ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸನ ದೇವಾಲಯದ ಅರ್ಚಕರನ್ನೂ ಬಿಡದ ಐಟಿ ಅಧಿಕಾರಿಗಳು

|
Google Oneindia Kannada News

ಹಾಸನ, ಏ.12: ಜೆಡಿಎಸ್ ಭದ್ರಕೋಟೆ ಮಂಡ್ಯ ಬಳಿಕ ಹಾಸನದ ಹದರನಹಳ್ಳಿ ಈಶ್ವರ ದೇವಾಲಯದ ಅರ್ಚಕರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೊಂದು ವಿಚಾರವೆಂದರೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಮನೆ ದೇವರು ಇರುವ ದೇವಸ್ಥಾನವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅರ್ಚಕ ಪ್ರಕಾಶ್​ ಭಟ್​ ಅವರ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ಜತೆಗೆ ದೇವಾಲಯದ ಪ್ರಾಂಗಣದಲ್ಲಿ ಶೋಧ ನಡೆಸಲಾಗಿದೆ. ದೇಗುಲದಲ್ಲಿ ಹಾಗೂ ಅರ್ಚಕರ ಮನೆಯಲ್ಲಿ ಹಣ ಇಟ್ಟಿರಬಹುದು ಎಂಬ ಅನುಮಾನದ ಮೇಲೆ ಶೋಧ ನಡೆಸಿರಬಹುದು. ಆದರೆ ದೇವಾಲಯ ಮತ್ತು ಮನೆಯಲ್ಲಿ ಏನೂ ಸಿಗದೆ ಐಟಿ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗಿದ್ದಾರೆ ಎನ್ನಲಾಗಿದೆ.

ತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿ ತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿ

ಗರ್ಭಗುಡಿ ಶೋಧನೆಗೆ ಮುಂದಾದಾಗ ಗರ್ಭಗುಡಿ ಪ್ರವೇಶಿಸದಂತೆ ತಡೆದೆವು. ದೇವಸ್ಥಾನ ಮತ್ತು ನಮ್ಮ ಮನೆಯಲ್ಲಿ ಅವರಿಗೆ ಏನೂ ಸಿಗಲಿಲ್ಲ ಎಂದು ಅರ್ಚಕರ ಪತ್ನಿ ನೀಲಮ್ಮ ತಿಳಿಸಿದ್ದಾರೆ.

It rais on Hassan Eshwara temple

ಈ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು,ಈಶ್ವರನನ್ನು ಮುಟ್ಟಿದರೆ ಉಳಿವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಎಚ್‌ಡಿ ರೇವಣ್ಣ ಕೂಡ ಈ ಕುರಿತು ಮಾತನಾಡಿದ್ದು, ದಾಳಿ ಈಶ್ವರನ ಮೇಲಾದರೂ ಮಾಡಲಿ, ಅರ್ಚಕರ ಮೇಲಾದರೂ ಮಾಡಲು ದೇವಸ್ಥಾನದಲ್ಲಿ ಏನು ಸಿಗುತ್ತೆ ಎಂದು ಹೇಳಿದ್ದಾರೆ.

English summary
Income tax officials made an search in Hadaranahalli Eshwara temple and main priest hpuse. But officers didnot find anthing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X