ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಕ್ಕೆ ಸೆಡ್ಡು: ಕಾಡಾನೆ ಓಡಾಡುವ ಜಾಗದಲ್ಲಿ 20 ಅಡಿ ಕಂದಕ ತೆಗೆದ ರೈತರು

By ಹಾಸನ ಪ್ರತಿನಿಧಿ
|
Google Oneindia Kannada News

ಹಾಸನ, ಡಿಸೆಂಬರ್‌ 26: ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ನೂರಾರು ಭಾರಿ ಹೋರಾಟ ನಡೆಸಿದರು ಆಳಿದ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ.

ಇತ್ತೀಚೆಗೆ ಗಜಪಡೆ ಗಲಾಟೆಯಿಂದ ಬೇಸತ್ತು ಹೋಗಿರುವ ರೈತರು ಹಾಗೂ ಕಾಫಿ ಬೆಳೆಗಾರರು ಸರ್ಕಾರಕ್ಕೆ ಸವಾಲ್ ಎಸೆದು ಮತ್ತೊಂದು ಸುತ್ತಿನ ಹೋರಾಟಕ್ಕೆ ಇಳಿದಿದ್ದಾರೆ.

ರಾಜ್ಯ ಮದ್ಯಪಾನ ಪ್ರಿಯರ ಹೋರಾಟ ಸಂಘ ಸ್ಥಾಪನೆ: ಬೇಡಿಕೆಗಳು ಏನೇನು..?ರಾಜ್ಯ ಮದ್ಯಪಾನ ಪ್ರಿಯರ ಹೋರಾಟ ಸಂಘ ಸ್ಥಾಪನೆ: ಬೇಡಿಕೆಗಳು ಏನೇನು..?

ಕಾಡಾನೆಗಳ ಹಿಂಡು ಓಡಾಡುವ ಜಾಗದಲ್ಲಿ 20 ಅಡಿ ಅಗಲ 20 ಅಡಿ ಆಳದ ಕಂದಕ ತೋಡಿದ್ದಾರೆ. ಇದರೊಳಗೆ ಕಾಡಾನೆ ಬಿದ್ದರೆ ಅದನ್ನು ಸರ್ಕಾರ ಅಥವಾ ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದುಕೊಂಡು ಹೋಗಲಿ ಇಲ್ಲವೇ ಕಾಡಾನೆ ಕಂದಕದಲ್ಲಿ ಸಾಯಲಿ ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದಿದ್ದಾರೆ.

ಶಾಶ್ವತ ಪರಿಹಾರ ನೀಡದ ಸರ್ಕಾರ ವಿರುದ್ಧ ರೈತರ ಆಕ್ರೋಶ

ಶಾಶ್ವತ ಪರಿಹಾರ ನೀಡದ ಸರ್ಕಾರ ವಿರುದ್ಧ ರೈತರ ಆಕ್ರೋಶ

ಕಳೆದ ಎರಡು ದಶಕಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು ಇದರಿಂದಾಗಿ ಈ ಭಾಗದ ರೈತರು, ಕಾಫಿ ಬೆಳೆಗಾರರು, ಹಾಗೂ ಜನರು ಹೈರಾಣಾಗಿ ಹೋಗಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ನೂರಾರು ಭಾರಿ ಪ್ರತಿಭಟನೆ, ಬಂದ್, ರಸ್ತೆ ತಡೆ, ಉಪವಾಸ ಸತ್ಯಾಗ್ರಹ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ದಾಳಿಯಿಂದ ಸಾವು ಸಂಭವಿಸಿದಾಗ ಪರಿಹಾರ ಹಾಗೂ ಭರವಸೆ ನೀಡಿದ್ದಾರೆ ಹೊರತು ಗಜಪಡೆ ಗಲಾಟೆಗೆ ಶಾಶ್ವತ ಬ್ರೇಕ್ ಹಾಕಲು ಯಾವ ಸರ್ಕಾರಗಳಿಂದಲೂ ಸಾಧ್ಯವಾಗಿಲ್ಲ.

20 ಅಡಿ ಅಗಲ‌‌ 20 ಉದ್ದದ ಕಂದಕ ತೆಗೆದ ರೈತರು

20 ಅಡಿ ಅಗಲ‌‌ 20 ಉದ್ದದ ಕಂದಕ ತೆಗೆದ ರೈತರು

ಇದುವರೆಗೂ 77 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರೆ 33 ಕಾಡಾನೆಗಳು ಸಾವನ್ನಪ್ಪಿವೆ. ಇತ್ತೀಚೆಗೆ ಕಾಡಾನೆಗಳು ಕಾಡಿಗಿಂತ ಹೆಚ್ಚಾಗಿ ನಾಡಿಗೆ ಲಗ್ಗೆ ಇಡುತ್ತಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಹೋರಾಟ ನಡೆಸಿ ಪರಿಹಾರ ಸಿಗದ ಕಾರಣ ರೈತರು ಹಾಗೂ ಕಾಫಿ ಬೆಳೆಗಾರರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಸಕಲೇಶಪುರ ತಾಲೂಕಿನ, ಹೊಸಕೊಪ್ಪಲು ಗ್ರಾಮದಲ್ಲಿ ಅಮೃತ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ 20 ಅಡಿ ಅಗಲ‌‌ 20 ಉದ್ದದ ಕಂದಕ ತೋಡಿದ್ದಾರೆ. ಕಂದಕದ ಮೇಲೆ ಬಿದಿರು ಹಾಗೂ ಸೊಪ್ಪಿನಿಂದ ಮುಚ್ಚಲಾಗಿದೆ. ಕಾಡಾನೆಗಳ ಹಿಂಡು ಆಹಾರ ಅರಸಿ ಬಂದ ವೇಳೆ ಕಂದಕಕ್ಕೆ ಕೆಡವಲು ಖೆಡ್ಡಾ ತೋರಿದ್ದಾರೆ. ಖೆಡ್ಡಾಗೆ ಬಿದ್ದಾಗ ಸರ್ಕಾರ ಕಾಡಾನೆಗಳನ್ನು ತೆಗೆದುಕೊಂಡು ಹೋಗಲಿ ಇಲ್ಲವೇ ಗುಂಡಿಯಲ್ಲಿ ಬಿದ್ದು ಸಾಯಲಿ. ಇದಕ್ಕೆ ನಾವು ಹೊಣೆಯಲ್ಲ.‌ ನಮ್ಮ ಮೇಲೆ ಕೇಸ್ ದಾಖಲಿಸಿ ಬಂಧಿಸಿದರು ನಾವು ಹೆದರುವುದಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಕಾಡಾನೆ ಕಾಟಕ್ಕೆ ಸಂಕಷ್ಟಕ್ಕೆ ಸಿಲುಕಿದ ರೈತ ವರ್ಗ

ಕಾಡಾನೆ ಕಾಟಕ್ಕೆ ಸಂಕಷ್ಟಕ್ಕೆ ಸಿಲುಕಿದ ರೈತ ವರ್ಗ

ಕಾಡಾನೆಗಳ ದಾಂಧಲೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದೇವೆ. ಸಾಲ ಸೂಲ ಮಾಡಿ ಬೆಳೆದ ಕಾಫಿ, ಭತ್ತ, ಮೆಣಸು, ಬಾಳೆ, ಅಡಿಕೆ, ತೆಂಗು ಸೇರಿದಂತೆ ಇತರೆ ಬೆಳೆಗಳನ್ನು ಸಂಪೂರ್ಣ ತಿಂದು, ತುಳಿದು ನಾಶಪಡಿಸಿವೆ. ಇಷ್ಟಾದರೂ ಆಳುವ ಸರ್ಕಾರಗಳು ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ಬೇರೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆ ಮೂಲಕ ನೀರು ಹರಿಸುವ ಯೋಜನೆ ಜಾರಿಗೆ ತಂದಿದ್ದೀರಿ. ಆದರೆ ನಮ್ಮ ಸಮಸ್ಯೆ ನಿಮಗೆ ಕಾಣುತ್ತಿಲ್ಲವಾ..? ನಮಗೆ ಸರ್ಕಾರದ ಪರಿಹಾರ ಬೇಡ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಿ ಇಲ್ಲಾ ದಯಾಮರಣಕ್ಕೆ ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆಯನ್ನು ಖೆಡ್ಡಾಕ್ಕೆ ಕೆಡವರು ಹೊಸ ಪ್ಲಾನ್‌

ಕಾಡಾನೆಯನ್ನು ಖೆಡ್ಡಾಕ್ಕೆ ಕೆಡವರು ಹೊಸ ಪ್ಲಾನ್‌

ಇಂದಿನಿಂದ ಹೊಸ ರೀತಿಯ ಹೋರಾಟ ಆರಂಭಿಸಿದ್ದೇವೆ ಶಾಶ್ವತ ಪರಿಹಾರ ಕಂಡುಹಿಡಿಯುವವರೆಗೂ ಎಲ್ಲೆಲ್ಲಿ ಕಾಡಾನೆ ಸಂಚಾರ ಮಾಡುತ್ತವೆಯೋ ಅಲ್ಲೆಲ್ಲಾ ಕಂದಕ ತೋಡಿ ಕಾಡಾನೆಗಳನ್ನು ಖೆಡ್ಡಾಕ್ಕೆ ಕೆಡವುತ್ತೇವೆ ಎಂದಿದ್ದಾರೆ.
ಒಟ್ಟಿನಲ್ಲಿ ಕಾಡಾನೆಗಳ ಕಾಟದಿಂದ ಬೇಸತ್ತ ಸಕಲೇಶಪುರ, ಆಲೂರು, ಬೇಲೂರು ಭಾಗದ ಜನ ಕಾಡಾನೆಗಳನ್ನು ಖೆಡ್ಡಾಗೆ ಕೆಡವುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಕಂದಕ ತೋಡಿದರ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎನ್ನುವುದು ಸ್ಥಳೀಯ ರೈತರ ಆರೋಪವಾಗಿದೆ.

English summary
Hassan farmers make 20*20 feet trench for reduce wild elephant problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X