ಕಳೆದೆರಡು ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ
ಹಾಸನ, ಅ.01: ಹಾಸನ ಜಿಲ್ಲೆಯಲ್ಲಿ ಸೆ.30 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 10.2 ಮಿ.ಮೀ., ದುದ್ದ 3 ಮಿ.ಮೀ., ಶಾಂತಿಗ್ರಾಮ 85 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 16 ಮಿ.ಮೀ., ಗಂಡಸಿ 4.2 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಲ್ಲಿ 23.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2 ಮಿ.ಮೀ. ಉದಯಪುರ 13 ಮಿ.ಮೀ., ಹಿರಿಸಾವೆ 1.2 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 7.6 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಬೆಳಗೋಡು 8.2 ಮಿ.ಮೀ., ಬಾಳ್ಳುಪೇಟೆ 24.2 ಮಿಮೀ., ಹೆತ್ತೂರು 6.8 ಮಿ.ಮೀ., ಹೊಸೂರು 2.2 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 6.2 ಮಿ.ಮೀ, ಹೊಳೆನರಸೀಪುರ 10.2 ಮಿ.ಮೀ. ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 2.4 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 12.4 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು 2.4 ಮಿ.ಮೀ., ಹಳೇಬೀಡು 6.2 ಮಿ.ಮೀ., ಹಗರೆ 32.2 ಮಿ.ಮೀ., ಗೆಂಡೆಹಳ್ಳಿ 5 ಮಿ.ಮೀ., ಅರೆಹಳ್ಳಿ 4.6 ಮಿ.ಮೀ., ಬೇಲೂರು 4.2 ಮಿ.ಮೀ. ಮಳೆಯಾಗಿದೆ.












Click it and Unblock the Notifications