ಕಾಲೇಜಿನಿಂದ ಡಿಬಾರ್: ವಿದ್ಯಾರ್ಥಿನಿ ಆತ್ಮಹತ್ಯೆ

Posted By: Nayana
Subscribe to Oneindia Kannada

ಹಾಸನ, ಡಿಸೆಂಬರ್ 06 : ಸಣ್ಣ ವಿಷಯಕ್ಕೆ ಶಿಕ್ಷಕರು ಮಾಡಿದ ಎಡವಟ್ಟಿಗೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೋಡಿನಲ್ಲಿ ನಡೆದಿದೆ.

ಸಹಪಾಠಿ ಜತೆ ಮಾತಾಡಿದ್ದಕ್ಕೆ ಫೋಟೊ ತೆಗೆದು ಶಿಕ್ಷಕರು ವಿದ್ಯಾರ್ಥಿನಿ ಪೋಷಕರಿಗೆ ತೋರಿಸಿದ್ದಾರೆ. ಸಹಪಾಠಿ ಹುಡುಗನೊಂದಿಗೆ ಮಾತನಾಡಿದ ಆರೋಪ ಮಾಡಿ ಪ್ರಾಧ್ಯಾಪಕರು ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಡಿಬಾರ್ ಮಾಡಿದ್ದಾರೆ.

College debars student commit suicide

ನೊಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೌಂದರ್ಯ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಹಾಸನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಸೌಂದರ್ಯ, ಸಹಪಾಠಿ ಜತೆ ಮಾತಾಡಿದ್ದಕ್ಕೆ ಫೋಟೊ ತೆಗೆದು ಶಿಕ್ಷಕರು ವಿದ್ಯಾರ್ಥಿನಿ ಪೋಷಕರಿಗೆ ತೋರಿಸಿದ್ದಾರೆ.

ಅಷ್ಟೇ ಅಲ್ಲದೆ ಕಾಲೇಜಿನಿಂದ ಡಿಬಾರ್ ಮಾಡಿದ್ದಾರೆ. ಇದರಿಂದ ಮನನೊಂದು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ಮುಚ್ಚಿ ಹಾಕುವಂತೆ ಹುನ್ನಾರ ನಡೆಯುತ್ತಿದ್ದು, ತನಿಖೆ ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A seventeen years old student committed suicide while she was debarred from the college alleging that the girl had conversation with student boy in the college.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ