ಐಸ್ ಕ್ರೀಂ ಫ್ಯಾಕ್ಟರಿ ಉದ್ಘಾಟಿಸಿ, ಐಸ್ ಕ್ರೀಂ ಸವಿದ ಕುಮಾರಸ್ವಾಮಿ
Recommended Video

ಹಾಸನ, ಸೆಪ್ಟೆಂಬರ್ 23 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಹಾಸನದಲ್ಲಿ ಐಸ್ ಕ್ರೀಂ ಫ್ಯಾಕ್ಟರಿ ಉದ್ಘಾಟನೆ ಮಾಡಿದರು. ಬಳಿಕ ಐಸ್ ಕ್ರೀಂ ಸವಿದು ಸಂತಸ ಪಟ್ಟರು.
ಭಾನುವಾರ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನ ಹಾಲು ಒಕ್ಕೂಟದ ವತಿಯಿಂದ ನಿರ್ಮಿಸಲಾದ ಐಸ್ ಕ್ರೀಂ ಫ್ಯಾಕ್ಟರಿ ಉದ್ಘಾಟನೆ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಸಚಿವರಾದ ಎಚ್.ಡಿ ರೇವಣ್ಣ, ಜಿ.ಟಿ.ದೇವೇಗೌಡ, ಸಾ.ರಾ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ಹಾಸನ ಹಾಲು ಒಕ್ಕೂಟದ ವತಿಯಿಂದ 556.20ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಮಾರಸ್ವಾಮಿ ಅವರು ಚಾಲನೆ ನೀಡಿದರು. ಇದರಲ್ಲಿ 37 ಕೋಟಿ ರೂ. ವೆಚ್ಚದ ಐಸ್ ಕ್ರೀಂ ಘಟಕವೂ ಸೇರಿದೆ.

ರೂ. 279 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಮತ್ತು ಹಾಲಿನಪುಡಿ ಘಟಕ ಸಮುಚ್ಚಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ರೂ.136 ಕೋಟಿ ವೆಚ್ಚದಲ್ಲಿ ಯು.ಹೆಚ್.ಟಿ. ಸುವಾಸಿತ ಹಾಲಿನ ಪೆಟ್ ಬಾಟಲ್ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು.
ರೂ. 23 ಕೋಟಿ ವೆಚ್ಚದಲ್ಲಿ ಹಾಸನ ಡೈರಿ ಸಂಸ್ಕರಣಾ ಸಾಮರ್ಥ್ಯದ 3 ರಿಂದ 5 ಲಕ್ಷ ಲೀ.ಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ, ರೂ.4.5 ಕೋಟಿ ವೆಚ್ಚದಲ್ಲಿ ಎಸ್.ಎಂ.ಒಇ ಗೋದಾಮು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 4.8 ಕೋಟಿ ವೆಚ್ಚದಲ್ಲಿ ಉಗ್ರಾಣ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ, ರೂ. 3.5 ಕೋಟಿ ವೆಚ್ಚದಲ್ಲಿ ಆಡಳಿತ ಕಚೇರಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಗಳು ಸೇರಿದ್ದವು.












Click it and Unblock the Notifications