ಬೇಲೂರು : ರುದ್ರೇಶಗೌಡರ ಕುಟುಂಬಕ್ಕೆ 'ಕೈ' ಟಿಕೆಟ್ ಖಚಿತ?

Posted By:
Subscribe to Oneindia Kannada

ಬೇಲೂರು, ಏಪ್ರಿಲ್ 10: ಜಿಲ್ಲೆಯ ಅರಕಲಗೂಡು ಹಾಗೂ ಬೇಲೂರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಬಾರಿ ಘೋಷಿಸಿದ್ದಾರೆ. ಆದರೆ, ರಾಜ್ಯಸಭಾ ಚುನಾವಣೆ ವೇಳೆ ಬೇಲೂರು ಶಾಸಕ ವೈಎನ್ ರುದ್ರೇಶ್ ಗೌಡರ ನಿಧನದಿಂದ ಈಗ ಮತ್ತೊಮ್ಮೆ ಇಲ್ಲಿ ಯಾರಿಗೆ ಟಿಕೆಟ್ ಎಂಬ ಪ್ರಶ್ನೆ ಎದ್ದಿದೆ.

ಬೇಲೂರು ಕ್ಷೇತ್ರ : ಶಿಲ್ಪಕಲೆ ಬೀಡಿನಲ್ಲಿ ಮೂಲ ಸೌಕರ್ಯ ಕೊರತೆ

ರುದ್ರೇಶ್ ಗೌಡರ ಬದಲಿಗೆ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು, ಕಾರ್ಯಕರ್ತರು ಆಗ್ರಹಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಅನಾರೋಗ್ಯ ಪೀಡಿತರಾಗಿದ್ದ ವೈ.ಎನ್ ರುದ್ರೇಶ್ ಗೌಡರು ತಮ್ಮ ಸೋದರ ಕೃಷ್ಣೇಗೌಡರಿಗೆ ಕ್ಷೇತ್ರದ ಜವಾಬ್ದಾರಿ ವಹಿಸಿದ್ದರು. ತಮ್ಮನಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಲ್ಲೂ ಮನವಿ ಮಾಡಿದ್ದರು. ಆದರೆ, ರುದ್ರೇಶ್ ಗೌಡರ ನಿಧನ ನಂತರ ಅವರ ಪತ್ನಿ ಕೀರ್ತನಾ ಅವರ ಹೆಸರು ಕೇಳಿ ಬರುತ್ತಿದೆ.

Elections 2018: Y.N Rudregowda family demand ticket from Belur

ಆದರೆ, ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಮತ್ತೊಂದು ಗುಂಪು, ಬಿ. ಶಿವರಾಮ್ ಅವರ ಹೆಸರು ಸೂಚಿಸಿದೆ. ಇದಲ್ಲದೆ, ಬಿ ಶಿವರುದ್ರಪ್ಪ, ಮಾಜಿ ರಾಜ್ಯಸಭಾ ಸದಸ್ಯ ಎಚ್. ಕೆ ಜವರೇಗೌಡ, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೆಸರುಗಳ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Elections 2018: Y.N Rudregowda family demand ticket from Belur assembly constituency. Y.N Rudregowda who was aspirant of ticket from this constituency, demised recently his brother Krishnegowda and his wife Keerthana demand for ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ