ಬೇಲೂರು: ಮತದಾನ ಮಾಡಿ ಹೊರ ಬಂದ ವ್ಯಕ್ತಿ ಮತಗಟ್ಟೆ ಆವರಣದಲ್ಲೇ ಸಾವು
ಹಾಸನ, ಮೇ 10: ಮತದಾನ ಮಾಡಿ ಹೊರ ಬಂದ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಜಯಣ್ಣ (49) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಯಣ್ಣ ಮತದಾನ ಮಾಡಲು ಚಿಕ್ಕೋಲೆ ಗ್ರಾಮದ ಮತ ಕೇಂದ್ರಕ್ಕೆ ಆಗಮಿಸಿದ್ದರು. ಮತದಾನ ಮಾಡಿದ ಬಳಿಕ ಹೊರಬರುತ್ತಿದ್ದಂತೆ ಕುಸಿದು ಬಿದ್ದ ಜಯಣ್ಣ ಹೃದಯಾಘಾತದಿಂದ ಮತಗಟ್ಟೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಈಗಾಗಲೇ ಮತದಾನ ನಡೆಯುತ್ತಿದ್ದು. ಮೇ 10 ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಜನ ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.
ಮತದಾನ ಮಾಡಿ ಹೊರ ಬಂದ ಬಳಿಕ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.
— oneindiakannada (@OneindiaKannada) May 10, 2023
ಹೆಚ್ಚಿನ ಮಾಹಿತಿಗಾಗಿ...👇https://t.co/lGxeuzu4Nv
#KarnatakaAssemblyElection2023 #KarnatakaElection2023 #Election2023 #KarnatakaElectionsWithOI pic.twitter.com/zRb1TQrX5F
ಹಾಸನ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದ್ದು, ಕ್ಷೇತ್ರದ ಶಾಸಕರನ್ನು ಆಯ್ಕೆ ಮಾಡಲು ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೂ ಮತದಾನ ನಡೆಯಲಿದೆ. ಏಳು ವಿಧಾನಸಭಾ ಕ್ಷೇತ್ರಗಳ 73 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಜಿಲ್ಲೆಯಲ್ಲಿ ಒಟ್ಟು 14,99,917 ಮತದಾರರಿದ್ದು, 7,49,720 ಪುರುಷ ಹಾಗೂ 7,50,153 ಮಹಿಳಾ ಮತದಾರರಿದ್ದಾರೆ. ಹಾಗೂ ಈ ಬಾರಿ 27,135 ಯುವ ಮತದಾರರಿದ್ದಾರೆ.












Click it and Unblock the Notifications