ಅಸ್ಸಾಂ: 7 ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ

ಗುವಾಹಟಿ, ಏಪ್ರಿಲ್ 28: ಈಶಾನ್ಯ ರಾಜ್ಯಗಳ ಹೆಬ್ಬಾಗಿಲು ಆಗಿರುವ ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ರತನ್ ಟಾಟಾ ಅವರು 7 ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗಳನ್ನು ಉದ್ಫಾಟಿಸಿದರು.

ಅಸ್ಸಾಂನ ದಿಬ್ರುಗಢದಲ್ಲಿ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟಿಸಿದ್ದು, ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿವೆ. ದಿಬ್ರುಗಢ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಆಸ್ಪತ್ರೆ ಉದ್ಫಾಟನೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, "ಇದೀಗ ಅಸ್ಸಾಂನಲ್ಲಿ 7 ಆಸ್ಪತ್ರೆಗಳನ್ನು ಉದ್ಫಾಟಿಸಿದ್ದೇವೆ. ಇನ್ನೂ ಕೆಲ ತಿಂಗಳಲ್ಲಿ ಮತ್ತೆ 3 ನೂತನ ಆಸ್ಪತ್ರೆಗಳು ನಿಮ್ಮ ಸೇವೆಗೆ ಸಿದ್ಧಗೊಳ್ಳಲಿದೆ. ಈ ಹಿಂದೆ ಒಂದು ಆಸ್ಪತ್ರೆ ತೆರೆಯಲು ಸಾಕಷ್ಟು ವರ್ಷಗಳು ಆಗುತ್ತಿತ್ತು. ಆದರೆ ಇದೀಗ ಬದಲಾವಣೆಯಾಗಿದೆ. ಸರ್ಕಾರ ಜನರ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದೆ," ಎಂದರು.

PM Narendra Modi and Ratan Tata Inaugurated 7 Sophisticated Cancer Hospital in Assam

"ದೇಶದಲ್ಲಿ ಕ್ಯಾನರ್ ಟೆಸ್ಟಿಂಗ್ ಆಸ್ಪತ್ರೆಗಳನ್ನು ಇನ್ನಷ್ಟು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ. ದೇಶದ ಜನರ ಆರೋಗ್ಯದ ಬಗ್ಗೆ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ನಮ್ಮ ಸರ್ಕಾರ ಕೂಡ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದು, ಇದರ ಜೊತೆಗೆ ಯೋಗ, ಫಿಟ್ನೆಸ್ ಮತ್ತು ಸ್ವಚ್ಛತೆಯ ಬಗ್ಗೆ ಮಹತ್ವ ನೀಡುತ್ತಿದ್ದೇವೆ," ಎಂದು ಮೋದಿ ತಿಳಿಸಿದರು.

ಉದ್ಯಮಿ ರತನ್ ಟಾಟಾ ಮಾತನಾಡಿ, "ನನ್ನ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತಿದ್ದೇನೆ. ಕೇಂದ್ರ ಸರ್ಕಾರದ ಈ ಕೆಲಸ ಕಾರ್ಯಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ," ಎಂದು ಹೇಳಿದರು.

PM Narendra Modi and Ratan Tata Inaugurated 7 Sophisticated Cancer Hospital in Assam

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಟಾಟಾ ಗ್ರೂಪ್ಸ್ ಮತ್ತು ಕೇಂದ್ರ ಸರ್ಕಾರದ ನೆರವಿನಿಂದ ರಾಜ್ಯದಲ್ಲಿ ಏಷ್ಯಾದ ದೊಡ್ಡ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಉದ್ಫಾಟನೆಗೊಂಡಿದೆ. ನಾನು ಕೇಂದ್ರ ಸರ್ಕಾರ ಮತ್ತು ರತನ್ ಟಾಟಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಆಸ್ಸಾಂನಲ್ಲಿ ಸ್ಥಾಪಿಸಲಾಗಿರುವ ಕ್ಯಾನ್ಸರ್ ಆಸ್ಪತ್ರೆ ಸರ್ಕಾರ ಮತ್ತು ಟಾಟಾ ಗ್ರೂಪ್ಸ್ ಸಹಭಾಗಿತ್ವದಲ್ಲಿ ಆರಂಭವಾಗಿದ್ದು, ಈಗಾಗಲೇ ದೇಶದಾದ್ಯಂತ 17 ಕ್ಯಾನ್ಸರ್ ಕೇರ್ ಆಸ್ಪತ್ರೆಗಳು ಕಾರ್ಯಚರಿಸುತ್ತಿವೆ. ಇದೀಗ ಅಸ್ಸಾಂನಲ್ಲಿ 7 ಆಸ್ಪತ್ರೆಗಳು ಉದ್ಫಾಟನೆಗೊಂಡಿದ್ದು, ಇನ್ನೂ 7 ಆಸ್ಪತ್ರೆಗಳ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

PM Narendra Modi and Ratan Tata Inaugurated 7 Sophisticated Cancer Hospital in Assam

ಧುಬ್ರಿ, ನಲ್ಬರಿ, ಗೋಲ್ಪಾರಾ, ನಾಗಾಂವ್, ಶಿವಸಾಗರ್, ತಿನ್ಸುಕಿಯಾ ಮತ್ತು ಗೋಲಾಘಾಟ್‍ನಲ್ಲಿ ಕ್ಯಾನ್ಸರ್ ಕೇರ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+