ಈಶಾನ್ಯ ರಾಜ್ಯ ತ್ರಿಪುರದಲ್ಲಿಯೂ ಕೊರೊನಾ ಸುಂಟರಗಾಳಿ

ಅಗರ್ತಲಾ, ಮೇ 31: ಈಶಾನ್ಯ ರಾಜ್ಯ ತ್ರಿಪುರದಲ್ಲಿಯೂ ಕೊರೊನಾವೈರಸ್ ಸೋಂಕು ಏರುತ್ತಿದೆ. ಒಂದೇ ವಾರದಲ್ಲಿ 200 ಪ್ರಕರಣಗಳು ಕಂಡು ಬಂದಿರುವುದು ಆ ರಾಜ್ಯವನ್ನು ಆತಂಕಕ್ಕೆ ದೂಡಿದೆ.

ಅಲ್ಲಿನ ಮುಖ್ಯಮಂತ್ರಿ ನೀಡಿರುವ ಮಾಹಿತಿ ಪ್ರಕಾರ, ಇದುವರೆಗೆ ತ್ರಿಪುರದಲ್ಲಿ ಕೊರೊನಾವೈರಸ್‌ಗೆ ತುತ್ತಾದವರ ಸಂಖ್ಯೆ 280 ಕ್ಕೆ ತಲುಪಿದೆ. ಭಾನುವಾರ ಒಂದೇ ದಿನ 11 ಪ್ರಕರಣಗಳು ಪಾಸಿಟಿವ್ ಬಂದಿವೆ. ವಿಶೇಷವೆಂದರೆ ಈ 11 ಜನರೂ ಚೆನ್ನೈನಿಂದ ತ್ರಿಪುರಕ್ಕೆ ಮರಳಿದವರಾಗಿದ್ದಾರೆ.

ತ್ರಿಪುರ ರಾಜ್ಯವು ಈವರೆಗೆ ಒಟ್ಟು 26,376 ವ್ಯಕ್ತಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದು, ಸೋಂಕಿತ 280 ಜನರಲ್ಲಿ 172 ಮಂದಿಯನ್ನು ಈವರೆಗೆ ಗುಣಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಇತರ ರಾಜ್ಯಗಳಿಂದ ಬರುವ ಎಲ್ಲ ವ್ಯಕ್ತಿಗಳ ಪರೀಕ್ಷಿಸಲು ತಮ್ಮ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ದೇಬ್ ಹೇಳಿದ್ದಾರೆ.

 Coronavirus Positive Cases Increasing In Tripura State

"ವಿಶೇಷವಾಗಿ ಬಾಂಗ್ಲಾದೇಶ ಮತ್ತು ಮಹಾರಾಷ್ಟ್ರ ಹಿಂದಿರುಗಿದವರ ಪರೀಕ್ಷಿಸಲಾಗುತ್ತಿದೆ. ಅವರನ್ನು ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. ಇತರ ರಾಜ್ಯಗಳಿಂದ ಬರುವ ಎಲ್ಲರಿಗೂ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲು ಸರ್ಕಾರ ಯೋಜಿಸುತ್ತಿದೆ "ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+