ನೈಋತ್ಯ ರೈಲ್ವೆ : ಹಲವು ರೈಲುಗಳ ವೇಳಾಪಟ್ಟಿ ಬದಲು
Recommended Video

ಹಾಸನ, ನವೆಂಬರ್ 15 : ನೈಋತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಜೋಡಿ ಮಾರ್ಗದ ಕಾಮಗಾರಿ ಹಿನ್ನಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ನವೆಂಬರ್ 16
ರಿಂದ 27ರ ತನಕ ವೇಳಾಪಟ್ಟಿ ಬದಲಾಯಿಸಲಾಗಿದೆ.
ಮೈಸೂರು ವಿಭಾಗದ ಅರಸೀಕೆರೆ-ಆದಿಹಳ್ಳಿ-ಹೊನ್ನವಳ್ಳಿ-ತಿಪಟೂರು-ಕರಡಿ ರೈಲ್ವೆ ನಿಲ್ದಾಣಗಳ ಮಧ್ಯೆ ಜೋಡಿ ಹಳಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಆದ್ದರಿಂದ, ಕೆಲವು ರೈಲುಗಳ ಸಂಚಾರ ರದ್ದಾಗಿದೆ, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಸಂಪೂರ್ಣ ರದ್ದು
* ನ.22ರಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಹರಿಹರ (16577)
* ನ.23ರಂದು ಹೊರಡುವ ಹರಿಹರ-ಯಶವಂತಪುಎ (16578)
* ನ.23 ರಿಂದ 26ರ ತನಕ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಅರಸೀಕರೆ ಪ್ಯಾಸೆಂಜರ್ (56274)
* ನ.24 ರಿಂದ 27ರ ತನಕ ಅರಸೀಕರೆಯಿಂದ ಹೊರಡಬೇಕಿದ್ದ ಅರಸೀಕರೆ-ಹುಬ್ಬಳ್ಳಿ ಪ್ಯಾಸೆಂಜರ್ (56273)
* ನ.23 ರಿಂದ 26ರ ವರೆಗಿನ ಅರಸೀಕೆರೆ-ಮೈಸೂರು (56265/56566)
* ನ.23 ರಿಂದ 27ರ ವರೆಗೆ ಮೈಸೂರಿನಿಂದ ಹೊರಡಲಿದ್ದ ಮೈಸೂರು-ಅರಸೀಕೆರೆ (56268)
ಮಾರ್ಗ ಬದಲಾವಣೆ
* ನ.19ರಂದು ಯಶವಂತಪುರ-ಬರ್ಮಾರ ಎಕ್ಸ್‌ಪ್ರೆಸ್ (14805) ರೈಲು ನೆಲಮಂಗಲ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ. ಚಿಕ್ಕಬಾಣಾವರದಲ್ಲಿ ಮಾತ್ರ ನಿಲುಗಡೆ. ತುಮಕೂರಿನಿಂದ ಬರುವವರು ಚಿಕ್ಕಬಣಾವರ ಅಥವ ಅರಸೀಕೆರೆಯಲ್ಲಿ ರೈಲು ಹತ್ತಬಹುದು.
ರೈಲುಗಳ ನಿಲುಗಡೆ
* ನ.19 ರಿಂದ ನ.23ರ ತನಕ ಬೆಂಗಳೂರು ನಗರ-ಧಾರವಾಡ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (12725) ಬಾಣಸಂದ್ರ ಹಾಗೂ ಅಮ್ಮಸಂದ್ರ ನಿಲ್ದಾಣಗಳಲ್ಲಿ 20 ನಿಮಿಷ ನಿಲ್ಲಲಿದೆ.
* ನ.23ರಂದು ತಿರುಚಿನಾಪಳ್ಳಿ-ಶ್ರೀ ಗಂಗಾನಗರ ಎಕ್ಸ್‌ಪ್ರೆಸ್ (22498) ಬಾಣಸಂದ್ರದಲ್ಲಿ 40 ನಿಮಿಷ ನಿಲ್ಲಲಿದೆ.
* ನವೆಂಬರ್ 24 ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (56269) ರೈಲು ಬಾಣವರ ನಿಲ್ದಾಣದಲ್ಲಿ 30 ನಿಮಿಷ ನಿಲ್ಲಲಿದೆ.
ಸಮಯ ಪರಿಷ್ಕರಣೆ
* ನವೆಂಬರ್ 17 ರಿಂದ 19ರ ತನಕ ಶಿವಮೊಗ್ಗ-ಬೆಂಗಳೂರು ನಗರ (56228) ರೈಲು 120 ನಿಮಿಷ ತಡ. ನವೆಂಬರ್ 22 ರಂದು 60 ನಿಮಿಷ, ನವೆಂಬರ್ 27ರಂದು 80 ನಿಮಿಷ ವಿಳಂಬ
* ನವೆಂಬರ್ 21ರಂದು ಬೆಂಗಳೂರು ನಗರ-ಹುಬ್ಬಳ್ಳಿ ಪ್ಯಾಸೆಂಜರ್ (56913) ರೈಲು 45 ನಿಮಿಷ ತಡ. ನ.21ರಂದು ಮೈಸೂರು-ಅರಸೀಕೆರೆ ಪ್ಯಾಸೆಂಜರ್ಸ (56266) ನಿಮಿಷ ತಡ.
* ಅರಸೀಕೆರೆ-ಮೈಸೂರು ಪ್ಯಾಸೆಂಜರ್ (56265) 60 ನಿಮಿಷ ತಡ












Click it and Unblock the Notifications