Amit Shah road show: ಹಾಸನ ಜಿಲ್ಲೆಯಲ್ಲೂ ಅಮಿತ್ ಶಾ ರೋಡ್ ಶೋ: ಸಮಯದ ವಿವರ ಇಲ್ಲಿದೆ
ಹಾಸನ, ಏಪ್ರಿಲ್, 24: ವಿಧಾನಸಭಾ ಚುಣಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ರಾಜ್ಯಕ್ಕೆ ಆಗಮಿಮಿಸಿದ್ದಾರೆ. ಅವರು ಈಗಾಗಲೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ರೋ ಶೋನಲ್ಲಿ ಭಾಗಿಯಾಗಿದ್ದಾರೆ. ಬಳಿಕ ಹಾಸನ ಜಿಲ್ಲೆಗೂ ಭೇಟಿ ನೀಡಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಸಕಲೇಶಪುರ- ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಪರ ರೋಡ್ ಶೋ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಆಲೂರು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಕೇಂದ್ರ ಗೃಹ ಸಚಿವರು ಆಗಮಿಸಲಿದ್ದು, ಮಧ್ಯಾಹ್ನ 3:10 ಕ್ಕೆ ಆಲೂರು ಕ್ರೀಡಾಂಗಣದಿಂದ ರೋಡ್ ಶೋ ನಡೆಸಲಿದ್ದಾರೆ. ಸಂಜೆ 4:05 ರವರೆಗೆ ರೋಡ್ ಶೋನಲ್ಲಿ ಭಾಗಿಯಾಗಲಿರುವ ಚುನಾವಣಾ ಚಾಣುಕ್ಯ, ಅಭ್ಯರ್ಥಿ ಪರ ಮತಯಾಚನೆ ಮಾಡಲಿದ್ದಾರೆ.

ಅಮಿತ್ ಶಾ ಸುಮಾರು ಅರ್ಧ ಕಿಲೋ ಮೀಟರ್‌ಗೂ ಹೆಚ್ಚು ದೂರ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆ ರಸ್ತೆಯ ಎರಡು ಬದಿಗಳಲ್ಲೂ ಬ್ಯಾರೆಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಆಲೂರು ಪಟ್ಟಣದೊಳಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ರೋಡ್ ಶೋ ಮುಗಿಸಿಕೊಂಡು ಸಂಜೆ 4:15ಕ್ಕೆ ಆಲೂರು ಕ್ರೀಡಾಂಗಣದ ಹೆಲಿಪ್ಯಾಡ್‌ನಿಂದ ಮೈಸೂರಿಗೆ ತೆರಳಲಿದ್ದಾರೆ. ವಿಶೇಷ ಎಂದರೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಅರಕಲಗೂಡಿಗೆ ಬಂದಿದ್ದ ಅಮಿತ್ ಶಾ, ಐದು ವರ್ಷಗಳ ಬಳಿಕ ಮತ್ತೆ ಹಾಸನ ಜಿಲ್ಲೆಗೆ ಆಗಮಿಸುತ್ತಿದ್ದಾರೆ.












Click it and Unblock the Notifications