾಗಿದ್ದು, ಮೊದಲೆಲ್ಲ ಮನೆ, ಬೆಲೆ ಬಾಳುವ ವಸ್ತುಗಳಿರುವ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ಟೊಮೊಟೊ ಜಮೀನಿಗೆ ಕನ್ನ ಹಾಕುತ್ತಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ. ಇಂತಹ ಒಂದು ಘಟನೆ ನಮ್ಮ ಕರ್ನಾಟಕದಲ್ಲಿಯೇ ಬೆಳಕಿಗೆ ಬಂದಿದೆ.

Lakhs Of RS Worth Tomato Theft In Hassan

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೊಟೊ ಕಳ್ಳತನ ನಡೆದಿದ್ದು, ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದಾರೆ. ಗೋಣಿ ಸೋಮನಹಳ್ಳಿಯ ಧರಣಿ ಎನ್ನುವ ರೈತನ ಜಮೀನಿನಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಧರಣಿ ಅವರ ಜಮೀನಿನಲ್ಲಿ ಈ ಬಾರಿ ಉತ್ತಮ ಟೊಮೆಟೊ ಇಳುವರಿ ಬಂದಿದ್ದು, ಗರಿಷ್ಠ ದರ ಇರುವುದರಿಂದ ಕಳೆದ ಮೂರು ದಿನದಿಂದ ಟೊಮೆಟೊ ಕೊಯ್ದು ಮಾರಾಟ ಮಾಡುತ್ತಿದ್ದರು. ಆದರೆ, ಕಳೆದ ರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಚೀಲದಷ್ಟು ಟೊಮೆಟೊ ಕಳ್ಳತನ ಮಾಡಿದ್ದಾರೆ.

ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೊ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ ರೈತ ಧರಣಿ ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೊ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಹಳೇಬೀಡು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

Lakhs Of RS Worth Tomato Theft In Hassan

ಟೊಮೆಟೊ ವ್ಯಾಪಾರಕ್ಕೆ ಸಿಸಿ ಟಿವಿ ಕಣ್ಗಾವಲು: ಸಂತೆಯಲ್ಲಿ ಬೆರಗಾದ ಜನರು..!

ಧಾರವಾಡ: ಟೊಮೆಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಟೊಮೆಟೊದ್ದೇ ಮಾತುಕತೆ. ಶತಕ ಬಾರಿಸಿದ ಟೊಮೆಟೊ ಹಣ್ಣಿಗೆ ಈಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಟೊಮೆಟೊ ಕಳ್ಳತನ ಆಗದಂತೆ ವ್ಯಾಪಾರಿಯೊಬ್ಬರು ಎಚ್ಚರಿಕೆ ವಹಿಸಿದ್ದಾರೆ

ಸಂತೆಯಲ್ಲಿ ಟೊಮೆಟೊ ಹಣ್ಣಿಗಾಗಿಯೇ ಸಿ.ಸಿ ಟಿವಿ ಹಾಕಿರುವ ದೃಶ್ಯ ಎಲ್ಲರನ್ನೂ ಬೇರಗಾಗುವಂತೆ ಮಾಡಿದೆ. ಸಿಸಿ ಟಿವಿ ಕಾವಲಿನಲ್ಲಿ ಟೊಮೆಟೊ ವ್ಯಾಪಾರ ನಡೆದಿದೆ. 1 ಕೆ.ಜಿ ಟೊಮ್ಯಾಟೊ ಬೆಲೆ 150 ರೂಪಾಯಿ ಹಿನ್ನಲೆಯಲ್ಲಿ ಖರೀದಿ ಮಾಡುವ ನೆಪದಲ್ಲಿ

ಜನ ಟೊಮೆಟೊ ಕಳ್ಳತನ ಮಾಡಬಾರದು ಎಂಬ ಕಾರಣಕ್ಕೆ ಸಿ.ಸಿ ಕ್ಯಾಮರಾ ಅಳವಡಿಸಿದ್ದಾರೆ.

ಕುಂದಗೋಳ ತಾಲೂಕು ಸಂಶಿ ಗ್ರಾಮದಲ್ಲಿ ಟೊಮೆಟೊ ವ್ಯಾಪಾರಸ್ಥ ಕೃಷ್ಣಪ್ಪ ಸಿ.ಸಿ ಕ್ಯಾಮರಾ ಅಳವಡಿಕೆ ಮಾಡಿದ್ದು, ಒಂದು ಎರಡು ಟೊಮೆಟೊ ಕದ್ದರೂ ನಷ್ಟವಾಗುತ್ತದೆ. ಹೀಗಾಗಿ ಸಿ.ಸಿ ಟಿವಿ ಹಾಕಿರುವೆ ಎಂದು ವ್ಯಾಪಾರಸ್ಥ ಕೃಷ್ಣಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+