ಇನ್ಶೂರೆನ್ಸ್ ಹಣಕ್ಕಾಗಿ ದಂಪತಿಯಿಂದ ಖತರ್ನಾಕ್ ಪ್ಲಾನ್: ಅಮಾಯಕ ಬಲಿ!
ಹಾಸನ ಆಗಸ್ಟ್ 24: ದಂಪತಿ ಇನ್ಶೂರೆನ್ಸ್ ಹಣಕ್ಕಾಗಿ ಅಮಾಯಕನನ್ನು ಕೊಂದು ಖತರ್ನಾಕ್ ಪ್ಲ್ಯಾನ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ತನ್ನನ್ನೆ ಹೋಲುವ ವ್ಯಕ್ತಿಯ ಪರಿಚಯ ಮಾಡಿಕೊಂಡ ದಂಪತಿ, ಆತನ್ನು ಆಕ್ಸಿಡೆಂಟ್ ರೀತಿ ಕೊಲೆ ಮಾಡಿ, ನಂತರ ಇನ್ಶೂರೆನ್ಸ್ ಹಣ ಪಡೆಯಲು ಮುಂದಾಗಿದ್ದಾರೆ.
ಹೌದು... ಇನ್ಶೂರೆನ್ಸ್ ಹಣಕ್ಕಾಗಿ ಪತಿ-ಪತ್ನಿ ಅಮಾಯಕನನ್ನು ಕೊಂದು ಹಾಕಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಬೆಂಗಳೂರಿನ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗದ ಮುನಿಶ್ವಾಮಿಗೌಡ ಮತ್ತು ಆತನ ಪತ್ನಿ ಶಿಲ್ಪಾರಾಣಿಯಿಂದ ಈ ಕೃತ್ಯ ನಡೆದಿದೆ.

ಕೋಟಿ ಹಣಕ್ಕಾಗಿ ತನ್ನ ಪತಿ ಮುನಿಸ್ವಾಮಿಗೌಡ ಆಕ್ಸಿಡೆಂಟ್‌ನಲ್ಲಿ ಸತ್ತ ಎಂದು ಪತ್ನಿ ಶಿಲ್ಪಾರಾಣಿ ನಾಟಕವಾಡಿದ್ದಾಳೆ. ಇದಕ್ಕಾಗಿ ಮುನಿಸ್ವಾಮಿಗೌಡನನ್ನು ಹೋಲುವ ರೀತಿಯಿದ್ದವನ ಶಿಡ್ಲಘಟ್ಟಕ್ಕೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಅಲ್ಲಿ ಮುನಿಸ್ವಾಮಿಗೌಡ ಕಾರು ಪಂಕ್ಚರ್ ಆಗಿದೆ ಟೈರ್ ಬದಲಿಸು ಅಂತ ಅಮಾಯಕನಿಗೆ ಹೇಳಿದ್ದಾನೆ.
ರಸ್ತೆ ಪಕ್ಕ ಕಾರು ನಿಲ್ಲಿಸಿಕೊಂಡು ಟೈರ್ ಬದಲಿಸುವಾಗ ಅಮಾಯಕ ವ್ಯಕ್ತಿ ಮೇಲೆ ಲಾರಿಯನ್ನು ಹರಿಸಲಾಗಿದೆ. ಮೊದಲೇ ಅಮಾಯಕನ ಮೇಲೆ ಲಾರಿ ಹರಿಸಿ ಕೊಲ್ಲಲು ಲಾರಿ ಮತ್ತು ಚಾಲಕನನ್ನು ಮುನಿಶ್ವಾಮಿಗೌಡ ಬುಕ್ ಮಾಡಿಕೊಂಡಿದ್ದಾನೆ. ಸುಫಾರಿಯಂತೆ ಲಾರಿ ಚಾಲಕ ರಸ್ತೆ ಪಕ್ಕ ಕಾರು ನಿಲ್ಲಿಸಿಕೊಂಡು ಟೈರ್ ಬದಲಿಸುವಾಗ ಅಮಾಯಕ ವ್ಯಕ್ತಿ ಮೇಲೆ ಲಾರಿಯನ್ನು ಹರಿಸಿದ್ದಾನೆ. ಆಗಸ್ಟ್ 12ರ ರಾತ್ರಿ ಅಪಘಾದ ರೀತಿ ಅಮಾಯಕನ ಕೊಲೆ ನಡೆದಿದೆ. ಮುನಿಶ್ವಾಮಿಗೌಡ ಅಮಾಯಕ ಸತ್ತ ನಂತರ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಬಳಿಕ ಜಿಲ್ಲಾಸ್ಪತ್ರೆಗೆ ಮೃತ ಅಮಾಯಕನ ಬಾಡಿ ಶಿಫ್ಟ್ ಮಾಡಲಾಗಿತ್ತು. ಮುನಿಶ್ವಾಮಿಗೌಡನ ಪತ್ನಿ ಶಿಲ್ಪಾರಾಣಿ ನನ್ನ ಪತಿ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಶಿಲ್ಪಾರಾಣಿಗೆ ಮೃತದೇಹವನ್ನು ಪೊಲೀಸರು ಕೊಟ್ಟಿದ್ದಾರೆ. ಎಲ್ಲವೂ ದಂಪತಿ ಅಂದುಕೊಂಡಂತೆ ನಡೆದಿದೆ.
ಚಿಕ್ಕಕೋಲಿಗದಲ್ಲಿ ಶಿಲ್ಪಾರಾಣಿ ಅಮಾಯಕನ ಶವವನ್ನು ಅಂತ್ಯಸಂಸ್ಕಾರ ಮಾಡಿ ಬಂದಿದ್ದಾಳೆ. ಈ ವೇಳೆ ಮುನಿಶ್ವಾಮಿಗೌಡನ ಪತ್ನಿ ಶಿಲ್ಪಾರಾಣಿ ಸಂಬಂಧಿಕರೆಲ್ಲಾ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಮೂರ್ನಾಲ್ಕು ದಿನದ ನಂತರ ಮುನಿಶ್ವಾಮಿಗೌಡ ತನ್ನ ಸಂಬಂಧಿ ಪೊಲೀಸ್ ಇನ್ಸ್ ಪೆಕ್ಟರ್ ಶಿಡ್ಲಘಟ್ಟದ ಶ್ರೀನಿವಾಸ್ ಎದುರು ಪ್ರತ್ಯಕ್ಷನಾಗಿದ್ದಾನೆ. ಸತ್ತವನು ಎದ್ದು ಬಂದನಾ ಅಂತ ಶಾಕ್ ಆಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಶಾಕ್ ಆಗಿದ್ದರು. ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತನ್ನ ಸಂಬಂಧಿ ಎಂಬ ಕಾರಣಕ್ಕೆ ಮುನಿಶ್ವಾಮಿಗೌಡ ತನ್ನ ನಾಟದ ಬಗ್ಗೆ ಎಲ್ಲವನ್ನೂ ಹೇಳಿಕೊಂಡಿದ್ದಾನೆ.
ಇನ್ಸ್ ರೆನ್ಸ್ ಕ್ಲೈಮ್ ಮಾಡಲು ಸಾಲ ತೀರಿಸಿಕೊಳ್ಳಲು ಬೇರೆಯವನ ಸಾಯಿಸಿ ನಾನೇ ಸತ್ತು ಹೋಗಿರುವ ರೀತಿ ಮಾಡಿರುವುದನ್ನು ಮುನಿಶ್ವಾಮಿಗೌಡ ವಿವರಿಸಿದ್ದಾನೆ. ಆಗ ಶಿಡ್ಲಘಟ್ಟ ಇನ್ಸ್ ಪೆಕ್ಟರ್ ಶ್ರೀನಿವಾಸ್ ಸಂಬಂಧಿ ಎನ್ನುವ ಮುಲಾಜಿಲ್ಲದೆ ಗಂಡಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ನಂತರ ಮುನಿಶ್ವಾಮಿಗೌಡನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಗಂಡಸಿ ಪೊಲೀಸರು ಪತ್ನಿ ಶಿಲ್ಪಾರಾಣಿ ಹಾಗೂ ಪತಿ ಮುನಿಶ್ವಾಮಿಗೌಡ ನ ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಅಮಾಯಕನನ್ನು ಕೊಂದು ನಾಟಕ ಮಾಡಿ ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕೆ ಪ್ಲಾನ್ ಮಾಡಿದ್ದನ್ನು ದಂಪತಿ ಒಪ್ಪಿಕೊಂಡಿದ್ದಾರೆ.












Click it and Unblock the Notifications