ಲೋಕಸಭೆ ಚುನಾವಣೆಗೆ ಮುಂಚೆ ಮೈತ್ರಿ ಸರ್ಕಾರ ಬೀಳುತ್ತೆ: ಸದಾನಂದಗೌಡ
Recommended Video

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಡಿ ವಿ ಸದಾನಂದ ಗೌಡ | Oneindia Kannada
ಹಾಸನ, ಜೂನ್ 05: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದರೆ ಬಿಜೆಪಿಯು ಸರ್ಕಾರ ರಚಿಸುತ್ತದೆ ಎಂದು ಕೇಂದ್ರ ಮಂತ್ರಿ ಡಿವಿ ಸದಾನಂದಗೌಡ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ನಿಪಾಹ್ ವೈರಸ್ ಅಂಟಿಕೊಂಡಿದೆ ಅದು ಯಾವಾಗ ಬೇಕಾದರೂ ಬೀಳಬಹುದು ಎಂದು ಕುಹುಕವಾಡಿದರು.
ಮೈತ್ರಿ ಸರ್ಕಾರವು ಸಂಪುಟ ವಿಸ್ತರಣೆ ಬಿಕ್ಕಟ್ಟಿನಲ್ಲಿ ಸಿಲುಕಿರುವ ಈ ಹೊತ್ತಿನಲ್ಲಿ ಸದಾನಂದಗೌಡ ಅವರು ಈ ರೀತಿಯ ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ. ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡವರಿಗೆ ಬಿಜೆಪಿ ಗಾಳ ಹಾಕಲಿದೆಯೇ ಎಂಬ ಪ್ರಶ್ನೆಯೂ ಇದರಿಂದ ಏಳುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಅಲ್ಲಿವರೆಗೆ ಸರ್ಕಾರ ಉಳಿದರೆ ತಾನೇ ಆ ಪ್ರಶ್ನೆ ಬರುವುದು ಲೋಕಸಭೆ ಚುನಾವಣೆಗೆ ಮುಂಚೆಯೇ ಮೈತ್ರಿ ಸರ್ಕಾರ ಉರುಳಿ ಬೀಳಲಿದೆ ಎಂದು ಅವರು ಹೇಳಿದರು.












Click it and Unblock the Notifications