ಹಾಸನ; ಉಪಟಳ ನೀಡುತ್ತಿರುವ ಆನೆಗಳಿಗೆ ರೇಡಿಯೋ ಕಾಲರ್

ಹಾಸನ, ಜನವರಿ 21: ಅರಣ್ಯ ಇಲಾಖೆಯ ಹಾಸನ ವಿಭಾಗ ಉಪಟಳ ನೀಡುತ್ತಿರುವ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲು ತೀರ್ಮಾನಿಸಿದೆ. ಇದಕ್ಕಾಗಿ ಜನವರಿ 27ರ ತನಕ ಕಾರ್ಯಾಚರಣೆ ನಡೆಯಲಿದೆ.

ಹಾಸನ ವಿಭಾಗ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗ ಮತ್ತು ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ದಸರಾ ಆನೆ ಅಭಿಮನ್ಯು ಕಾರ್ಯಾಚರಣೆಗೆ ಸಹಾಯ ಮಾಡಲಿದ್ದಾನೆ.

ಮತ್ತಿಗೋಡು ಆನೆ ಕ್ಯಾಂಪ್‍ನಿಂದ ಅಭಿಮನ್ಯು ಸೇರಿದಂತೆ ಮೂರು ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಇದಕ್ಕಾಗಿ ಮೂವತ್ತು ಆನೆಗಳನ್ನು ಅಣಿಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Forest Department To Radio Collared Elephants

"ಈ ಕಾರ್ಯಾಚರಣೆಯ ಅವಧಿಯಲ್ಲಿ ನಿರ್ಧರಿಸಿದ ಸ್ಥಳಗಳಲ್ಲಿ ರೈತರು ಮತ್ತು ಸಾರ್ವಜನಿಕರು ಕಾರ್ಯಾಚರಣೆಗೆ ಸಹಕರಿಸಬೇಕೆಂದು" ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ. ಕೆ. ಎನ್. ಮನವಿ ಮಾಡಿದ್ದಾರೆ.

ಹಾಸನ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕಾಡಾನೆಗಳು ನಾಡಿಗೆ ಬಂದು ಬೆಳೆಗಳಿಗೆ ಹಾನಿ ಮಾಡುತ್ತಿರುವ, ರೈತರಿಗೆ ತೊಂದರೆ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ಪುಂಡಾನೆಗಳನ್ನು ಆಯ್ಕೆ ಮಾಡಿ ಅವುಗಳ ಚಲನ-ವಲನಗಳನ್ನು ಕಂಡುಹಿಡಿದು ಹಾನಿ ಮಾಡುವುದನ್ನು ತಡೆಗಟ್ಟಲು ಅನುಕೂಲವಾಗುವಂತೆ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ.

ರೇಡಿಯೋ ಕಾಲರ್ ಸಹಾಯದಿಂದ ಆನೆಗಳ ಚಲನವಲನ ತಿಳಿಯಲಿದ್ದು, ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಹಾಯಕವಾಗಲಿದೆ. ಹಾಸನ ವಿಭಾಗದ ವ್ಯಾಪ್ತಿಯಲ್ಲಿ ಈ ಹಿಂದೆ ರೇಡಿಯೋ ಕಾಲರ್ ಅಳವಡಿಸಿದ್ದ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್‌ಗಳನ್ನು ಮರು ಅಳವಡಿಸಿ ನಂತರ ಸೆರೆಹಿಡಿದ ಸ್ಥಳದಲ್ಲಿಯೇ ಬಿಡಲು ತೀರ್ಮಾನಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+